ETV Bharat / sports

ಶಮಿ ಮಾರಕ ದಾಳಿ... ಭಾರತಕ್ಕೆ ವಿಂಡೀಸ್​ ವಿರುದ್ಧ 125 ರನ್​ಗಳ ಬೃಹತ್​ ಜಯ - ಶಮಿ

ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿದ ವೆಸ್ಟ್​ ಇಂಡೀಸ್​, 143 ರನ್​ಗಳಿಗೆ ಆಲೌಟ್​ ಆಗುವ ಮೂಲಕ 125 ರನ್​ಗಳ ಹೀನಾಯ ಸೋಲನುಭವಿಸಿದೆ.

win
author img

By

Published : Jun 27, 2019, 10:27 PM IST

Updated : Jun 27, 2019, 10:48 PM IST

ಮ್ಯಾಂಚೆಸ್ಟರ್​: ವಿಂಡೀಸ್​ ವಿರುದ್ಧ ಮೊಹ್ಮಮದ್​ ಶಮಿ ಹಾಗೂ ಬುಮ್ರಾರ ಅದ್ಭುತ ಬೌಲಿಂಗ್​ ದಾಳಿ ನೆರವಿನಿಂದ ಭಾರತ ತಂಡ 125 ರನ್​ಗಳ ಬೃಹತ್​ ಜಯಸಾಧಿಸಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಟೀಮ್​ ಇಂಡಿಯಾಗೆ ನಾಯಕ ವಿರಾಟ್​ ಕೊಹ್ಲಿ 72, ಧೋನಿ 56, ರಾಹುಲ್ 48 ಹಾಗೂ ಹಾರ್ದಿಕ್​ ಪಾಂಡ್ಯ 46 ರನ್​ಗಳಿಸಿ 269 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಭಾರತ ನೀಡಿದ 269 ರನ್​ಗಳ ಗುರಿ ಬೆನ್ನೆತ್ತಿದ ವಿಂಡೀಸ್​ ಭಾರತ ಸಂಘಟಿ ಬೌಲಿಂಗ್​ ದಾಳಿಗೆ ನಲುಗಿ ಕೇವಲ 34.2 ಓವರ್​ಗಳಲ್ಲಿ 143 ರನ್​ಗಳಿಗೆ ಸರ್ವಪತನಕಂಡಿತು. ಇಂದೇ ಮೊದಲ ಪಂದ್ಯವಾಡಿದ ಸುನಿಲ್​ ಆ್ಯಂಬ್ರಿಸ್ 31 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ನಿಕೋಲಸ್​ ಪೂರನ್​ 28 ರನ್​ಗಳಿಸಿದರು.

ಉಳಿದಂತೆ ಸ್ಫೋಟಕ ಬ್ಯಾಟ್ಸ್​ಮನ್​ ಗೇಲ್​ 6, ಶೈ ಹೋಪ್​ 5, ಜಾಸನ್​ ಹೋಲ್ಡರ್​ 6, ಹೆಟ್ಮೈರ್​ 18, ಬ್ರಾತ್​ವೈಟ್​ 1, ಫಬಿಯನ್​ ಅಲೆನ್​ 0, ಕಾಟ್ರೆಲ್​ 10, ಒಸಾನೆ ಥಾಮಸ್​ 6 ರನ್​ಗಳಿಸಿ ಔಟಾದರು. ಕೆಮರ್​ ರೋಚ್ 14 ರನ್​ಗಳಿಸಿ​ ಔಟಾಗದೆ ಉಳಿದರು.

ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್ ಪಡೆದಿದ್ದ ಮೊಹಮ್ಮದ್​ ಶಮಿ ಇಂದು ಕೂಡ 16 ರನ್​ ನೀಡಿ 4 ವಿಕೆಟ್​ ಪಡೆದು ಮಿಂಚಿದರು. ಯಾರ್ಕರ್​ ಕಿಂಗ್​ ಬುಮ್ರಾ 6 ಓವರ್​ಗಳಲ್ಲಿ ಕೇವಲ 9 ರನ್​ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಚಹಲ್​ 2, ಕುಲದೀಪ್​ ಯಾದವ್​ 1, ಹಾರ್ದಿಕ್​ ಪಾಂಡ್ಯ 1 ವಿಕೆಟ್​ ಪಡೆದು ಮಿಂಚಿದರು.

Intro:Body:Conclusion:
Last Updated : Jun 27, 2019, 10:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.