ಹೈದರಾಬಾದ್: ವಿಂಡೀಸ್ ಪ್ರವಾಸವನ್ನು ಭರ್ಜರಿ ಸರಣಿ ಗೆಲುವಿನೊಂದಿಗೆ ಮುಕ್ತಾಯಗೊಳಿಸಿರುವ ಟೀಂ ಇಂಡಿಯಾಗೆ ಮುಂದಿನ ಸವಾಲು ಸುಲಭವಾಗಿಲ್ಲ.
ಸೆಪ್ಟೆಂಬರ್ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಬಲಿಷ್ಠ ದಕ್ಷಿಣ ಆಫ್ರಿಕಾ ಮೂರು ಟಿ20 ಹಾಗೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿಂಡೀಸ್ ಪ್ರವಾಸದ ಗೆಲುವು ಮುಂಬರುವ ಸರಣಿಯ ಮೇಲೆ ಸಹಜವಾಗಿಯೇ ಧನಾತ್ಮಕ ಪರಿಣಾಮ ಬೀರಲಿದೆ.
ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಕೊಹ್ಲಿ ಪಡೆ ಪ್ರಕಟ... ಯುವ ಪ್ರತಿಭೆಗಳಿಗೆ ಮಣೆ, ಧೋನಿಗಿಲ್ಲ ಚಾನ್ಸ್!
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಹಿರಿಯ ಆಟಗಾರ ಎಂ.ಎಸ್.ಧೋನಿಗೆ ಕೊಕ್ ನೀಡಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ವಿಂಡೀಸ್ ಪ್ರವಾಸ ಕೈಗೊಂಡಿದ್ದ ಬಹುತೇಕ ಆಟಗಾರರು ಹದಿನೈದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಸೆಪ್ಟೆಂಬರ್ನಿಂದ ಮಾರ್ಚ್ವರೆಗೂ ಟೀಂ ಇಂಡಿಯಾ 36 ಪಂದ್ಯದಲ್ಲಿ ಭಾಗಿ... ಸಂಪೂರ್ಣ ವೇಳಾಪಟ್ಟಿ ಇಂತಿದೆ!
ಅತ್ತ ದಕ್ಷಿಣ ಆಫ್ರಿಕಾ ಕೂಡ ಭಾರತ ಪ್ರವಾಸಕ್ಕೆ ತಂಡ ಘೋಷಣೆ ಮಾಡಿದ್ದು, ಮೂವರು ಹೊಸ ಪ್ಲೇಯರ್ಸ್‌ಗೆ ಆಯ್ಕೆ ಸಮಿತಿ ಅವಕಾಶ ನೀಡಿದೆ. ವೇಗಿ ಅನ್ರಿಚ್ ನೋರ್ಟ್ಜೆ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರುದಿ ಸೆಕೆಂಡ್ ಹಾಗೂ ಸ್ಪಿನ್ನರ್ ಸೆನುರಾನ್ ಮುತ್ತುಸಾಮಿ ಟೆಸ್ಟ್ ತಂಡಕ್ಕಾಗಿ ಘೋಷಣೆ ಮಾಡಿರುವ ಹದಿನೈದರ ಬಳಗದಲ್ಲಿ ಕಾಣಿಸಿಕೊಂಡ ಹೊಸ ಮುಖಗಳು.
ಫಾಫ್ ಡು ಪ್ಲೆಸಿಸ್ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದರೆ, ಕ್ವಿಂಟನ್ ಡಿಕಾಕ್ ಟಿ-20 ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಭಾರತ ಪ್ರವಾಸದಲ್ಲಿ ನಡೆಯುವ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾ ಪಾಲಿಗೆ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಸರಣಿ ಆಗಿರಲಿದೆ.
15 ಸೆಪ್ಟೆಂಬರ್ | ಮೊದಲ ಟಿ20 | ಧರ್ಮಶಾಲಾ |
18 ಸೆಪ್ಟೆಂಬರ್ | ಎರಡನೇ ಟಿ20 | ಮೊಹಾಲಿ |
22 ಸೆಪ್ಟೆಂಬರ್ | ಮೂರನೇ ಟಿ20 | ಬೆಂಗಳೂರು |
ಅಕ್ಟೋಬರ್ 2-6 | ಮೊದಲ ಟೆಸ್ಟ್ | ವಿಶಾಖಪಟ್ಟಣಂ |
ಅಕ್ಟೋಬರ್ 10-14 | ಎರಡನೇ ಟೆಸ್ಟ್ | ಪುಣೆ |
ಅಕ್ಟೋಬರ್ 19-23 | ಮೂರನೇ ಟೆಸ್ಟ್ | ರಾಂಚಿ |