ಮುಂಬೈ: ಮಂಗಳವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ಗಳ ಸೋಲುಕಂಡಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ.
ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿರುವ ಧವನ್, ಕೆ.ಎಲ್.ರಾಹುಲ್ ಔಟ್ ಆಗುವುದಕ್ಕಿಂತ ಮೊದಲು ಎಲ್ಲವೂ ಉತ್ತಮವಾಗಿತ್ತು. ನಾನು ಮತ್ತು ರಾಹುಲ್ ಬ್ಯಾಟಿಂಗ್ ವೇಗ ಹೆಚ್ಚಿಸ ಬೇಕು ಎಂದು ಮಾತನಾಡಿಕೊಂಡೆವು. ಆದರೆ, ಬ್ಯಾಕ್ ಟು ಬ್ಯಾಕ್ 4 ವಿಕೆಟ್ ಉರುಳಿದ್ವು, ಅಲ್ಲೆ ನಾವು ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
- ' class='align-text-top noRightClick twitterSection' data=''>
300 ರನ್ ಗಳಿಸುವುದು ನಮ್ಮ ಯೋಜನೆಯಾಗಿತ್ತು, ಆದರೆ, ಮೇಲಿಂದ ಮೇಲೆ ವಿಕೆಟ್ ಉರುಳಿದ್ದು ನಮಗೆ ಮುಳುವಾಗಿ, ಕಡಿಮೆ ರನ್ ಗಳಿಸುವಂತಾಯಿತು ಎಂದಿದ್ದಾರೆ. ಅಲ್ಲದೆ. ಬೌಲಿಂಗ್ನಲ್ಲೂ ಎಡವಿದ ನಾವು ,ವಿಕೆಟ್ ಕೀಳುವಲ್ಲಿ ಯಶ ಸಾಧಿಸಲಿಲ್ಲ. ಇಂದಿನ ಪಂದ್ಯದ ತಪ್ಪುಗಳು ಪುನರಾವರ್ತನೆಯಾಗದಂತೆ. ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ಭರವಸೆಯನ್ನೂ ಇದೇ ವೇಳೆ ವ್ಯಕ್ತಪಡಿಸಿದರು.
ಮೂರನೇ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಸಿದ ಅವರು, ವಿರಾಟ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದಾರೆ. ಅವರು ಯಾವ ಸ್ಥಾನದಲ್ಲಿ ಕಣಕ್ಕಿಳಿಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ಆ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.