ಪುಣೆ: ಪ್ರವಾಸಿ ಶ್ರೀಲಂಕಾ ವಿರುದ್ಧ ಆಲ್ರೌಂಡ್ ಪ್ರದರ್ಶನ ತೋರಿದ ಕೊಹ್ಲಿ ಹುಡುಗರು ಅಂತಿಮ ಟಿ20 ಪಂದ್ಯದಲ್ಲಿ 78 ರನ್ಗಳ ಗೆಲುವು ದಾಖಲಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನ 2-0 ಅಂತರದಲ್ಲಿ ಗೆದ್ದುಕೊಂಡಿದೆ.
ಟೀಂ ಇಂಡಿಯಾ ನೀಡಿದ್ದ 202 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಮಲಿಂಗಾ ಪಡೆಗೆ ಬುಮ್ರಾ ಮತ್ತು ಶಾರ್ದೂಲ್ ಠಾಕೂರ್ ಶಾಕ್ ನೀಡಿದ್ರು. ಮೊದಲ 2 ಓವರ್ಗಳಲ್ಲೆ ಆರಂಭಿಕ ಆಟಗಾರರಾದ ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ ಪೆವಿಲಿಯನ್ ಸೇರಿಕೊಂಡ್ರು.
-
Another clinical display from #TeamIndia to clinch the series 🇮🇳#INDvSL pic.twitter.com/t2sABuvgAB
— BCCI (@BCCI) January 10, 2020 " class="align-text-top noRightClick twitterSection" data="
">Another clinical display from #TeamIndia to clinch the series 🇮🇳#INDvSL pic.twitter.com/t2sABuvgAB
— BCCI (@BCCI) January 10, 2020Another clinical display from #TeamIndia to clinch the series 🇮🇳#INDvSL pic.twitter.com/t2sABuvgAB
— BCCI (@BCCI) January 10, 2020
ನಂತರ ಬಂದ ಕುಶಾಲ್ ಪೆರೆರಾ, ಓಷಾಡ ಫರ್ನಾಂಡೊ ಕೂಡ ಒಂದಂಕಿಗೆ ಔಟ್ ಆದ್ರು. ನಂತರ ಜೊತೆಯಾದ ಏಂಜೆಲೋ ಮ್ಯಾಥ್ಯೂಸ್, ಧನಂಜಯ್ ಡಿಸಿಲ್ವಾ ಲಂಕಾಗೆ ಗೆಲುವಿನ ಆಸೆ ಚಿಗುರಿಸದರು. ಆದರೆ ಏಂಜೆಲೋ ಮ್ಯಾಥ್ಯೂಸ್ ಔಟ್ ಆಗುವ ಮೂಲಕ ಲಂಕಾ ಪಡೆಯ ಪತನ ಶುರುವಾಯ್ತು. ಉತ್ತಮವಾಗಿ ಬ್ಯಾಟ್ ಬೀಸಿದ ಧನಂಜಯ್ ಡಿಸಿಲ್ವಾ ಆರ್ಧ ಶತಕ ಸಿಡಿಸಿದ್ರು. ಟೀಂ ಇಂಡಿಯಾ ಬೌಲರ್ಗಳ ಕರಾರುವಕ್ಕು ದಾಳಿಗೆ ಯಾವೊಬ್ಬ ಆಟಗಾರರು ಕೂಡ ಹೆಚ್ಚು ಕಾಲ ಕ್ರೀಸ್ ಕಚ್ಚಿ ನಿಲ್ಲಲಿಲ್ಲ.
ಅಂತಿಮವಾಗಿ ಲಂಕಾ ಪಡೆ 15.5 ಓವರ್ಗಳಲ್ಲಿ 123 ರನ್ಗಳಿಸಿ, 78ರನ್ಗಳಿಂದ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಪರ ನವದೀಪ್ ಸೈನಿ 3, ಶಾರ್ದೂಲ್ ಠಾಕೂರ್ 2 , ವಾಷಿಂಗ್ಟನ್ ಸುಂದರ್ 2 ಮತ್ತು ಬುಮ್ರಾ 1 ವಿಕೆಟ್ ಪಡೆದರು.
-
Dhananjaya de Silva sparkled with a fine half-century, but that couldn't keep India from securing a crushing 78-run win. The home team's fast bowlers were too good! They take the series 2-0!#INDvSL pic.twitter.com/n2h8egU71e
— ICC (@ICC) January 10, 2020 " class="align-text-top noRightClick twitterSection" data="
">Dhananjaya de Silva sparkled with a fine half-century, but that couldn't keep India from securing a crushing 78-run win. The home team's fast bowlers were too good! They take the series 2-0!#INDvSL pic.twitter.com/n2h8egU71e
— ICC (@ICC) January 10, 2020Dhananjaya de Silva sparkled with a fine half-century, but that couldn't keep India from securing a crushing 78-run win. The home team's fast bowlers were too good! They take the series 2-0!#INDvSL pic.twitter.com/n2h8egU71e
— ICC (@ICC) January 10, 2020
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರಕಿತು. ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಶಿಖರ್ ಧವನ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ರು. ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಧವನ್ ನಂತರ ತಮ್ಮ ಬ್ಯಾಟಿಂಗ್ ವೇಗ ಹೆಚ್ಚಿಸಿ ಬಿರುಸಿನ ಹೊಡೆತಕ್ಕೆ ಮುಂದಾದ್ರು. ಧವನ್ 34 ಎಸೆತದಲ್ಲಿ 7 ಬೌಂಡರ್ 1 ಸಿಕ್ಸರ್ ನೆರವಿನಿಂದ ಅರ್ಧಶತಕ ಸಿಡಿಸಿ ಒಟ್ಟು 52 ರನ್ಗಳಿಸಿ ಔಟಾದ್ರು.
ಹಲವು ಸರಣಿಗಳಲ್ಲಿ ಬೆಂಚ್ ಕಾದು ಸಾಕಾಗಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ್ರು. ಎದುರಿಸಿದ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿದ ಅವರು ಅಬ್ಬರಿಸುವ ಮುನ್ಸೂಚನೆ ನೀಡಿದ್ರು. ಅದರೆ ಅದೇ ಓವರ್‌ನ ಎರಡನೇ ಎಸೆತದಲ್ಲೇ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ನಿರಾಸೆ ಅನುಭವಿಸಿದ್ರು.
ಆರಂಭದಿಂದಲೂ ಅಬ್ಬರಿಸಿದ ಕೆ.ಎಲ್. ರಾಹುಲ್ 34 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ರು. 54 ರನ್ ಗಳಿಸಿರುವಾಗ ಲಕ್ಷನ್ ಸಂದಕನ್ ಬೌಲಿಂಗ್ನಲ್ಲಿ ಸ್ಟಂಪ್ಗೆ ಬಲಿಯಾದ್ರು. ಭರವಸೆಯ ಆಟಗಾರ ಶ್ರೇಯಸ್ ಐಯ್ಯರ್ ಕೂಡ 4 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಕನ್ನಡಿಗ ಮನಿಶ್ ಪಾಂಡೆ ಮತ್ತು ನಾಯಕ ವಿರಾಟ್ ಕೊಹ್ಲಿ ಲಂಕಾ ಬೌಲರ್ಗಳ ಬೆವರಿಳಿಸಿದ್ರು. 5 ನೇ ವಿಕೆಟ್ಗೆ ಈ ಜೋಡಿ 41 ರನ್ಗಳ ಉತ್ತಮ ಜೊತೆಯಾಟವಾಡಿದ್ರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ವಿರಾಟ್ ಕೊಹ್ಲಿ 17 ಎಸೆತಗಳಲ್ಲಿ 26 ರನ್ ಗಳಿಸಿರುವಾಗ ಇಲ್ಲದ ರನ್ ಕದಿಯಲು ಹೋಗಿ ರನೌಟ್ಗೆ ಬಲಿಯಾದ್ರು. ನಂತರ ಬಂದ ವಾಷಿಂಗ್ಟನ್ ಸುಂದರ್ ಸೊನ್ನೆ ಸುತ್ತಿದ್ರು.
ಅಂತಿಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮನೀಶ್ ಪಾಂಡೆ(31) ಮತ್ತು ಶಾರ್ದೂಲ್ ಠಾಕೂರ್ (22) ಜೋಡಿ ಭಾರತದಮೊತ್ತ ಹೆಚ್ಚಿದ್ರು. ನಿಗದಿತ 20 ಓವರ್ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 201ರನ್ ಗಳಿಸಿತು. ಲಂಕಾ ಪರ ಲಕ್ಷನ್ ಸಂದಕನ್ 3 ವಿಕೆಟ್ ಪಡೆದು ಮಿಂಚಿದ್ರು.