ಸಿಡ್ನಿ: ಆಸ್ಟ್ರೆಲಿಯಾ ಎ ತಂಡದ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಸಿಡಿಸಿದ ಅಜೇಯ ಶತಕದ ನೆರವಿನಿಂದ ಭಾರತ ಎ ತಂಡ ಮೊದಲ ದಿನ 8 ವಿಕೆಟ್ ಕಳೆದುಕೊಂಡು 237 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಎ ತಂಡಕ್ಕೆ ಯುವ ಆಟಗಾರರಾದ ಪೃಥ್ವಿ ಶಾ ಮತ್ತು ಶುಬ್ಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು. ನಂತರ ಬಂದ ಹನುಮ ವಿಹಾರಿ ಕೂಡ 15 ರನ್‌ಗಳಿಗೆ ಔಟಾದರು.
40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿದ್ದ ಸಂದರ್ಭದಲ್ಲಿ ನಾಲ್ಕನೇ ವಿಕೆಟ್ ಕ್ರೀಸಿನಲ್ಲಿ ಒಂದಾದ ಅನುಭವಿಗಳಾದ ಚೇತೇಶ್ವರ್ ಪೂಜಾರ ಮತ್ತು ನಾಯಕ ರಹಾನೆ 76 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಪೂಜಾರ 140 ಎಸೆತಗಳಲ್ಲಿ 54 ರನ್ಗಳಿಸಿ ಔಟಾದರು.
-
End of Day 1: Ajinkya Rahane's unbeaten 108, Cheteshwar Pujara's 54 take Indians to 237/8 at stumps. pic.twitter.com/KQ6TX3fLMt
— BCCI (@BCCI) December 6, 2020 " class="align-text-top noRightClick twitterSection" data="
">End of Day 1: Ajinkya Rahane's unbeaten 108, Cheteshwar Pujara's 54 take Indians to 237/8 at stumps. pic.twitter.com/KQ6TX3fLMt
— BCCI (@BCCI) December 6, 2020End of Day 1: Ajinkya Rahane's unbeaten 108, Cheteshwar Pujara's 54 take Indians to 237/8 at stumps. pic.twitter.com/KQ6TX3fLMt
— BCCI (@BCCI) December 6, 2020
ಓದಿ: ಸ್ಮಿತ್, ವೇಡ್ ಆರ್ಭಟ: ಭಾರತಕ್ಕೆ 195ರನ್ಗಳ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ
ಪೂಜಾರ ಔಟಾಗುತ್ತಿದ್ದಂತೆ ಕ್ರೀಸಿಗೆ ಬಂದ ವೃದ್ಧಿಮಾನ್ ಸಹಾ(0), ಅಶ್ವಿನ್(5), ಉಮೇಶ್ ಯಾದವ್(24) ಹೆಚ್ಚು ಹೊತ್ತು ನಿಲ್ಲದೇ ಹೋದರು. ವಿಕೆಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಹೋರಾಟ ನಡೆಸಿದ ರಹಾನೆ 228 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 108 ರನ್ಗಳಿಸಿ ಅಜೇಯರಾಗುಳಿದರು.
ಆಸ್ಟ್ರೇಲಿಯಾ ಎ ಪರ ಜೇಮ್ಸ್ ಪ್ಯಾಟಿನ್ಸನ್ 3 ವಿಕೆಟ್, ಮೈಕಲ್ ನಸೀರ್, ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ ಹಾಗೂ ಜಾಕ್ಸನ್ ಬರ್ಡ್ 1 ವಿಕೆಟ್ ಪಡೆದರು.