ಚೆನ್ನೈ: ಭಾರತ ತಂಡದಿಂದ ಇತ್ತೀಚೆಗೆ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಮುಂಬೈ ಆಲ್ರೌಂಡರ್ ಶಿವಂ ದುಬೆ ವಿಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ಗೆ ಪ್ರವೇಶ ಪಡೆದಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ 26 ವರ್ಷದ ದುಬೆ ಇಂದು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಏಕದಿನ ಕ್ರಿಕೆಟ್ಗೆ ಭಾರತದ 228ನೇ ಕ್ರಿಕೆಟಿಗನಾಗಿ ಪಾದಾರ್ಪಣೆ ಮಾಡಿದರು.
-
Congratulations @IamShivamDube on the ODI debut! 🔥#INDvWI #TeamIndia pic.twitter.com/lmgsYfRvVU
— BCCI (@BCCI) December 15, 2019 " class="align-text-top noRightClick twitterSection" data="
">Congratulations @IamShivamDube on the ODI debut! 🔥#INDvWI #TeamIndia pic.twitter.com/lmgsYfRvVU
— BCCI (@BCCI) December 15, 2019Congratulations @IamShivamDube on the ODI debut! 🔥#INDvWI #TeamIndia pic.twitter.com/lmgsYfRvVU
— BCCI (@BCCI) December 15, 2019
ವಿಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಏಕದಿನ ಕ್ರಿಕೆಟ್ನಲ್ಲೂ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ದುಬೆ ಮುಂಬೈ ಪರ 34 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. 23 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, 1 ಶತಕ ಹಾಗೂ 1 ಅರ್ಧಶತಕ ಸಹಿತ 614 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 35 ವಿಕೆಟ್ ಪಡೆದಿದ್ದಾರೆ.