ETV Bharat / sports

ಟಿ20 ಕ್ರಿಕೆಟ್​ನಲ್ಲಿ ಸತತ 9ನೇ ಜಯ ಸಾಧಿಸಿದ ಕೊಹ್ಲಿ ಪಡೆ - ಭಾರತ vs ಆಸ್ಟ್ರೇಲಿಯಾ ಟಿ20 ಪಂದ್ಯ

ಟಿ20 ಕ್ರಿಕೆಟ್​ನಲ್ಲಿ ಸತತ 9ನೇ ಜಯ ಸಾಧಿಸಿದೆ ಕೊಹ್ಲಿ ಪಡೆ. ಭಾರತ ತಂಡಕ್ಕೂ ಮೊದಲೇ ಅಫ್ಘಾನಿಸ್ತಾನ 2018-19ರಲ್ಲಿ ಸತತ 12 ಹಾಗೂ 2016-17ರಲ್ಲಿ ಸತತ 11 ಜಯ ಸಾಧಿಸಿದೆ. 2ನೇ ಸ್ಥಾನದಲ್ಲಿರುವ ಪಾಕಿಸ್ತಾನ 2018ರಲ್ಲಿ ಸತತ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಭಾರತ ತಂಡ ಈ ಹಿಂದೆ 2012, 2016 ಮತ್ತು 2018ರಲ್ಲಿ ಸತತ 7 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಟಿ20 ಕ್ರಿಕೆಟ್​ನಲ್ಲಿ ಸತತ 9ನೇ ಜಯ ಸಾಧಿಸಿ ಕೊಹ್ಲಿ ಪಡೆ

author img

By

Published : Dec 6, 2020, 7:31 PM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಸತತ 9ನೇ ಜಯ ಸಾಧಿಸಿ ಪಾಕಿಸ್ತಾನ ತಂಡದ ದಾಖಲೆಯನ್ನು ಸರಿಗಟ್ಟಿದೆ.

ಭಾರತ ತಂಡ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಸತತ 9 ಅಥವಾ ಅದಕ್ಕಿಂತ ಹೆಚ್ಚು ಜಯ ಸಾಧಿಸಿದ 3ನೇ ತಂಡ ಎನಿಸಿಕೊಂಡಿತು. ಭಾರತ ತಂಡ 2020ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯ, ನ್ಯೂಜಿಲ್ಯಾಂಡ್ ವಿರುದ್ಧ 5 ಹಾಗೂ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಸತತ 2 ಪಂದ್ಯಗಳನ್ನು ಜಯಿಸಿದೆ.

ಇದನ್ನು ಓದಿ:ಅಬ್ಬರಿಸಿದ ಪಾಂಡ್ಯ, ಧವನ್​: ಆಸ್ಟ್ರೇಲಿಯಾ​ ವಿರುದ್ಧ ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡ ಕೊಹ್ಲಿ ಪಡೆ

ಭಾರತ ತಂಡಕ್ಕೂ ಮೊದಲೇ ಅಫ್ಘಾನಿಸ್ತಾನ 2018-19ರಲ್ಲಿ ಸತತ 12 ಹಾಗೂ 2016-17ರಲ್ಲಿ ಸತತ 11 ಜಯ ಸಾಧಿಸಿದೆ. 2ನೇ ಸ್ಥಾನದಲ್ಲಿರುವ ಪಾಕಿಸ್ತಾನ 2018ರಲ್ಲಿ ಸತತ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಭಾರತ ತಂಡ ಈ ಹಿಂದೆ 2012, 2016 ಮತ್ತು 2018ರಲ್ಲಿ ಸತತ 7 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಡಿಸೆಂಬರ್​ 8ರಂದು ನಡೆಯಲಿರುವ ಕೊನೆಯ ಟಿ20 ಪಂದ್ಯವನ್ನು ಗೆದ್ದರೆ ಭಾರತ ತಂಡ ಟೆಸ್ಟ್​ ಮಾನ್ಯತೆ ಪಡೆದಿರುವ ರಾಷ್ಟ್ರ ಟಿ20 ಕ್ರಿಕೆಟ್​ನಲ್ಲಿ ಸತತ ಗರಿಷ್ಠ ಪಂದ್ಯಗಳನ್ನ ಗೆದ್ದ ದಾಖಲೆ ಬರೆಯಲಿದೆ.

ಇದನ್ನು ಓದಿ:ಐಪಿಎಲ್​ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಸೈ ಎನಿಸಿಕೊಂಡ ಹಳ್ಳಿಹೈದ ನಟ್ಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.