ETV Bharat / sports

ಭಾರತ-ಇಂಗ್ಲೆಂಡ್​​ 2ನೇ ಏಕದಿನ: ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿ ಕೊಹ್ಲಿ ಪಡೆ! - ಭಾರತ-ಇಂಗ್ಲೆಂಡ್ 2ನೇ ಏಕದಿನ

ಏಕದಿನ ಸರಣಿ ಕೈವಶ ಮಾಡಿಕೊಳ್ಳುವ ಉದ್ದೇಶದಿಂದ ಟೀಂ ಇಂಡಿಯಾ ಇಂದು ಕಣಕ್ಕಿಳಿಯಲಿದ್ದು, ಗಾಯದ ಸಮಸ್ಯೆ ಕಾರಣ ಕೆಲವೊಂದು ಮಹತ್ವದ ಬದಲಾವಣೆಗಳು ತಂಡದಲ್ಲಿ ಆಗಲಿವೆ.

India vs England 2nd ODI
India vs England 2nd ODI
author img

By

Published : Mar 26, 2021, 4:16 AM IST

ಪುಣೆ: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೂರು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಇಂದು ನಡೆಯಲಿದ್ದು, ಆಂಗ್ಲರ ಮೇಲೆ ಸವಾರಿ ನಡೆಸಿ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿ ಕೊಹ್ಲಿ ಪಡೆ ಇದೆ. ಮಹಾರಾಷ್ಟ್ರದ ಕ್ರಿಕೆಟ್​ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಉಭಯ ತಂಡಗಳಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಆಗುವುದು ಬಹುತೇಕ ಖಚಿತವಾಗಿದೆ.

ಮೊದಲನೇ ಪಂದ್ಯದಲ್ಲಿ ಕೊಹ್ಲಿ ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್​​ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಗೆಲುವು ದಾಖಲು ಮಾಡಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡಿ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಳ್ಳುವ ಇರಾದೆ ಇಟ್ಟುಕೊಂಡಿದೆ. ಮೊದಲ ಪಂದ್ಯದಲ್ಲಿ ಗಾಯಗೊಂಡು ಸರಣಿಯಿಂದ ಶ್ರೇಯಸ್​ ಅಯ್ಯರ್ ಹೊರಬಿದ್ದಿರುವ ಕಾರಣ ಸೂರ್ಯಕುಮಾರ್​ ಯಾದವ್​ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.ಮೊಣಕೈ ಗಾಯಕ್ಕೊಳಗಾಗಿರುವ ರೋಹಿತ್​ ಶರ್ಮಾ ವಿಶ್ರಾಂತಿ ಪಡೆದುಕೊಂಡರೆ,ಇವರ ಸ್ಥಾನಕ್ಕೆ ಶುಬ್ಮನ್ ಗಿಲ್​ ಆಯ್ಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಏಕದಿನ ಸರಣಿಯಿಂದ ಇಂಗ್ಲೆಂಡ್ ನಾಯಕ ಮಾರ್ಗನ್ ಔಟ್​; ಬಟ್ಲರ್​ಗೆ ನಾಯಕತ್ವದ ಹೊಣೆ

ಇಂಗ್ಲೆಂಡ್ ತಂಡದಲ್ಲೂ ಗಾಯದ ಸಮಸ್ಯೆ ಎದ್ದು ಕಾಣುತ್ತಿದ್ದು, ನಾಯಕ ಇಯಾನ್​ ಮಾರ್ಗನ್​ ಹಾಗೂ ಸ್ಯಾಮ್​ ಬಿಲ್ಲಿಂಗ್ಸ್​ ಗಾಯಗೊಂಡಿದ್ದು, ಇವರ ಬದಲಿಗೆ ಬೇರೆ ಆಟಗಾರರು ತಂಡದಲ್ಲಿ ಚಾನ್ಸ್​ ಪಡೆದುಕೊಳ್ಳಲಿದ್ದಾರೆ. ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ದಾಖಲು ಮಾಡಿದ್ರೆ ಮಾತ್ರ ಸರಣಿ ಜೀವಂತವಾಗಿಟ್ಟುಕೊಳ್ಳಲು ಸಾಧ್ಯವಿದ್ದು, ಅದೇ ಇರಾದೆ ಇಟ್ಟುಕೊಂಡು ಮೈದಾನಕ್ಕೆ ಇಳಿಯಲಿದೆ.

ಉಭಯ ತಂಡಗಳು

ಭಾರತ: ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್​, ಕೆ.ಎಲ್​ ರಾಹುಲ್​, ಶುಭ್ಮನ್​ ಗಿಲ್​, ಸೂರ್ಯಕುಮಾರ್ ಯಾದವ್​, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​(ವಿ.ಕೀ), ಯಜುವೇಂದ್ರ ಚಹಾಲ್​, ಕುಲ್ದೀಪ್​ ಯಾದವ್​, ಕೃಣಾಲ್​ ಪಾಂಡ್ಯ, ವಾಷಿಂಗ್ಟನ್​​ ಸುಂದರ್​, ಟಿ. ನಟರಾಜನ್​, ಭುವನೇಶ್ವರ್​ ಕುಮಾರ್​​,ಮೊಹಮ್ಮದ್​ ಸಿರಾಜ್​, ಪ್ರಸಿದ್ಧ್​ ಕೃಷ್ಣ, ಶಾರ್ದೂಲ್ ಠಾಕೂರ್​

ಇಂಗ್ಲೆಂಡ್​: ಜೋಸ್​ ಬಟ್ಲರ್​(ಕ್ಯಾಪ್ಟನ್​), ಮೊಯಿನ್​ ಅಲಿ,ಸ್ಯಾಮ್ ಕರನ್​, ಟಾಮ್​ ಕರನ್​, ಅದಿಲ್ ರಶೀದ್​, ಜೇಸನ್​ ರಾಯ್​, ಬೆನ್​ ಸ್ಟೋಕ್ಸ್​, ಮೊಯಿನ್​ ಅಲಿ, ಜಾನಿ ಬೈರ್​ಸ್ಟೋ, ಸ್ಯಾಮ್​ ಬಿಲ್ಲಿಂಗ್ಸ್​, ಲಿಯಾಮ್​, ಪಾರ್ಕಿನ್ಸನ್​, ರೀಸ್​ ಟಾಫ್ಲಿ, ಮಾರ್ಕ್​ ವುಡ್​, ಜೇಕ್ ಬೆಲ್​, ಕ್ರಿಸ್ ಜೋರ್ಡಾನ್​, ಡೇವಿಡ್​ ಮಲನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.