ಪುಣೆ: ಭಾರತದ ವಿರುದ್ಧ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿ ಸರಣಿ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯದಿಂದ ಬಳಲುತ್ತಿರುವ ಸ್ಟಾರ್ ಬೌಲರ್ ಕೇಶವ್ ಮಹಾರಾಜ್ ಮೂರನೇ ಪಂದ್ಯದಿಂದ ಹೊರಬಿದ್ದಿರುವುದು ದೊಡ್ಡ ಆಘಾತ ತಂದಿದೆ.
ಫೀಲ್ಡಿಂಗ್ ವೇಳೆ ಬಿದ್ದು ಭುಜದ ನೋವಿಗೆ ತುತ್ತಾಗಿರುವ ಕೇಶವ್ ಮಹಾರಾಜ್ ಮೂರನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ಕೇಶವ್ ಜಾಗದಲ್ಲಿ ಜಾರ್ಜ್ ಲಿಂಡೆ ಅವಕಾಶ ಪಡೆದಿದ್ದಾರೆ. ಈ ವಿಚಾರವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಟ್ವೀಟ್ ಮೂಲಕ ದೃಢಪಡಿಸಿದೆ.
-
#CSAnews George Linde to replace Keshav Maharaj https://t.co/GQbsgy4HoD pic.twitter.com/3xcseDLRux
— Cricket South Africa (@OfficialCSA) October 13, 2019 " class="align-text-top noRightClick twitterSection" data="
">#CSAnews George Linde to replace Keshav Maharaj https://t.co/GQbsgy4HoD pic.twitter.com/3xcseDLRux
— Cricket South Africa (@OfficialCSA) October 13, 2019#CSAnews George Linde to replace Keshav Maharaj https://t.co/GQbsgy4HoD pic.twitter.com/3xcseDLRux
— Cricket South Africa (@OfficialCSA) October 13, 2019
ಕೇಶವ್ ಎರಡನೇ ಟೆಸ್ಟ್ನಲ್ಲಿ ಗಾಯದ ನಡುವೆಯೂ ಎರಡೂ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ನಡೆಸಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 72 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 22 ರನ್ಗಳಿಸಿ ತಂಡದ ಹೀನಾಯ ಸೋಲನ್ನು ತಪ್ಪಿಸಲು ಹೋರಾಟ ನಡೆಸಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯಕ್ಕೆ ಅವರು ತಂಡದಿಂದ ಹೊರಬಿದ್ದಿರುವುದು ನಿಜಕ್ಕೂ ಪ್ಲೆಸಿಸ್ ಪಡೆಗೆ ದೊಡ್ಡ ನಷ್ಟವಾಗಲಿದೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ಕೇಶವ್ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರು. ಕೇಶವ್ ಎರಡು ಪಂದ್ಯಗಳಿಂದ ಸುಮಾರು 127 ಓವರ್ ಬೌಲಿಂಗ್ ಮಾಡಿದ್ದು, ಆಫ್ರಿಕಾ ಅತಿ ಹೆಚ್ಚು ವಿಕೆಟ್(6) ಕೂಡ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇನ್ನು, ಬ್ಯಾಟಿಂಗ್ನಲ್ಲೂ ಒಂದು ಅರ್ಧಶತಕದ ಸಹಿತ 103 ರನ್ಗಳಿಸಿ ತಂಡದ ನಾಲ್ಕನೇ ಗರಿಷ್ಠ ಸ್ಕೋರರ್ ಆಗಿದ್ದರು.