ETV Bharat / sports

ಶುಬ್ಮನ್ ಗಿಲ್ 6ನೇ ಸ್ಥಾನದಲ್ಲಿ ಕಣಕ್ಕಿಳಿಯಲಿ: ಅಜಿತ್ ಅಗರ್ಕರ್ ಸಲಹೆ - ಶುಬ್ಮನ್ ಗಿಲ್ ಬಗ್ಗೆ ಅಜಿತ್ ಅಗರ್ಕರ್ ಹೇಳಿಕೆ

ಟೆಸ್ಟ್ ಸರಣಿಯಲ್ಲಿ ಶುಬ್ಮನ್ ಗಿಲ್ 6ನೇ ಸ್ಥಾನದಲ್ಲಿ ಕಣಕ್ಕಿಳಿಬೇಕು ಎಂದು ಟೀಂ ಇಂಡಿಯಾ ಮಾಜಿ ವೇಗಿ ಅಜಿತ್ ಅಗರ್ಕರ್ ಹೇಳಿದ್ದಾರೆ.

Gill should bat at No 6 in Tests
ಶುಬ್ಮನ್ ಗಿಲ್
author img

By

Published : Dec 14, 2020, 7:27 PM IST

ನವದೆಹಲಿ: ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ಮರಳಿದ ನಂತರ ಶುಬ್ಮನ್ ಗಿಲ್ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಟೀಂ ಇಂಡಿಯಾ ಮಾಜಿ ವೇಗಿ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಶುಬ್ಮನ್ ಗಿಲ್, ಟೆಸ್ಟ್ ಸರಣಿಗೂ ಮೊದಲು ಆಡಿದ ಎರಡು ಅಭ್ಯಾಸ ಪಂದ್ಯಗಳಲ್ಲಿ ಎಲ್ಲರನ್ನೂ ಆಕರ್ಷಿಸಿದ್ದಾರೆ. ಗುಲಾಬಿ ಚೆಂಡಿನ ಅಭ್ಯಾಸ ಪಂದ್ಯದಲ್ಲಿ, ಆಸ್ಟ್ರೇಲಿಯಾ ಎ ವಿರುದ್ಧ 43 ಮತ್ತು 65 ರನ್​ ಗಳಿಸಿದ್ದಾರೆ.

ಕೊಹ್ಲಿ ನಿರ್ಗಮನದ ನಂತರ, ಅಜಿಂಕ್ಯಾ ರಹಾನೆ ನಾಲ್ಕನೇ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಹನುಮಾ ವಿಹಾರಿ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ವಿಹಾರಿ ಮತ್ತು ರಹಾನೆ ಪೂಜಾರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಇವರೊಂದಿಗೆ ಶುಬ್ಮನ್ ಗಿಲ್ 6ನೇ ಸ್ಥಾನದಲ್ಲಿ ಕಣಕ್ಕಿಳಿಬೇಕು ಎಂದಿದ್ದಾರೆ.

Gill should bat at No 6 in Tests
ಶುಬ್ಮನ್ ಗಿಲ್

ಗಿಲ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು ಎಂದು ಭಾವಿಸುತ್ತೇನೆ. ಏಕೆಂದರೆ ಈ ಸಮಯದಲ್ಲಿ ಅವರಿಗಿಂತ ಉತ್ತಮ ಆಯ್ಕೆ ಕಾಣುತ್ತಿಲ್ಲ" ಎಂದು ಅಗರ್ಕರ್ ಹೇಳಿದ್ದಾರೆ.

"6ನೇ ಸ್ಥಾನಕ್ಕೆ ಜನರು ಕೆಎಲ್ ರಾಹುಲ್ ಅವರನ್ನು ಸೂಚಿಸಬಹುದು. ಆದರೆ ನಾನು ನಾನು ಶುಬ್ಮನ್ ಗಿಲ್ ಅವರನ್ನು ಆಯ್ಕೆ ಮಾಡುತ್ತೇನೆ" ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.