ETV Bharat / sports

ವಿಶ್ವಕಪ್​​ ಸೆಮೀಸ್​​ನಲ್ಲಿ ಇಂಡೋ-ಪಾಕ್​ ಮುಖಾಮುಖಿ... ಅದು ಹೀಗಾದ್ರೆ ಮಾತ್ರ ಸಾಧ್ಯ! - ಲಂಡನ್​​

ವಿಶ್ವಕಪ್​​ನಲ್ಲಿ ಇಂಡೋ-ಪಾಕ್​ ನಡುವೆ ಮತ್ತೊಂದು ಹೈ ವೋಲ್ಟೇಜ್​ ಕದನ ನಡೆಯಬೇಕಾದರೆ ಎಲ್ಲವೂ ಈ ಕೆಳಗಿನಂತೆ ನಡೆಬೇಕು. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇಂಡೋ-ಪಾಕ್​ ಪಂದ್ಯ
author img

By

Published : Jun 25, 2019, 9:56 PM IST

ಲಂಡನ್​​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಭಾರತ ಈಗಾಗಲೇ ಲೀಗ್​ ಹಂತದಲ್ಲಿ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದೆ. ಇದೀಗ ಎಲ್ಲವೂ ಪಾಕಿಸ್ತಾನ ಅಂದುಕೊಂಡಿರುವ ಹಾಗೇ ನಡೆದರೆ ಸೆಮಿಫೈನಲ್​​ನಲ್ಲಿ ಭಾರತ-ಪಾಕ್​ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಗೋಚರಿಸುತ್ತಿದೆ.

ವಿಶ್ವಕಪ್​ ಸೆಮಿಫೈನಲ್​ ಪಂದ್ಯಗಳು ಅಂಕಪಟ್ಟಿಯಲ್ಲಿ ನಂಬರ್​ 1 ಹಾಗೂ ನಂಬರ್​ 4 ಸ್ಥಾನ, 2ನೇ ಮತ್ತು 3ನೇ ಸ್ಥಾನದಲ್ಲಿರುವ ತಂಡಗಳ ಮಧ್ಯೆ ನಡೆಯಲಿದ್ದು, ಮುಂದಿನ ಎಲ್ಲಾ ಪಂದ್ಯಗಳಲ್ಲಿ ಭಾರತ ಹಾಗೂ ಪಾಕ್​ ಗೆಲುವು ದಾಖಲು ಮಾಡಿದರೆ ಮಾತ್ರ ಪ್ರೇಕ್ಷಕರಿಗೆ ಮತ್ತೊಂದು ಹೈ ವೋಲ್ಟೇಜ್​​ ಪಂದ್ಯ ನೋಡಲು ಸಿಗಲಿದೆ.

ಏನೆಲ್ಲ ನಡೆಯಬೇಕು!?
ಈಗಾಗಲೇ ಭಾರತ ತಾನಾಡಿರುವ 5 ಪಂದ್ಯಗಳಿಂದ 9 ಅಂಕ ಗಳಿಸಿ 3ನೇ ಸ್ಥಾನದಲ್ಲಿದೆ. ಪಾಕ್​ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು 5 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಇದೀಗ ಪಾಕ್​ ಸೆಮೀಸ್​ಗೆ ಲಗ್ಗೆ ಹಾಕಬೇಕಾದರೆ ಮುಂದಿನ ನ್ಯೂಜಿಲ್ಯಾಂಡ್​, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ವಿರುದ್ಧದ ಪಂದ್ಯಗಳಲ್ಲೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಜತೆಗೆ ಶ್ರೀಲಂಕಾ, ಬಾಂಗ್ಲಾ, ಇಂಗ್ಲೆಂಡ್ ಹಾಗೂ ವೆಸ್ಟ್​ ಇಂಡೀಸ್​​​ ಎರಡೆರಡು ಪಂದ್ಯಗಳಲ್ಲಿ ಸೋಲು ಕಾಣಬೇಕಾಗಿದೆ.

ಪಾಕ್​ ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆದ್ದರೆ 11 ಅಂಕ ಗಳಿಸಲಿದ್ದು, ಇಂಗ್ಲೆಂಡ್​, ಶ್ರೀಲಂಕಾ ಹಾಗೂ ಬಾಂಗ್ಲಾ 2 ಪಂದ್ಯಗಳಲ್ಲಿ ಸೋತರೆ ಪಾಕ್​​ಗಿಂತಲೂ ಕಡಿಮೆ ಅಂಕ ಗಳಿಸಲಿವೆ. ಹೀಗಾಗಿ ಪಾಕ್​ 4ನೇ ತಂಡವಾಗಿ ಸೆಮೀಸ್​ಗೆ ಲಗ್ಗೆ ಹಾಕಲಿದೆ. ಆಗ ಜುಲೈ 9ರಂದು ನಡೆಯುವ ಸೆಮೀಸ್​​ನಲ್ಲಿ ಇಂಡೋ-ಪಾಕ್​ ಫೈಟ್​ ನಡೆಯುವುದು ಪಕ್ಕಾ ಆಗಲಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಮಾತು ಸಹ ಕೇಳಿಬರುತ್ತಿದೆ.

ಇನ್ನು ಭಾರತ ಮುಂದಿನ ಎಲ್ಲ ಪಂದ್ಯ ಗೆದ್ದರೆ 9+8 ಅಂಕ ಸೇರಿ ಒಟ್ಟು 17 ಅಂಕ ಗಳಿಕೆ ಮಾಡಲಿದ್ದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​​​ 1 ಪಂದ್ಯಗಳಲ್ಲಿ ಸೋಲು ಕಾಣಬೇಕು. ಆಗ ಎರಡು ತಂಡಗಳ ಅಂಕ 15 ಆಗಲಿದೆ.

Intro:Body:

ವಿಶ್ವಕಪ್​​ ಸೆಮೀಸ್​​ನಲ್ಲಿ ಇಂಡೋ-ಪಾಕ್​ ಮುಖಾಮುಖಿ... ಅದು ಹೀಗೆ ಆದ್ರೆ ಮಾತ್ರ ಸಾಧ್ಯ! 

ಲಂಡನ್​​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಭಾರತ ಈಗಾಗಲೇ ಲೀಗ್​ ಹಂತದಲ್ಲಿ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದೆ. ಇದೀಗ ಎಲ್ಲವೂ ಪಾಕಿಸ್ತಾನ ಅಂದುಕೊಂಡಿರುವ ಹಾಗೇ ನಡೆದರೆ ಸೆಮಿಫೈನಲ್​​ನಲ್ಲಿ ಭಾರತ-ಪಾಕ್​ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಗೋಚರಿಸುತ್ತಿವೆ. 

ವಿಶ್ವಕಪ್​ ಸೆಮಿಫೈನಲ್​ ಪಂದ್ಯ ಅಂಕಪಟ್ಟಿಯಲ್ಲಿ ನಂಬರ್​ 1ಸ್ಥಾನದಲ್ಲಿರುವ ಹಾಗೂ ನಂಬರ್​ 4 ಸ್ಥಾನದಲ್ಲಿರುವ ತಂಡಗಳ ನಡುವೆ ಹಾಗೂ 2ನೇ ಮತ್ತು 3ನೇ ಸ್ಥಾನದಲ್ಲಿರುವವರ ಮಧ್ಯೆ ನಡೆಯಲಿದ್ದು, ಮುಂದಿನ ಎಲ್ಲ ಪಂದ್ಯಗಳಲ್ಲಿ ಭಾರತ ಹಾಗೂ ಪಾಕ್​ ಗೆಲುವು ದಾಖಲು ಮಾಡಿದರೆ ಮಾತ್ರ ಪ್ರೇಕ್ಷಕರಿಗೆ ಮತ್ತೊಂದು ಹೈವೋಲ್ಟೇಜ್​​ ಪಂದ್ಯ ನೋಡಲು ಸಿಗಲಿದೆ. 

ಏನೆಲ್ಲ ನಡೆಯಬೇಕು!? 

ಈಗಾಗಲೇ ಭಾರತ ತಾನಾಡಿರುವ 5 ಪಂದ್ಯಗಳಿಂದ 9 ಅಂಕಗಳಿಸಿ 3ನೇ ಸ್ಥಾನದಲ್ಲಿದೆ. ಪಾಕ್​ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು 5ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಇದೀಗ ಪಾಕ್​ ಸೆಮೀಸ್​ಗೆ ಲಗ್ಗೆ ಹಾಕಬೇಕಾದರೆ ಮುಂದಿನ ನ್ಯೂಜಿಲ್ಯಾಂಡ್​,ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ವಿರುದ್ಧದ ಪಂದ್ಯಗಳಲ್ಲೂ ಗೆಲ್ಲಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಜತೆಗೆ ಶ್ರೀಲಂಕಾ,ಬಾಂಗ್ಲಾ,ಇಂಗ್ಲೆಂಡ್ ಹಾಗೂ ವೆಸ್ಟ್​ ಇಂಡೀಸ್​​​ ಎರಡೆರಡು ಪಂದ್ಯಗಳಲ್ಲಿ ಸೋಲು ಕಾಣಬೇಕಾಗಿದೆ. 

ಪಾಕ್​ ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವುದರಿಂದ 11 ಅಂಕಗಳಿಸಲಿದ್ದು, ಇಂಗ್ಲೆಂಡ್​,ಶ್ರೀಲಂಕಾ ಹಾಗೂ ಬಾಂಗ್ಲಾ 2ಪಂದ್ಯಗಳಲ್ಲಿ ಸೋತರೆ ಪಾಕ್​​ಗಿಂತಲೂ ಕಡಿಮೆ ಅಂಕಗಳಿಸಲಿವೆ. ಹೀಗಾಗಿ ಪಾಕ್​ 4ನೇ  ತಂಡವಾಗಿ ಸೆಮಿಸ್​ಗೆ ಲಗ್ಗೆ ಹಾಕಲಿದೆ. ಆಗ ಜುಲೈ 9ರಂದು ನಡೆಯುವ ಸೆಮೀಸ್​​ನಲ್ಲಿ ಇಂಡೋ-ಪಾಕ್​ ಫೈಟ್​ ನಡೆಸಲಿವೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಮಾತು ಸಹ ಉದ್ಭವವಾಗಿದೆ. 

ಇನ್ನು ಭಾರತ ಮುಂದಿನ ಎಲ್ಲ ಪಂದ್ಯ ಗೆದ್ದರೆ 9+8 ಅಂಕ ಸೇರಿ ಒಟ್ಟು 17 ಅಂಕಗಳಿಕೆ ಮಾಡಲಿದ್ದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ 1 ಪಂದ್ಯಗಳಲ್ಲಿ ಸೋಲು ಕಾಣಬೇಕು. ಆಗ ಎರಡು ತಂಡಗಳ ಅಂಕ 15 ಆಗಲಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.