ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಐಸಿಸಿ ಚೆಂಡು ಹೊಳೆಯಲು ಎಂಜಲು ಬಳಕೆ ಮಾಡುವುದನ್ನು ಕ್ರಿಕೆಟ್ ಸಲಹಾ ಸಮಿತಿಯ ಶಿಫಾರಸಿನ ಮೇಲೆ ನಿಷೇಧ ಹೇರಲಾಗಿದೆ. ಆದರೆ, ಅದಕ್ಕೆ ಪರ ವಿರೋದ ಚರ್ಚೆ ನಡೆಯುತ್ತಿರುವಾಗ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅಮೂಲ್ಯ ಸಲಹೆ ನೀಡಿದ್ದಾರೆ.
ಲಾಲಾರಸ ಬಳಕೆ ನಿಷೇಧ ಮಾಡಿದರೆ ಬೌಲರ್ಗಳಿಗೆ ಕಷ್ಟವಾಗಲಿದೆ ಎಂದು ಕೆಲವು ಮಾಜಿ ಬೌಲರ್ಗಳು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಚೆಂಡು ಹೊಳೆಯುವಂತೆ ಮಾಡಲು ಎಂಜಲು ಬಳಸಬೇಕೆಂದೇನೂ ಇಲ್ಲ, ಬದಲಾಗಿ ಬೆವರನ್ನೂ ಸಹ ಬಳಸಬಹುದು ಎಂದಿದ್ದರು. ಆದರೆ, ಅಗರ್ಕರ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೊನಾ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಎಂದು ಬಂದರೆ ಅಂತಹ ಬೌಲರ್ಗಳು ಎಂಜಲು ಬಳಕೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಐಸಿಸಿ ಎಂಜಲು ಬಳಕೆ ನಿಷೇಧ ಮಾಡಿರುವುದು ಉತ್ತಮ ನಿರ್ಧಾರವಾಗಿದೆ. ಆದರೆ ಕೆಲವು ಷರತ್ತುಗಳೊಡನೆ ಲಾಲಾರಸ ಬಳಕೆಗೆ ಅವಕಾಶ ನೀಡಬೇಕು ಎಂದಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನ ಆಟಗಾರರನ್ನು ಪರೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಎಂಜಲು ಬಳಕೆ ಮಾಡುವುದರಿಂದ ಏನೂ ಅಪಾಯವಾಗುವುದಿಲ್ಲ,. ಈಗಾಗಲೆ ಕ್ರಿಕೆಟ್ ಬ್ಯಾಟ್ಸ್ಮನ್ಗಳ ಪರವಾಗಿದೆ. ಆದರಲ್ಲೂ ಎಂಜಲೂ ಬಳಕೆ ನಿಷೇಧ ಮಾಡಿದರೆ ಬೌಲರ್ಗಳ ಕೈ ಕತ್ತರಿಸಿದಂತಾಗುತ್ತದೆ ಎಂದು ಅಜಿತ್ ಅಗರ್ಕರ್ ಪ್ರತಿಪಾದಿಸಿದ್ದಾರೆ.