ಲೀಡ್ಸ್: ಭಾರತ-ಬಾಂಗ್ಲಾದೇಶ ಪಂದ್ಯವನ್ನು ವೀಕ್ಷಿಸಲು ಬಂದಿದ್ದ 87 ವರ್ಷದ ಅಜ್ಜಿ ಚಾರುಲತಾ ಪಟೇಲ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಟಿಕೆಟ್ ಕೊಡಿಸಿ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದ ನಂತರ ನಾಯಕ ಕೊಹ್ಲಿ ಹಾಗೂ ಪಂದ್ಯ ಶ್ರೇಷ್ಠ ರೋಹಿತ್ ಶರ್ಮಾ ಚಾರುಲತಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಇವರಿಬ್ಬರನ್ನು ಅಪ್ಪಿಕೊಂಡಿದ್ದ ಅಜ್ಜಿ, ಸಂತೋಷದಿಂದ ಇಬ್ಬರಿಗೂ ಮುತ್ತು ನೀಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ವಿಶ್ವಕಪ್ ಜಯಿಸುವಂತೆ ಆಶೀರ್ವದಿಸಿದ್ದರು.
87ರ ವಯಸ್ಸಿನಲ್ಲೂ ಅಜ್ಜಿಯ ಕ್ರಿಕೆಟ್ ಪ್ರೇಮವನ್ನು ಕಂಡು ಆಶ್ಚರ್ಯರಾಗಿದ್ದ ವಿರಾಟ್ ಮುಂದಿನ ಎಲ್ಲಾ ಪಂದ್ಯಗಳಿಗೂ ಆಗಮಿಸುವಂತೆ ಕೋರಿಕೊಂಡಿದ್ದರು. ಆದರೆ ಟಿಕೆಟ್ಗಳೆಲ್ಲಾ ಮಾರಾಟವಾಗಿದ್ದರಿಂದ ನನ್ನ ಬಳಿ ಟಿಕೆಟ್ ಇಲ್ಲ ಎಂದು ಅಜ್ಜಿ ಕೊಹ್ಲಿಗೆ ತಿಳಿಸಿದ್ದರು. ಇದಕ್ಕೆ ಕೊಹ್ಲಿ ತಾವು ಲಂಕಾ ವಿರುದ್ಧದ ಪಂದ್ಯ, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಟಿಕೆಟ್ ಕೊಡಿಸುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತನ್ನು ಅವರು ಉಳಿಸಿಕೊಂಡಿದ್ದಾರೆ.
-
Hello Charulata ji. #TeamIndia captain @imVkohli promised her tickets and our superfan is here with us is in Leeds.😊 #CWC19 pic.twitter.com/lKqbVllLjc
— BCCI (@BCCI) July 6, 2019 " class="align-text-top noRightClick twitterSection" data="
">Hello Charulata ji. #TeamIndia captain @imVkohli promised her tickets and our superfan is here with us is in Leeds.😊 #CWC19 pic.twitter.com/lKqbVllLjc
— BCCI (@BCCI) July 6, 2019Hello Charulata ji. #TeamIndia captain @imVkohli promised her tickets and our superfan is here with us is in Leeds.😊 #CWC19 pic.twitter.com/lKqbVllLjc
— BCCI (@BCCI) July 6, 2019
ಇಂದು ಕ್ರಿಕೆಟ್ ನೋಡಲು ಬಂದ ಚಾರುಲತಾ ಅಜ್ಜಿಗೆ ಲೆಟರ್ ಮೂಲಕ ಸಂದೇಶ ರವಾನಿಸಿರುವ ಕೊಹ್ಲಿ, ನಿಮ್ಮ ಪ್ರೀತಿ ಹಾಗೂ ಅಭಿರುಚಿ ನನಗೆ ಹಾಗೂ ನಮ್ಮ ತಂಡಕ್ಕೆ ಸ್ಫೂರ್ತಿಯಾಗಿದೆ. ನೀವು ನಿಮ್ಮ ಕಟುಂಬದೊಂದಿಗೆ ಈ ಪಂದ್ಯವನ್ನು ತುಂಬಾ ಖುಷಿಯಿಂದ ಎಂಜಾಯ್ ಮಾಡುತ್ತೀರಾ ಎಂದು ಭಾವಿಸಿದ್ದೇನೆ ಎಂದು ಬರೆದಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪೀಪಿ ಊದಿ ಭಾರತ ತಂಡವನ್ನು ಚಿಯರ್ ಮಾಡಿದ್ದರು. ಒಂದೇ ದಿನದಲ್ಲಿ ಈ ಅಜ್ಜಿಗೆ ಇಡೀ ದೇಶವೇ ಫಿದಾ ಆಗಿದ್ದು, ಹಲವರು ಭಾರತದ ಮುಂದಿನ ಪಂದ್ಯಗಳಿಗೆ ಟಿಕೆಟ್ ಕೊಡಿಸುವುದಾಗಿ ಮುಂದೆ ಬಂದಿದ್ದರು.