ಲಾರ್ಡ್ಸ್: ವೃತ್ತಿ ಜೀವನದ ಕೊನೆಯ ವಿಶ್ವಕಪ್ ಆಡುತ್ತಿರುವ ಇಮ್ರಾನ್ ತಾಹೀರ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಪಡೆಯುವ ಮೂಲಕ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ತಮ್ಮ ತವರು ತಂಡದ ವಿರುದ್ದ ತಾಹೀರ್ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಪಂಜಾಬ್ ಮೂಲದವರಾದ ತಾಹೀರ್ ಪಾಕಿಸ್ತಾನದ ಪರ ಅಂಡರ್ 19 ಪಂದ್ಯವಾಡಿದ್ದರು.
ನಿವೃತ್ತಿ ಅಂಚಿನಲ್ಲಿರುವ ತಾಹೀರ್ ಪಂದ್ಯದಲ್ಲಿ ತಲಾ 44 ರನ್ಗಳಿಸಿದ್ದ ಇಮಾಮ್ ಉಲ್ ಹಕ್ ಹಾಗೂ ಫಖರ್ ಜಮಾನ್ ವಿಕೆಟ್ ಪಡೆಯುವ ಮೂಲಕ ವಿಶ್ವಕಪ್ನಲ್ಲಿ 39 ವಿಕೆಟ್ ಪಡೆದರು. ಈ ಮೂಲಕ 38 ವಿಕೆಟ್ ಪಡೆದಿದ್ದ ಆಲನ್ ಡೊನಾಲ್ಡ್ರ ದಾಖಲೆ ಬ್ರೇಕ್ ಮಾಡಿದರು. ಇದೀಗ ತಾಹೀರ್ ದಕ್ಷಿಣ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇಮ್ರಾನ್ ತಾಹೀರ್ 2011ರ ವಿಶ್ವಕಪ್ನಲ್ಲಿ 14 ವಿಕೆಟ್, 2015ರ ವಿಶ್ವಕಪ್ನಲ್ಲಿ 15 ವಿಕೆಟ್ ಹಾಗೂ 2019ರ ವಿಶ್ವಕಪ್ನಲ್ಲಿ 10* ವಿಕೆಟ್ ಪಡೆದಿದ್ದಾರೆ. ಇನ್ನು 2 ಪಂದ್ಯಗಳು ಬಾಕಿ ಇದ್ದು , ಇನ್ನಷ್ಟು ವಿಕೆಟ್ ಪಡೆದು ತಮ್ಮ ದಾಖಲೆಯನ್ನು ಉತ್ತಮ ಪಡೆಸಿಕೊಳ್ಳುವ ಅವಕಾಶವಿದೆ.