ETV Bharat / sports

ಕಿವೀಸ್​ ಕಿವಿ ಹಿಂಡಿ ಸೆಮಿಫೈನಲ್​ ಪ್ರವೇಶಿಸುವತ್ತ ಭಾರತೀಯ ನಾರಿಯರ ಚಿತ್ತ - ಹರ್ಮನ್​ ಪ್ರೀತ್ ಕೌರ್

ಮಹಿಳೆಯರ ಟಿ-20 ವಿಶ್ವಕಪ್‌ ಹಣಾಹಣಿಯಲ್ಲಿ ಇಂದು ಭಾರತ- ಕಿವೀಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಟಾಸ್‌ ಗೆದ್ದ ಕಿವೀಸ್‌ ಪಡೆ, ಭಾರತೀಯ ವನಿತೆಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

ICC Women's T20 World Cup
ಟಿ20 ವಿಶ್ವಕಪ್
author img

By

Published : Feb 26, 2020, 11:32 PM IST

Updated : Feb 27, 2020, 9:32 AM IST

ಮೇಲ್ಬೋರ್ನ್​: ಭಾರತ ಮಹಿಳಾ ತಂಡ ಟಿ-20 ವಿಶ್ವಕಪ್​ನ ತನ್ನ 3ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಇವತ್ತು ಎದುರಿಸಲಿದೆ. ಈ ಪಂದ್ಯವನ್ನು ಗೆದ್ದು ಸೆಮಿಫೈನಲ್​ ಪ್ರವೇಶಿಸುವ ಆಲೋಚನೆಯಲ್ಲಿ ಕೌರ್​ ಪಡೆ ಇದೆ.

ಇತ್ತ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ವಿರುದ್ಧ ಜಯಿಸಿರುವ ನ್ಯೂಜಿಲ್ಯಾಂಡ್​ ತಂಡ ಕೂಡ ಸೆಮಿಫೈನಲ್​ ಕನಸಿನಲ್ಲಿದ್ದು, ಭಾರತವನ್ನು ಮಣಿಸುವ ಆತ್ಮವಿಶ್ವಾಸದಲ್ಲಿದೆ.

ICC Women's T20 World Cup
ಶೆಫಾಲಿ ವರ್ಮಾ

ಎರಡು ತಂಡಗಳ ಮುಖಾಮುಖಿ:

ಭಾರತ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು ಇದುವರೆಗೂ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ನ್ಯೂಜಿಲ್ಯಾಂಡ್​ ವನಿತೆಯರು ಭಾರತ ತಂಡದ ವಿರುದ್ಧ ಭಾರಿ ಮೇಲುಗೈ ಸಾಧಿಸಿದ್ದಾರೆ. ಭಾರತ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಕಿವೀಸ್​ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಕಳೆದ ಟಿ20 ವಿಶ್ವಕಪ್​ನಲ್ಲಿ ಭಾರತ ಕಿವೀಸ್​ ವಿರುದ್ಧ 34 ರನ್​ಗಳ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಹರ್ಮನ್ ಪ್ರೀತ್​ ಕೌರ್​ ಆಕರ್ಷಕ ಶತಕ ಸಿಡಿಸಿದ್ದರು.

ICC Women's T20 World Cup
ದೀಪ್ತಿ ಶರ್ಮಾ

ಬಲಾಬಲ:

ಭಾರತ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂದಾನ ಹಾಗೂ ಯುವ ಆಟಗಾರ್ತಿ ಶೆಫಾಲಿ ವರ್ಮಾ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆಲ್​ರೌಂಡರ್ ದೀಪ್ತಿ ಶರ್ಮಾ, ಪೂನಂ​ ಯಾದವ್​, ರಾಜೇಶ್ವರಿ ಗಾಯಕವಾಡ ಹಾಗೂ ಶಿಖಾ ಪಾಂಡೆ ತಂಡದ ಬೌಲಿಂಗ್​ ಶಕ್ತಿಯಾಗಿದ್ದಾರೆ.

ಕಿವೀಸ್​ ಮಹಿಳಾ ತಂಡಕ್ಕೆ ನಾಯಕಿ ಸೂಫಿ ಡಿವೈನ್​ ಪ್ರಬಲ ಅಸ್ತ್ರವಾಗಿದ್ದಾರೆ. ಇವರ ಜೊತೆಗೆ ಸೂಜಿ ಬೇಟ್ಸ್​, ವಿಕೆಟ್​ ಕೀಪರ್​ ರಿಚೆಲ್​ ಪ್ರಿಸ್ಟ್​ ಬ್ಯಾಟಿಂಗ್​ ವಿಭಾಗದ ಆಧಾರ ಸ್ಥಂಭಗಳಾಗಿದ್ದಾರೆ. ಬೌಲಿಂಗ್​ನಲ್ಲಿ ಅಮೆಲಿಯಾ ಕೆರ್​, ಲೀಗ್ ಕಸ್ಪೆರೆಕ್ಮ ಜೆಸ್​ ಕೆರ್​ ಹಾಗೂ ಹೋಲಿ ಹಡ್ಲೆಸ್ಟನ್​ ಉತ್ತಮ ಫಾರ್ಮ್​ನಲ್ಲಿದ್ದಾರೆ.

ICC Women's T20 World Cup
ಅಂಕ ಪಟ್ಟಿ

ಮೆಲ್ಬೋರ್ನ್​ನ ಜಂಕ್ಷನ್​ ಓವೆಲ್​ನಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ 9:30ಕ್ಕೆ ಪಂದ್ಯ ಆರಂಭವಾಗಲಿದೆ.

ಭಾರತ ತಂಡ: ತನಿಯಾ ಭಾಟಿಯಾ, ಶೆಫಾಲಿ ವರ್ಮಾ, ಜಮೀಮಾ ರೋಡ್ರಿಗಸ್‌​, ಹರ್ಮನ್​ ಪ್ರೀತ್​ ಕೌರ್​(ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್​,ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಪೂನಮ್​ ಯಾದವ್​, ರಾಜೇಶ್ವರಿ ಗಾಯಕವಾಡ್, ಸ್ಮೃತಿ ಮಂದಾನ, ಪೂಜಾ ವಸ್ತ್ರಾಕರ್​, ರಾಧಾ ಯಾದವ್​, ಹರ್ಲೀನ್​ ಡಿಯೋಲ್​

Last Updated : Feb 27, 2020, 9:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.