ETV Bharat / sports

ನವದೀಪ್​ ಸೈನಿಗಿದು ಸ್ಮರಣೀಯ ದಿನ: ಟೆಸ್ಟ್ ಕ್ಯಾಪ್​ ನೀಡಿ ಸ್ವಾಗತಿಸಿದ ಬುಮ್ರಾ

author img

By

Published : Jan 7, 2021, 8:43 AM IST

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡುತ್ತಿರುವ ಯುವ ವೇಗಿ ನವದೀಪ್ ಸೈನಿಗೆ ಟೀಂ ಇಂಡಿಯಾದ ಮತ್ತೊಬ್ಬ ಯುವ ಬೌಲರ್ ಬುಮ್ರಾ ಟೆಸ್ಟ್ ಕ್ಯಾಪ್​ ಅನ್ನು ಹಸ್ತಾಂತರಿಸಿ ತಂಡಕ್ಕೆ ಬರಮಾಡಿಕೊಂಡಿದ್ದಾರೆ.

Jasprit Bumrah hands Test cap to debutant Navdeep Saini
ನವದೀಪ್​ ಸೈನಿಗಿದು ಸ್ಮರಣೀಯ ದಿನ

ಸಿಡ್ನಿ: ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ಅವರಿಗೆ ಇದು ಸ್ಮರಣೀಯ ದಿನವಾಗಿದ್ದು, ಭಾರತದ ವೇಗದ ಬೌಲರ್ ಬುಧವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್​ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದರು.

ಗಾಯಾಳು ಉಮೇಶ್ ಯಾದವ್​ ಬದಲಿಗೆ 11ರ ಬಳಗದಲ್ಲಿ ಸ್ಥಾನಪಡೆದ ಸೈನಿಗೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಸೈನಿಗೆ ಟೆಸ್ಟ್​ ಕ್ಯಾಪ್ ನೀಡುವ ಜವಾಬ್ದಾರಿ ನಿರ್ವಹಿಸಿದ್ರು. ಸಾಮಾನ್ಯವಾಗಿ, ತಂಡದ ಹಿರಿಯ ಸದಸ್ಯ ಅಥವಾ ಸಹಾಯಕ ಸಿಬ್ಬಂದಿ ಚೊಚ್ಚಲ ಟೆಸ್ಟ್ ಕ್ಯಾಪ್‌ಗಳನ್ನು ಆಟಗಾರರಿಗೆ ಹಸ್ತಾಂತರಿಸುತ್ತಾರೆ. ಆದರೆ ಟೀಂ ಇಂಡಿಯಾ ಯುವ ಬೌಲರ್‌ ಮತ್ತೊಬ್ಬ ಯುವಕನನ್ನು ತಂಡಕ್ಕೆ ಸ್ವಾಗತ ಮಾಡಿದ್ದು ಇದೇ ಮೊದಲು ಎನಿಸುತ್ತಿದೆ.

ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಜಸ್ಪ್ರೀತ್ ಬುಮ್ರಾ ಈ ಭಾರತೀಯ ಬೌಲಿಂಗ್ ದಾಳಿಯ ನೇತೃತ್ವ ವಹಿಸಿದ್ದಾರೆ. ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದು, ವೇಗದ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಬುಮ್ರಾ ಅವರಿಗೆ ವಹಿಸಲಾಗಿದೆ.

"ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಅವರು ಕಠಿಣ ದಾರಿಯಲ್ಲಿ ಸಾಗಿ ಬಂದಿದ್ದಾರೆ. ಈ ಕ್ಯಾಪ್​ಗೆ ಅವರು ಅರ್ಹರು. ಮುಂದಿನ ದಿಗಳಲ್ಲಿ ಉತ್ತಮ ಪ್ರದರ್ಶನ ನೀಡು" ಎಂದು ಸೈನಿ ಅವರನ್ನು ಹಾರೈಸಿದ ಬುಮ್ರಾ, 299ನೇ ಇಂಡಿಯಾ ಟೆಸ್ಟ್ ಕ್ಯಾಪ್ ಅನ್ನು ಹಸ್ತಾಂತರಿಸಿದ್ರು.

ಟೆಸ್ಟ್ ಕ್ಯಾಪ್ ಪಡೆದ ನಂತರ ಸೈನಿ ಅವರನ್ನು ತರಬೇತುದಾರ ರವಿ ಶಾಸ್ತ್ರಿ ಸೇರಿದಂತೆ ತಂಡದ ಇತರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.