ETV Bharat / sports

ಜ.19 ರಿಂದ ಕಿರಿಯರ ವಿಶ್ವಕಪ್​ ಪೈಪೋಟಿ: ಮರಿಹುಲಿಗಳ ಕಾದಾಟದ ವೇಳಾಪಟ್ಟಿ ಇಲ್ಲಿದೆ ನೋಡಿ..

ಹಾಲಿ ವಿಶ್ವ ಚಾಂಪಿಯನ್​ ಭಾರತ ತಂಡ ಇದುವರೆಗೆ ನಾಲ್ಕು ಬಾರಿ U​-19 ಚಾಂಪಿಯನ್​ಶಿಪ್​ ಗೆದ್ದಿದೆ. ಇದೀಗ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ಪ್ರಿಯಂ ಗರ್ಗ್​ ಬಳಗ ಭಾರತಕ್ಕೆ 5ನೇ ವಿಶ್ವಕಪ್​ ತಂದುಕೊಡುವ ತವಕದಲ್ಲಿದೆ.

u19 world cup
u19 world cup
author img

By

Published : Jan 16, 2020, 6:04 PM IST

ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್​ನಲ್ಲಿ ಹಾಲಿ ವಿಶ್ವ ಚಾಂಪಿಯನ್​ ಭಾರತೀಯ ತಂಡ ಜನವರಿ 19 ರಂದು ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೆಣಸಲಿದೆ.

ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ಪ್ರಿಯಂ ಗರ್ಗ್​ ಪಡೆ ಭಾರತಕ್ಕೆ 5ನೇ ವಿಶ್ವಕಪ್​ ತಂದುಕೊಡುವ ತವಕದಲ್ಲಿದ್ದು ಜನವರಿ 19ರಿಂದ ಶ್ರೀಲಂಕಾ ವಿರುದ್ಧ ತನ್ನ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ. ಈ ಟೂರ್ನಿಯಲ್ಲಿ ಭಾಗವಹಿಸುವ 16 ತಂಡ​ಗ​ಳನ್ನು 4 ಗುಂಪು​ಗ​ಳಾಗಿ ವಿಂಗ​ಡಿ​ಸ​ಲಾ​ಗಿದೆ. ಗುಂಪಿ​ನಲ್ಲಿ ಅಗ್ರ 2 ಸ್ಥಾನ​ಗ​ಳನ್ನು ಪಡೆ​ಯುವ ತಂಡ​ಗಳು ಸೂಪರ್‌ ಲೀಗ್‌ ಹಂತ ಪ್ರವೇ​ಶಿ​ಸ​ಲಿವೆ.

ದಕ್ಷಿಣ ಆಫ್ರಿಕಾ ಏಕದಿನ ಸರಣಿ ಹಾಗೂ ಜಿಂಬಾಬ್ವೆ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ ಒಳಗೊಂಡ ಚತುಷ್ಕೋನ ಸರಣಿ ಗೆದ್ದುಕೊಂಡಿರುವ ಭಾರತೀಯ ತಂಡ ಉತ್ತಮ ಸದ್ಯ ಲಯದಲ್ಲದೆ. ಎ ಗುಂಪಿನಲ್ಲಿರುವ ಗರ್ಗ್​ ಪಡೆ ಲೀಗ್ ಹಂತದ ಹೋರಾಟದಲ್ಲಿ ಲಂಕಾ, ಜಪಾನ್​, ನ್ಯೂಜಿಲ್ಯಾಂಡ್​ ತಂಡಗಳೊಂದಿಗೆ ಸ್ಪರ್ಧಿಸಲಿದೆ.

ಭಾರತ ಅಂಡರ್- 19 ತಂಡದ ವೇಳಾಪಟ್ಟಿ ಇಂತಿದೆ:

ಜನವರಿ 19- ಶ್ರೀಲಂಕಾ ಶ್ರೀಲಂಕಾ ಅಂಡರ್- 19
ಜನವರಿ 21- ಜಪಾನ್​ ಅಂಡರ್​-19
ಜನವರಿ 24- ನ್ಯೂಜಿಲ್ಯಾಂಡ್​ ಅಂಡರ್- 19

ಫೆಬ್ರವರಿ 4 ಮತ್ತು 6 ರಂದು ಸೆಮಿಫೈನಲ್​

ಫೆಬ್ರವರಿ 9ರಂದು ಫೈನಲ್​ ಪಂದ್ಯ

ಭಾರತ ವಿಶ್ವಕಪ್‌ ತಂಡ:

ಪ್ರಿಯಂ ಗರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾಧರ್ ಪಾಟೀಲ್

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.