ರಾಜ್ಕೋಟ್: ಬಾಂಗ್ಲಾದೇಶದ ವಿರುದ್ಧ ಯುವ ಆಟಗಾರರಾದ ಸಂಜು ಸಾಮ್ಸನ್, ರಾಹುಲ್ ಚಹಾರ್ಗೆ ಅವಕಾಶ ನೀಡಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜು ಸಾಮ್ಸನ್, ರಾಹುಲ್ ಚಹಾರ್ ಹಾಗೂ ಮನೀಷ್ ಪಾಂಡೆಗೆ ಅವಕಾಶ ಸಿಕ್ಕಿರಲಿಲ್ಲ. ಆ ಪಂದ್ಯದಲ್ಲಿ ಸೋಲುಕಂಡಿರುವ ಹಿನ್ನಲೆಯಲ್ಲಿ ನಾಯಕ ರೋಹಿತ್ ತಂಡದಲ್ಲಿ ಕೆಲ ಬದಲಾವಣೆ ಬಯಸಿದ್ದು ಯುವಕರಿಗೆ ಹೆಚ್ಚು ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಈಗಾಗಿ ಪಂತ್ ಜಾಗಕ್ಕೆ ಸಂಜು ಹಾಗೂ ರಾಹುಲ್ ಅಥವಾ ಅಯ್ಯರ್ ಜಾಗಕ್ಕೆ ಮನೀಷ್ ಪಾಂಡೆ, ವಾಷಿಂಗ್ಟನ್ ಸುಂದರ್ ಜಾಗದಲ್ಲಿ ರಾಹುಲ್ ಚಹಾರ್ಗೆ ಅವಕಾಶ ದೊರೆಯಬಹುದು ಎನ್ನಲಾಗುತ್ತಿದೆ.
ಸಂಜು ಸಾಮ್ಸನ್ ಇತ್ತೀಚೆಗೆ ಮುಗಿದ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದರು. ಇನ್ನು ಮನೀಷ್ ಪಾಂಡೆ ಕೂಡ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಪಟ್ಟಿಯಲ್ಲಿ ಟಾಪ್ 10ಯಲ್ಲಿ ಕಾಣಿಸಿಕೊಂಡಿದ್ದರು.
ಉದಯೋನ್ಮುಖ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತೇವೆ ಎಂದಿರುವ ರೋಹಿತ್ ಮಾತನ್ನು ನೋಡಿದರೆ ಸಂಜು ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಆದರೆ ರಾಹುಲ್ ಚಹಾರ್ ಹಾಗೂ ಪಾಂಡೆ ಆಯ್ಕೆಯ ಬಗ್ಗೆ ನಾಳೆ ತಿಳಿಯಲಿದೆ.
ಎರಡನೇ ಟಿ20 ಪಂದ್ಯ ರಾಜ್ಕೋಟ್ನಲ್ಲಿ ಗುರುವಾರ ಸಂಜೆ 7 ಗಂಟೆಗೆ ನಡೆಯಲಿದೆ.