ದುಬೈ: ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸರಣಿಯಲ್ಲಿ 2-0 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿದರೂ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಪ್ರಥಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟೆಸ್ಟ್ ಸರಣಿಯನ್ನು ಸೋತರೂ ಭಾರತ ತಂಡ 116 ರೇಟಿಂಗ್ ಅಂಕಗೊಳೊಂದಿಗೆ ಪ್ರಥಮ ಸ್ಥಾನದಲ್ಲಿ ಮುಂದುವರೆದಿದೆ. ಇನ್ನು 108 ಆಂಕ ಹೊಂದಿರುವ ನ್ಯೂಜಿಲ್ಯಾಂಡ್ 2ನೇ ಸ್ಥಾನ ಹಾಗೂ ಆಸ್ಟ್ರೇಲಿಯಾ ತಂಡ 3ನೇ ಸ್ಥಾನದಲ್ಲಿ ಮುಂದುವರೆದಿವೆ.
-
Virat Kohli maintained his second spot, while Kane Williamson slipped one position in the @MRFWorldwide ICC Test Rankings for batsmen after the #NZvIND series.
— ICC (@ICC) March 3, 2020 " class="align-text-top noRightClick twitterSection" data="
➡️ https://t.co/prAx9uffmC pic.twitter.com/YJRok7JJWn
">Virat Kohli maintained his second spot, while Kane Williamson slipped one position in the @MRFWorldwide ICC Test Rankings for batsmen after the #NZvIND series.
— ICC (@ICC) March 3, 2020
➡️ https://t.co/prAx9uffmC pic.twitter.com/YJRok7JJWnVirat Kohli maintained his second spot, while Kane Williamson slipped one position in the @MRFWorldwide ICC Test Rankings for batsmen after the #NZvIND series.
— ICC (@ICC) March 3, 2020
➡️ https://t.co/prAx9uffmC pic.twitter.com/YJRok7JJWn
ಇನ್ನು ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ನಲ್ಲೂ ಕಳಪೆ ಮೊತ್ತಕ್ಕೆ ಔಟಾಗುತ್ತಿದ್ದಂತೆ 20 ರೇಟಿಂಗ್ ಅಂಕಗಳನ್ನು ಕಳೆದುಕೊಂಡಿದ್ದಾರೆ. ಆದರೂ 2ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದು, ಕೊಹ್ಲಿಯಿಂದ 25 ಅಂಕ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಭಾರತದ ಚೇತೇಶ್ವರ್ ಪೂಜಾರ 2 ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದರೆ, ರಹಾನೆ ಒಂದು ಸ್ಥಾನ ಕುಸಿದು 9 ನೇ ಸ್ಥಾನ ಪಡೆದಿದ್ದಾರೆ. ಟಾಪ್ 10ರಲ್ಲಿದ್ದ ಅಗರ್ವಾಲ್ 11ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇನ್ನು ಬೌಲರ್ಗಳ ವಿಭಾಗದಲ್ಲಿ ಎರಡನೇ ಟೆಸ್ಟ್ನಲ್ಲಿ ಮಿಂಚಿದ್ದ ಜಸ್ಪ್ರೀತ್ ಬುಮ್ರಾ 4 ಸ್ಥಾನ ಏರಿಕೆ ಕಂಡಿದ್ದು, 11ರಿಂದ 7ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಸೌಥಿ 4ನೇ ಸ್ಥಾನಕ್ಕೆ ಹಾಗೂ ಬೌಲ್ಟ್ 9ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ವ್ಯಾಗ್ನರ್ 2ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.