ದುಬೈ: ಭಾರತ ತಂಡ ಅಹ್ಮದಾಬಾದ್ನಲ್ಲಿ ಶನಿವಾರ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಮತ್ತು 25 ರನ್ಗಳಿಂದ ಮಣಿಸುವ ಮೂಲಕ 4 ಪಂದ್ಯಗಳ ಸರಣಿಯನ್ನು 3-1ರಲ್ಲಿ ವಶಪಡಿಸಿಕೊಂಡಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಗ್ರಸ್ಥಾನದೊಂದಿಗೆ ಟೂರ್ನಿಯ ಲೀಗ್ ಹಂತವನ್ನು ಮುಗಿಸಿದೆ.
"ಇಂಗ್ಲೆಂಡ್ ವಿರುದ್ಧ ವಿಜಯ ಸಾಧಿಸುವ ಮೂಲಕ ಲೀಗ್ ಹಂತ ಮುಗಿಸಿರುವ ಭಾರತ ತಂಡ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ." ಎಂದು ಐಸಿಸಿ ಟ್ವೀಟ್ ಮಾಡಿದೆ.
ಶನಿವಾರ ಇಂಗ್ಲೆಂಡ್ ತಂಡ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಬೌಲಿಂಗ್ ಎದುರಿಸಲಾಗದೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 135 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲುಂಡಿತು.
-
That victory against England means India finish the league phase of the inaugural ICC World Test Championship with a fine view from the top of the table 🔝#INDvENG | #WTC21 pic.twitter.com/rXFiKPXdB7
— ICC (@ICC) March 6, 2021 " class="align-text-top noRightClick twitterSection" data="
">That victory against England means India finish the league phase of the inaugural ICC World Test Championship with a fine view from the top of the table 🔝#INDvENG | #WTC21 pic.twitter.com/rXFiKPXdB7
— ICC (@ICC) March 6, 2021That victory against England means India finish the league phase of the inaugural ICC World Test Championship with a fine view from the top of the table 🔝#INDvENG | #WTC21 pic.twitter.com/rXFiKPXdB7
— ICC (@ICC) March 6, 2021
ಈ ಗೆಲುವಿನ ಮೂಲಕ ಭಾರತ ತಂಡ 17 ಪಂದ್ಯಗಳನ್ನಾಡಿ 12 ಜಯ, 4 ಸೋಲು ಮತ್ತು 1 ಡ್ರಾ ದೊಂದಿಗೆ 520 ಅಂಕ ಮತ್ತು 72.2ರ ಗೆಲುವಿನ ಸರಾಸರಿ ಅಂಕದೊಂದಿಗೆ ಅಗ್ರಸ್ಥಾನ ಪಡೆದಿದೆ. 2ನೇ ಸ್ಥಾನದಲ್ಲಿ ಚಾಂಪಿಯನ್ಶಿಪ್ನಲ್ಲಿ ಭಾರತದ ಎದುರಾಳಿಯಾಗಿರುವ ನ್ಯೂಜಿಲ್ಯಾಂಡ್ ತಂಡ 70ರ ಸರಾಸರಿ ಅಂಕದೊಂದಿಗೆ 2ನೇ ಸ್ಥಾನ ಪಡೆದಿದೆ. ನ್ಯೂಜಿಲ್ಯಾಂಡ್ 420 ಅಂಕಗಳನ್ನು ಹೊಂದಿದೆ. ಆಸ್ಟ್ರೇಲಿಯಾ (69.2), ಇಂಗ್ಲೆಂಡ್(61.4) 3 ಮತ್ತು 4ನೇ ಸ್ಥಾನ ಪಡೆದುಕೊಂಡಿವೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಲಾರ್ಡ್ಸ್ನಲ್ಲಿ ಜೂನ್ನಲ್ಲಿ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಕಾದಾಡಲಿವೆ.
ಇದನ್ನು ಓದಿ:ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಅಗ್ರಸ್ಥಾನಕ್ಕೇರಿದ ಭಾರತ