ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಬಂಗಾಳದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, ರಿಷಭ್ ಪಂತ್ ಜಾಗದಲ್ಲಿ ಆಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಿಷಭ್ ಪಂತ್ ಯುವ ವಿಕೆಟ್ ಕೀಪರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಬೇಕಾದರೆ ಆತ ಕಲಿಯಬೇಕಾದದ್ದು ಸಾಕಷ್ಟಿದೆ. ಸೀಮಿತ ಓವರ್ಗಳಲ್ಲೂ ಅಸ್ಥಿರತೆಯಿಂದ ಬ್ಯಾಟಿಂಗ್ ನಡೆಸಿ, ಕೆಟ್ಟ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸಿ ತಂಡದ ಇತರ ಆಟಗಾರರ ಮೇಲೂ ಒತ್ತಡ ತರುತ್ತಿದ್ದಾರೆ. ಹೀಗಾಗಿ ಪಂತ್ ಬದಲು ಸಹಾರನ್ನು ಎರಡನೇ ಟೆಸ್ಟ್ ಆಡಿಸಬೇಕು ಎಂದಿದ್ದಾರೆ.
ಪಂತ್ಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅವಕಾಶ ಸಿಕ್ಕಿದ್ದು ದೇವರು ಕೊಟ್ಟ ಉಡುಗೊರೆ, ಏಕೆಂದರೆ ವೃದ್ಧಿಮಾನ್ ಸಹಾ ಗಾಯಗೊಂಡ ಕಾರಣ ವಿಕೆಟ್ ಕೀಪರ್ ಅನಿವಾರ್ಯತೆಯಾದ ಕಾರಣ ಪಂತ್ ತಂಡಕ್ಕೆ ಸೇರ್ಪಡೆಯಾದರು. ಆದರೆ, ಆತ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಜಾಗ ತುಂಬಲು ಕಷ್ಟಪಡುತ್ತಿದ್ದಾನೆ. ಎಲ್ಲರಿಂದಲೂ ಗ್ಲೌಸ್ ತೊಟ್ಟು ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಕ್ಷೇತ್ರ ರಕ್ಷಣೆಯಲ್ಲಿ ವಿಕೆಟ್ ಕೀಪಿಂಗ್ ಅತ್ಯಂತ ಕಠಿಣ ಜಾಗ ಎಂದು ಕೀರ್ಮಾನಿ ತಿಳಿಸಿದ್ದಾರೆ.
ಸಹಾ ಗಾಯದ ಸಮಸ್ಯೆ ಕಾರಣದಿಂದ ಅನಿವಾರ್ಯವಾಗಿ ತಂಡದಿಂದ ಹೊರಬಿದ್ದಿದ್ದರು. ಇದೀಗ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿ ಬಂದಿದ್ದಾರೆ. ಅವರಿಗೂ ಸರಿ ಸಮನಾದ ಅವಕಾಶ ಕಲ್ಪಿಸಿಕೊಡಬೇಕು ತಾನೆ? ಎಂದು ಕೀರ್ಮಾನಿ ಪ್ರಶ್ನಿಸಿದ್ದಾರೆ.
ನಮಗೆ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡನ್ನೂ ನಿಭಾಯಿಸಬಲ್ಲ ವಿಕೆಟ್ ಕೀಪರ್ ಬೇಕಾಗಿದೆ. ಹಾಗಾಗಿ ಸಹಾಗೆ ಒಂದು ಅವಕಾಶ ನೀಡಬೇಕು ಎಂದು ಕೀರ್ಮಾನಿ ತಿಳಿಸಿದ್ದಾರೆ.
ಜೊತಗೆ ಧೋನಿ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಧೋನಿ ನಿವೃತ್ತಿಯ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರನ್ನು ಏಕಾಂಗಿಯಾಗಿ ಬಿಡಿ, ಅವರಿಗೆ ಗೊತ್ತಿದೆ ಯಾವ ಸಮಯದಲ್ಲಿ ನಿವೃತ್ತಿಯಾಗಬೇಕೆಂದು, ಮೊದಲು ಇದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕೀರ್ಮಾನಿ ಧೋನಿ ನಿವೃತ್ತಿ ಬಯಸುವವರ ಬಾಯಿ ಮುಚ್ಚಿಸಿದ್ದಾರೆ.