ETV Bharat / sports

ಏಕದಿನ ತಂಡಕ್ಕೂ ಶಿಖರ್​​​​​ ಧವನ್​ ಅಲಭ್ಯ... ಕೆ.ಎಲ್​​.ರಾಹುಲ್​​ಗೆ ಚಾನ್ಸ್​​​​​​​? - ರಾಹುಲ್-ಧವನ್​- ಗಿಲ್​

ವರದಿಗಳ ಪ್ರಕಾರ ಶಿಖರ್​ ಧವನ್​ ಸಯ್ಯದ್ ಮುಷ್ತಾಕ್​ ಅಲಿ ಟಿ-20 ಟೂರ್ನಮೆಂಟ್​ನಲ್ಲಿ ಪಾಲ್ಗೊಂಡಿದ್ದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ವೆಸ್ಟ್ ಇಂಡೀಸ್​ ವಿರುದ್ಧದ ಟಿ-20 ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಗಾಯದಿಂದ ಸಂಪೂರ್ಣ ಚೇತರಿಕೆ ಕಂಡುಬಂದಿಲ್ಲವಾದ್ದರಿಂದ ಬಿಸಿಸಿಐ ವೈದ್ಯರ ತಂಡ ಇನ್ನು ಕೆಲವು ದಿನಗಳ ವಿಶ್ರಾಂತಿಗೆ ಸೂಚಿಸಿದೆ.

India vs West Indies
India vs West Indies
author img

By

Published : Dec 10, 2019, 1:05 PM IST

ಮುಂಬೈ: ಭಾರತ ತಂಡದ ಎಡಗೈ ಓಪನರ್​ ಶಿಖರ್​ ಧವನ್​ ಏಕದಿನ ತಂಡದಿಂದಲೂ ಹೊರಗುಳಿಯುವ ಸಾಧ್ಯತೆಯಿದ್ದು, ಕನ್ನಡಿಗ ಕೆ.ಎಲ್.ರಾಹುಲ್​ಗೆ ಏಕದಿನ ಸರಣಿಯಲ್ಲೂ ಆರಂಭಿಕನಾಗುವ ಅವಕಾಶ ಲಭಿಸಿದೆ.

ವರದಿಗಳ ಪ್ರಕಾರ ಶಿಖರ್​ ಧವನ್​ ಸಯ್ಯದ್ ಮುಷ್ತಾಕ್​ ಅಲಿ ಟಿ-20 ಟೂರ್ನಮೆಂಟ್​ನಲ್ಲಿ ಪಾಲ್ಗೊಂಡಿದ್ದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ವೆಸ್ಟ್ ಇಂಡೀಸ್​ ವಿರುದ್ಧದ ಟಿ-20 ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಗಾಯದಿಂದ ಸಂಪೂರ್ಣ ಚೇತರಿಕೆ ಕಂಡುಬಂದಿಲ್ಲವಾದ್ದರಿಂದ ಬಿಸಿಸಿಐ ವೈದ್ಯರ ತಂಡ ಇನ್ನು ಕೆಲವು ದಿನಗಳ ವಿಶ್ರಾಂತಿಗೆ ಸೂಚಿಸಿದೆ.

ಇದೀಗ ಧವನ್​ ಜಾಗದಲ್ಲಿ ಟಿ-20 ಸರಣಿಯಲ್ಲಿ ಆರಂಭಿಕನಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಏಕದಿನ ಸರಣಿಯಲ್ಲೂ ಆರಂಭಿಕನಾಗುವ ಸಾಧ್ಯತೆಯಿದೆ. ಇವರ ಜೊತೆಗೆ ಮತ್ತಷ್ಟು ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಬಿಸಿಸಿಐ ರಾಹುಲ್​ರನ್ನೇ ಏಕದಿನ ಸರಣಿಯಲ್ಲಿ ಮುಂದುವರಿಸಲಿದೆಯಾ ಅಥವಾ ಟೆಸ್ಟ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಮಯಾಂಕ್​, ಯುವ ಆಟಗಾರ ಶುಬ್ಮನ್​ ಗಿಲ್​ಗೆ ಅವಕಾಶ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.