ETV Bharat / sports

ಐಸಿಸಿ ಏಕದಿನ ಬ್ಯಾಟಿಂಗ್​​​ ರ‍್ಯಾಂಕಿಂಗ್​​​... ಮೊದಲ ಸ್ಥಾನಕ್ಕೆ ಕೊಹ್ಲಿ-ರೋಹಿತ್​​​ ನಡುವೆ ಫೈಟ್​​​ - ಫೈಟ್

ಐಸಿಸಿ ನೂತನ ಬ್ಯಾಟಿಂಗ್​-ಬೌಲಿಂಗ್​ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಕೊಹ್ಲಿ ಹಾಗೂ ಬುಮ್ರಾ ಮೊದಲ ಸ್ಥಾನ ಕಾಪಾಡಿಕೊಂಡಿದ್ದಾರೆ.

ODI Rankings
author img

By

Published : Jul 7, 2019, 6:33 PM IST

ಮುಂಬೈ: ಭಾರತ ತಂಡದ ನಾಯಕ ಹಾಗೂ ಉಪ ನಾಯಕರಾದ ಕೊಹ್ಲಿ-ರೋಹಿತ್​ ಜೋಡಿ ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ತಮ್ಮ ಅಧಿಪತ್ಯ ಮುಂದುವರಿಸಿದ್ದು, ಮೊದಲೆರಡು ಸ್ಥಾನದಲ್ಲೇ ಮುಂದುವರೆದಿದ್ದಾರೆ.

ಇಂದು ಬಿಡುಗಡೆಯಾದ ನೂತನ ಐಸಿಸಿ ರ‍್ಯಾಂಕಿಂಗ್​ನಲ್ಲಿ ಕೊಹ್ಲಿ 891 ರೇಟಿಂಗ್​ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್​ ಶರ್ಮಾ 885 ರೇಟಿಂಗ್​​ನೊಂದಿಗೆ 2ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ವಿಶ್ವಕಪ್​ನಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿದ ಪಾಕಿಸ್ತಾನದ ಬಾಬರ್​ 5 ಸ್ಥಾನ ಮೇಲೆ ಬಂದಿದ್ದು, 3ನೇ ಸ್ಥಾನ ಪಡೆದಿದ್ದಾರೆ. ಡು ಪ್ಲೆಸಿಸ್​ 2 ಸ್ಥಾನ ಏರಿಕೆ ಕಂಡು 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರಾಸ್​​ ಟೇಲರ್​ 2 ಸ್ಥಾನ ಕುಸಿದಿದ್ದು, 5ನೇ ಸ್ಥಾನದಲ್ಲಿದ್ದಾರೆ.

ಒಂದು ವರ್ಷ ಕ್ರಿಕೆಟ್​ನಿಂದ ದೂರವಿದ್ದ ವಾರ್ನರ್​ 6 ಸ್ಥಾನ ಏರಿಕೆ ಕಂಡಿದ್ದು, 6ನೇ ಸ್ಥಾನಕ್ಕೇರಿದ್ದಾರೆ. ರೂಟ್​(7), ಕೇನ್​ ವಿಲಿಯಮ್ಸನ್​(8), ಡಿಕಾಕ್​(9), ಫಿಂಚ್​(10)ನೇ ಸ್ಥಾನಲ್ಲಿದ್ದಾರೆ.

ಬೌಲಿಂಗ್​ ರ‍್ಯಾಂಕಿಂಗ್​ನಲ್ಲಿ ಬುಮ್ರಾ ಮೊದಲ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಆದರೆ 2ನೇ ಸ್ಥಾನದಲ್ಲಿ ಬೌಲ್ಟ್​ ತಟಸ್ಥರಾಗಿದ್ದರೆ, ಪ್ಯಾಟ್​ ಕಮ್ಮಿನ್ಸ್​ 3, ರಬಾಡ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 3ನೇ ಸ್ಥಾನದಲ್ಲಿದ್ದ ರಶೀದ್​ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.