ಮ್ಯಾಂಚೆಸ್ಟರ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಕೆಲವೊಂದು ಪಂದ್ಯಗಳಿಗೆ ಶಾಪ್ವಾಗಿ ಕಾಡಿರುವ ವರುಣ ಇದೀಗ ಸೆಮಿಫೈನಲ್ನಲ್ಲೂ ತನ್ನ ಆಟ ನಡೆಸುವ ಮುನ್ಸೂಚನೆ ನೀಡಿದ್ದಾನೆ. ನಾಳೆ ಭಾರತ-ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ವರುಣ ಅಡ್ಡಿಯಾಗಲಿದ್ದಾನೆ ಎಂದು ಅಲ್ಲಿನ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆಯ ದಿನಕ್ಕೆ ಹೋಲಿಕೆ ಮಾಡಿದಾಗ ಇಂದು ಮ್ಯಾಂಚೆಸ್ಟರ್ನಲ್ಲಿ ಸೂರ್ಯನ ಬೆಳಕು ಮಂದವಾಗಿದ್ದು, ನಾಳೆ ಮಧ್ಯಾಹ್ನದ ಹೊತ್ತಿಗೆ ಮಳೆ ಬರಬಹುದು ಎಂದು ಅಲ್ಲಿನ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ನಾಳೆಯ ದಿನ ಮಳೆಗಾಹುತಿಯಾಗಿ ಪಂದ್ಯ ಸಂಪೂರ್ಣವಾಗಿ ರದ್ಧಾದರೆ, ನಾಡಿದ್ದು ಮೀಸಲು ದಿನವಾಗಿದೆ. ಅವತ್ತು ಸಹ ಮಳೆ ಸುರಿದರೆ ಭಾರತ ನೇರವಾಗಿ ಫೈನಲ್ಗೆ ಲಗ್ಗೆ ಹಾಕಲಿದೆ. ಅಂಕಪಟ್ಟಿಯಲ್ಲಿ ಭಾರತ ನಂಬರ್ 1ಸ್ಥಾನದಲ್ಲಿರುವ ಕಾರಣ ನೇರವಾಗಿ ಫೈನಲ್ ಪ್ರವೇಶ ಪಡೆದುಕೊಳ್ಳಲಿದೆ. 11 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಟೂರ್ನಿಯಿಂದ ಹೊರಬೀಳಲಿದೆ.