ಬ್ರಿಸ್ಬೇನ್: ರಾಷ್ಟ್ರೀಯ ತಂಡದಲ್ಲಿ ಆಡುವ ಮುನ್ನ ಭಾರತ 'ಎ' ತಂಡಕ್ಕಾಗಿ ಹಿಂದೆ ವಿದೇಶಿ ಪ್ರವಾಸ ಕೈಗೊಂಡಿದ್ದು ಸಾಕಷ್ಟು ನೆರವಾಯಿತು ಎಂದು ಭಾರತ ತಂಡದ ವೇಗಿ ಶಾರ್ದುಲ್ ಠಾಕೂರ್ ಭಾನುವಾರ ತಿಳಿಸಿದ್ದಾರೆ.
ಅಜಿಂಕ್ಯ ರಹಾನೆ ನೇತೃತ್ವದ ಭಾರತ ತಂಡ ಭಾನುವಾರ 4ನೇ ದಿನ 336 ರನ್ಗಳಿಗೆ ಆಲೌಟ್ ಆಗಿದೆ. 186 ರನ್ಗಳಿಗೆ 6 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಶಾರ್ದುಲ್ ಠಾಕೂರ್ (67) ಮತ್ತು ವಾಷಿಂಗ್ಟನ್ ಸುಂದರ್ (62) 123 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
ಎ-ಪ್ರವಾಸಗಳು ದ್ವಿತೀಯ ದರ್ಜೆ ತಂಡಗಳಿಗೆ ಸಾಕಷ್ಟು ಅನುಭವ ನೀಡಿವೆ. ಇವು ಇಂದು ನನಗೆ ತುಂಬಾ ಅನುಕೂಲವಾದವು. ನಾವು 2016ರ ಪ್ರವಾಸದಲ್ಲಿ ಅಲನ್ ಬಾರ್ಡರ್ ಮೈದಾನದಲ್ಲಿ 4 ದಿನಗಳ ಪಂದ್ಯಗಳನ್ನು ಆಡಿದ್ದೆವು. ಅಲ್ಲಿನ ಪಿಚ್ಗಳು ವಿಭಿನ್ನವಾಗಿದ್ದವು. ಆದರೆ ಆಸ್ಟ್ರೇಲಿಯನ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನೆರವಾಗಿವೆ. ನೀವು ಭಾರತ ಎ ತಂಡದಿಂದ ಹಿರಿಯರ ತಂಡಕ್ಕೆ ಬಡ್ತಿ ಪಡೆದಾಗ ಪರಿವರ್ತನೆ ಅಷ್ಟು ಕಷ್ಟವಲ್ಲ. ಆದರೆ ನೀವು ಅದನ್ನು ಯಾವ ಮಟ್ಟದಲ್ಲಿ ಕಾರ್ಯಗತಗೊಳಿಸುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ ಶಾರ್ದುಲ್ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
-
Australia openers Marcus Harris and David Warner post 21/0 at stumps on day three after the Josh Hazlewood-led attack bowls India out for 336.#AUSvIND ⏩ https://t.co/oDTm20rn07 pic.twitter.com/5YZNixtt2m
— ICC (@ICC) January 17, 2021 " class="align-text-top noRightClick twitterSection" data="
">Australia openers Marcus Harris and David Warner post 21/0 at stumps on day three after the Josh Hazlewood-led attack bowls India out for 336.#AUSvIND ⏩ https://t.co/oDTm20rn07 pic.twitter.com/5YZNixtt2m
— ICC (@ICC) January 17, 2021Australia openers Marcus Harris and David Warner post 21/0 at stumps on day three after the Josh Hazlewood-led attack bowls India out for 336.#AUSvIND ⏩ https://t.co/oDTm20rn07 pic.twitter.com/5YZNixtt2m
— ICC (@ICC) January 17, 2021
ನಾನು ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇನೆ. ಸಮಯ ಸಿಕ್ಕಾಗ ನೆಟ್ಸ್ನಲ್ಲಿ ಥ್ರೋಡೌನ್ಸ್ ಬಳಸುವಾಗ ಬ್ಯಾಟಿಂಗ್ ಅಭ್ಯಾಸ ಮಾಡುತ್ತೇನೆ. ಇದು ನಾನು ಬ್ಯಾಟಿಂಗ್ ತರಬೇತಿ ಮಾಡುವ ಕ್ಷಣಗಳಲ್ಲಿ ಒಂದು. ನನಗೆ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಒದಗಿಬಂದಿದೆ. ನಾನು ದೀರ್ಘಾವದಿಯಲ್ಲಿ ಕ್ರೀಸ್ನಲ್ಲಿದ್ದರೆ ತಂಡಕ್ಕೆ ಪ್ರಯೋಜನವಾಗುತ್ತದೆ ಎನ್ನುವುದು ನನಗೆ ತಿಳಿದಿದೆ. ನಾನು ಸುಂದರ್ ಅವರೊಂದಿಗೆ ಹೆಚ್ಚು ಬ್ಯಾಟಿಂಗ್ ಮಾಡಿರಲಿಲ್ಲ. ಒಂದೊಮ್ಮೆ ಮಾತ್ರ ಟಿ20 ಪಂದ್ಯಕ್ಕಾಗಿ ಅಭ್ಯಾಸ ಮಾಡಿದ್ದೆವು ಎಂದು ಅದ್ಭುತ ಜೊತೆಯಾಟದ ಬಗ್ಗೆ ತಿಳಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ನಾವು ಸ್ಕೋರ್ಬೋರ್ಡ್ ನೋಡುತ್ತಿರಲಿಲ್ಲ, ನಾವೂ ಮೈದಾನದಲ್ಲಿ ಹೆಚ್ಚು ಸಮಯ ಕಳೆಯಬೇಕೆಂದು ನಿರ್ಧರಿಸಿದ್ದೆವು. ಅವರ ಬೌಲರ್ಗಳು ದಣಿದು ನಿಯಂತ್ರಣ ತಪ್ಪಿ ಎಸೆಯುವ ಎಸೆತಗಳನ್ನು ನಾವು ದಂಡಿಸುತ್ತಿದ್ದೆವು. ನಮ್ಮಿಬ್ಬರ ಮಧ್ಯೆ ಸಂವಹನ ಚೆನ್ನಾಗಿ ನಡೆದಿದ್ದರಿಂದ ಉತ್ತಮ ಜೊತೆಯಾಟ ಒದಗಿ ಬಂದಿತು ಎಂದು ಠಾಕೂರ್ ತಿಳಿಸಿದ್ದಾರೆ.
ಇದನ್ನು ಓದಿ: ಶಾರ್ದುಲ್ ಠಾಕೂರ್, ಸುಂದರ್ ಆಟಕ್ಕೆ ಕ್ಯಾಪ್ಟನ್ ಕೊಹ್ಲಿ ಬಹುಪರಾಕ್