ಲಾರ್ಡ್ಸ್: ಬಾಬರ್ ಅಜಂ ಹಾಗೂ ಹ್ಯಾರೀಸ್ ಸೊಹೈಲ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಅಫ್ರಿಕಾ ತಂಡಕ್ಕೆ 309 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಇಮಾಮ್ ಉಲ್ ಹಕ್ (44) ಹಾಗೂ ಫಖರ್ ಜಮಾನ್ (44) 81 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ನೀಡಿದರು. ಈ ಇಬ್ಬರು ಆರಂಭಿಕರನ್ನು ಇಮ್ರಾನ್ ತಾಹೀರ್ ಪೆವಿಲಿಯನ್ಗಟ್ಟಿದರು.
ನಂತರ ಬಂದ ಬಾಬರ್ ಅಜಂ(69) ಹಾಗೂ ಹಫೀಜ್(20) 3ನೇ ವಿಕೆಟ್ ಜೊತೆಯಾಟದಲ್ಲಿ 45 ರನ್ಗಳ ಜೊತೆಯಾಟ ನೀಡಿದರು 20 ರನ್ಗಳಿಸಿದ್ದ ಹಫೀಜ್ ಮ್ಯಾಕ್ರಮ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.143ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಬಾಬರ್ ಹಾಗೂ ಹ್ಯಾರೀಸ್ ಸೋಹೈಲ್ 82 ರನ್ಗಳ ಜೊತೆಯಾಟ ನೀಡಿ ಕುಸಿತದಿಂದ ಪಾರು ಮಾಡಿದರು.
-
Excellent finish for Pakistan! 👏
— Cricket World Cup (@cricketworldcup) June 23, 2019 " class="align-text-top noRightClick twitterSection" data="
Sohail led the charge with his 59-ball 89 after Azam’s half-century and contributions from the openers. 🇵🇰 have set South Africa a target of 309.
Will that be enough? #CWC19 | #WeHaveWeWill | #ProteaFire pic.twitter.com/Jkjt5Pj47u
">Excellent finish for Pakistan! 👏
— Cricket World Cup (@cricketworldcup) June 23, 2019
Sohail led the charge with his 59-ball 89 after Azam’s half-century and contributions from the openers. 🇵🇰 have set South Africa a target of 309.
Will that be enough? #CWC19 | #WeHaveWeWill | #ProteaFire pic.twitter.com/Jkjt5Pj47uExcellent finish for Pakistan! 👏
— Cricket World Cup (@cricketworldcup) June 23, 2019
Sohail led the charge with his 59-ball 89 after Azam’s half-century and contributions from the openers. 🇵🇰 have set South Africa a target of 309.
Will that be enough? #CWC19 | #WeHaveWeWill | #ProteaFire pic.twitter.com/Jkjt5Pj47u
80 ಎಸೆತಗಳಲ್ಲಿ 69 ರನ್ಗಳಿಸಿದ್ದ ಬಾಬರ್ ಪೆಹ್ಲುಕ್ವಾಯೋ ಓವರ್ನಲ್ಲಿ ಎನ್ಗಿಡಿಗೆ ಕ್ಯಾಚ್ ನೀಡಿ ಔಟಾದರು. 6ನೇ ಬ್ಯಾಟ್ಸ್ಮನ್ ಆಗಿ ಕ್ರೀಸ್ಗಿಳಿದ ಇಮಾದ್ ವಾಸೀಂ(23) 6 ನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿ 47 ನೇ ಓವರ್ನಲ್ಲಿ ಔಟಾದರು. ವಿಶ್ವಕಪ್ನಲ್ಲಿ ತಮ್ಮ 2ನೇ ಪಂದ್ಯವಾಡಿದ ಸೋಹೈಲ್ 59 ಎಸೆತಗಳಲ್ಲಿ 9 ಬೌಂಡರಿ ಹಾಗೂ3 ಭರ್ಜರಿ ಸಿಕ್ಸರ್ಗಳ ನೆರವಿನಿಂದ 89 ರನ್ಗಳಿಸಿ ಕೊನೆಯ ಓವರ್ನಲ್ಲಿ ಔಟಾದರು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ 3, ತಾಹೀರ್ 2, ಮ್ಯಾರ್ಕ್ರಮ್ 1 ಹಾಗೂ ಪೆಹ್ಲುಕ್ವಾಯೋ 1 ವಿಕೆಟ್ ಪಡೆದರು. ರಬಾಡ 10 ಓವರ್ಗಳಲ್ಲಿ 65, ಮೋರೀಸ್ 9 ಓವರ್ಗಳಲ್ಲಿ 61 ನೀಡಿ ದುಬಾರಿ ಯಾದರು.