ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡ ವಿಕೆಟ್ ಕೀಪರ್ ರಿಷಭ್ ಪಂತ್ 2ನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಸದ್ಯ ಕೀಪಿಂಗ್ ಜವಾಬ್ದಾರಿ ಕನ್ನಡಿಗ ಕೆ.ಎಲ್. ರಾಹುಲ್ ಹೆಗಲಿಗೆ ಬಿದ್ದಿದೆ. ಹಾಗಾಗಿ ಇದೀಗ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಕೆಲಸ ನಿಭಾಯಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯುವ ಆಟಗಾರನಿಗೆ ಬುಲಾವ್ ನೀಡಿದೆ.
ಟೀಂ ಇಂಡಿಯಾದ ಹೆಚ್ಚುವರಿ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಂಡಿದ್ದ ಸಂಜು ಸ್ಯಾಮ್ಸನ್ ಭಾರತ ಎ ತಂಡದೊಂದಿಗೆ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಈ ಕಾರಣ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಂಧ್ರಪ್ರದೇಶದ ಯುವ ಆಟಗಾರ ಕೆ.ಎಸ್.ಭರತ್ಗೆ ಬಿಸಿಸಿಐ ಬುಲಾವ್ ನೀಡಿದೆ.
-
UPDATE - K S Bharat named back-up wicket-keeper for 2nd ODI.
— BCCI (@BCCI) January 17, 2020 " class="align-text-top noRightClick twitterSection" data="
Full details here - https://t.co/c9Pk84rkbM #TeamIndia pic.twitter.com/ulOi6aKnRg
">UPDATE - K S Bharat named back-up wicket-keeper for 2nd ODI.
— BCCI (@BCCI) January 17, 2020
Full details here - https://t.co/c9Pk84rkbM #TeamIndia pic.twitter.com/ulOi6aKnRgUPDATE - K S Bharat named back-up wicket-keeper for 2nd ODI.
— BCCI (@BCCI) January 17, 2020
Full details here - https://t.co/c9Pk84rkbM #TeamIndia pic.twitter.com/ulOi6aKnRg
ರಿಷಭ್ ಪಂತ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಎಸ್ಎ)ಯಲ್ಲಿ ಪಾಲ್ಗೊಂಡು ತದನಂತರ ಟೀಂ ಇಂಡಿಯಾ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಕೆ.ಎಸ್. ಭರತ್, ಬೆಂಗಳೂರಿನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆತಿದೆ.