ನಾರ್ತ್ ಸೌಂಡ್: ಭಾರತ ಎ ತಂಡದ ನಾಯಕ ಮನೀಷ್ ಪಾಂಡೆ ಸಿಡಿಸಿದ ಅಬ್ಬರದ ಶತಕ ಹಾಗೂ ಬೌಲರ್ಗಳ ಮಾರಕ ದಾಳಿಯ ನೆರವಿನಿಂದ ಭಾರತ ಎ ತಂಡ 148 ರನ್ಗಳ ಭರ್ಜರಿ ಜಯ ಸಾಧಿಸಿದೆ.
ವಿಂಡೀಸ್ ಎ ವಿರುದ್ಧ ಟಾಸ್ ಗೆದ್ದ ಭಾರತ ಎ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ 77(81),ನಾಯಕ ಮನೀಷ್ ಪಾಂಡೆ 100(87) ಹಾಗೂ ಶ್ರೇಯಸ್ ಅಯ್ಯರ್ 47(69) ರನ್ಗಳಿಸಿ 295 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ವಿಂಡೀಸ್ ಪರ ರೊಮೇರಿಯೊ ಶೆಫರ್ಡ್ 2 ವಿಕೆಟ್,ಕಾರ್ನವಲ್ 2,ಕೀಮೋ ಪಾಲ್ ಹಾಗೂ ರೈಫೆರ್ ತಲಾ ಒಂದು ವಿಕೆಟ್ ಪಡೆದರು.
296 ರನ್ಗಳ ಗುರಿ ಪಡೆದ ವೆಸ್ಟಿಂಡೀಸ್ ತಂಡ ಕೇವಲ 34.2 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಅಗುವ ಮೂಲಕ 148 ರನ್ಗಳ ಹೀನಾಯ ಸೋಲನುಭವಿಸಿತು. ಕೃನಾಲ್ ಪಾಂಡ್ಯ 25ಕ್ಕೆ 5, ಹನುಮ ವಿಹಾರಿ 23ಕ್ಕೆ 2, ವಾಸಿಂಗ್ಟನ್ ಸುಂದರ್,ನವ್ದೀಪ್ ಸೈನಿ ಹಾಗೂ ಆವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ವಿಂಡೀಸ್ ಪರ 10 ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದಿದ್ದ ಕೀಮೋ ಪಾಲ್ 34 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು. ಸುನಿಲ್ ಅಂಬ್ರಿಸ್ 30, ಕ್ಯಾಂಪ್ಬೆಲ್ 21 ರನ್ಗಳಿಸಿದರು.
ಈ ಜಯದ ಮೂಲಕ ಭಾರತ ಎ ತಂಡ 5 ಏಕದಿನ ಸರಣಿಯನ್ನ ಇನ್ನು ಒಂದು ಏಕದಿನ ಪಂದ್ಯ ಉಳಿದಿರುವಂತೆ ಸರಣಿ ವಶಪಡಿಸಿಕೊಂಡಿತು.