ಮುಂಬೈ: ಭಾರತೀಯ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 1,000 ರನ್ ಪೂರೈಸಿದ ಭಾರತದ 5ನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ 'ಗಬ್ಬರ್ ಸಿಂಗ್' ಈ ಸಾಧನೆಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ನಂತರ ಆಸೀಸ್ ವಿರುದ್ಧ ಈ ಸಾಧನೆ ಮಾಡಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು.
ಈ ಪಂದ್ಯದಲ್ಲಿ ಎಡಗೈ ದಾಂಡಿಗ ಶಿಖರ್ ಧವನ್, 91 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳ ನೆರವಿನೊಂದಿಗೆ 74 ರನ್ಗಳಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಧವನ್ ಜೊತೆಗೂಡಿದ ಕೆ.ಎಲ್.ರಾಹುಲ್ 47 ರನ್ಗಳಿಸಿ ಭಾರತ 250 ರನ್ ಗಡಿದಾಟಲು ನೆರವಾದರು.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ಗಳಿಸಿದವರು:
ಸಚಿನ್ ತೆಂಡೂಲ್ಕರ್- 3,077 (70 ಇನ್ನಿಂಗ್ಸ್)
ರೋಹಿತ್ ಶರ್ಮಾ- 2047 (38 ಇನ್ನಿಂಗ್ಸ್)
ವಿರಾಟ್ ಕೊಹ್ಲಿ- 1,743 (36 ಇನ್ನಿಂಗ್ಸ್)
ಎಂ.ಎಸ್. ಧೋನಿ - 1,660 (48 ಇನ್ನಿಂಗ್ಸ್)
ಶಿಖರ್ ಧವನ್- 1,049 (25 ಇನ್ನಿಂಗ್ಸ್)