ಹೈದರಾಬಾದ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಲ್ಲಿ ಮೊದಲನೇ ಟೆಸ್ಟ್ ನಂತರ ಭಾರತಕ್ಕೆ ಮರಳಲಿದ್ದು, ಇದು ಆಸ್ಟ್ರೇಲಿಯಾ ತಂಡಕ್ಕೆ ವರದಾನವಾಗಲಿದೆ ಎಂದು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
ವಿರಾಟ್ ಏಕದಿನ ಮತ್ತು ಟಿ-20 ಸರಣಿ ಆಡಲಿದ್ದು, ಟೆಸ್ಟ್ ಸರಣಿಯಲ್ಲಿ ಒಂದು ಟೆಸ್ಟ್ ಆಡಲಿದ್ದು ನಂತರ ಪಿತೃತ್ವ ರಜೆ ಮೇಲೆ ಭಾರತಕ್ಕೆ ವಾಪಸ್ ಆಗಲಿದ್ದಾರೆ.
ವಿರಾಟ್ ನಿರ್ಗಮದಿಂದ ಟೆಸ್ಟ್ ಸರಣಿಯನ್ನು ಕಾಂಗರೂ ಪಡೆ 4 - 0 ದಿಂದ ಸುಲಭವಾಗಿ ಗೆಲ್ಲಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.
"ಏಕದಿನ ಮತ್ತು ಟಿ -20 ಸರಣಿಯಲ್ಲಿ ವಿರಾಟ್ ಕೊಹ್ಲಿ ನೆತೃತ್ವದಲ್ಲಿ ಟೀಮ್ ಇಂಡಿಯಾ ಆಸೀಸ್ಗೆ ಪೈಪೋಟಿ ನೀಡಲಿದೆ" ಎಂದು ಕ್ಲಾರ್ಕ್ ಹೇಳಿದರು.
"ಏಕದಿನ ಮತ್ತು ಟಿ-20 ಗಳಲ್ಲಿ ಭಾರತವು ಯಶಸ್ಸ ಹೊಂದಿದರು, ಅವರು ಟೆಸ್ಟ್ ಪಂದ್ಯಗಳಲ್ಲಿ ತೀವ್ರ ತೊಂದರೆ ಅನುಭವಿಸಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಇನ್ನೂ ಹೆಚ್ಚಿನ ಒತ್ತಡ ಬಿಳಲಿದ್ದು, ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿಯನ್ನು 4-0 ದಿಂದ ಕ್ಲೀನ್ ಸ್ವೀಪ್ ಮಾಡಲಿದೆ ಎಂದಿದ್ದಾರೆ.
ಇನ್ನೂ ಜಸ್ಪ್ರಿತ್ ಬುಮ್ರಾ ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ. ಅವನು ಕಾಂಗರೂ ನಾಡಲ್ಲಿ ತನ್ನ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲ. ಇವರ ವಿಶಿಷ್ಟ ಬೌಲಿಂಗ್ ಶೈಲಿಯೇ ಇವರ ಪ್ರಮುಖ ಅಸ್ತ್ರವಾಗಿದೆ ಎಂದಿದ್ದಾರೆ. ಇವರು ಯಾವುದೇ ಸಮಯದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದು, ಆಸೀಸ್ ತಂಡದ ಸ್ಟಾರ್ ಗಳಿಗೆ ಕಂಟಕವಾಗಲಿದ್ದಾರೆ ಎಂದರು.