ದುಬೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಮತ್ತು ರವಿಂಚಂದ್ರನ್ ಅಶ್ವಿನ್ ಅವರು ಐಸಿಸಿ ಟೆಸ್ಟ್ ಪ್ಲೇಯರ್ ರ್ಯಾಂಕಿಂಗ್ನಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ.
ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 161 ರನ್ ಗಳಿಸಿದ ರೋಹಿತ್ ಶರ್ಮಾ 9 ಸ್ಥಾನ ಏರಿಕೆ ಕಂಡು 14ನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ. ಇದು 2019ರಿಂದ ಇಲ್ಲಿಯವರೆಗೆ ಅವರ ಅತ್ಯುತ್ತಮ ಶ್ರೇಯಾಂಕವಾಗಿದೆ. 2019ರಲ್ಲಿ ಅವರು 10ನೇ ಶ್ರೇಯಾಂಕ ಪಡೆದಿರುವುದು ಮುಂಬೈಕರ್ನ ಕೆರಿಯರ್ ಬೆಸ್ಟ್ ರ‍್ಯಾಂಕಿಂಗ್ ಆಗಿದೆ.
ಇನ್ನು ಚೆನ್ನೈ ಟೆಸ್ಟ್ನಲ್ಲಿ ಅದ್ಭುತ ಶತಕ ಹಾಗೂ 8 ವಿಕೆಟ್ ಪಡೆದಿದ್ದ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 14 ಸ್ಥಾನ ಮೇಲೇರಿ 81ಕ್ಕೆ ಹಾಗೂ ಆಲ್ರೌಂಡರ್ ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.
-
R Ashwin is the new No.5 all-rounder in the latest @MRFWorldwide ICC Test Player Rankings 💪
— ICC (@ICC) February 17, 2021 " class="align-text-top noRightClick twitterSection" data="
Full list: https://t.co/OMjjVx5Mgf pic.twitter.com/HWEyIRqovo
">R Ashwin is the new No.5 all-rounder in the latest @MRFWorldwide ICC Test Player Rankings 💪
— ICC (@ICC) February 17, 2021
Full list: https://t.co/OMjjVx5Mgf pic.twitter.com/HWEyIRqovoR Ashwin is the new No.5 all-rounder in the latest @MRFWorldwide ICC Test Player Rankings 💪
— ICC (@ICC) February 17, 2021
Full list: https://t.co/OMjjVx5Mgf pic.twitter.com/HWEyIRqovo
ಇನ್ನು ಬೌಲಿಂಗ್ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲವಾದರು 33 ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ. ಪ್ರಸ್ತುತ 6ನೇ ಶ್ರೇಯಾಂಕದಲ್ಲಿರುವ ಸ್ಟುವರ್ಟ್ ಬ್ರಾಡ್ಗಿಂತ ಕೇವಲ 3 ಅಂಕ ಹಿಂದಿದ್ದಾರೆ. ಅಲ್ಲದೆ 3ನೇ ಶ್ರೇಯಾಂಕದಲ್ಲಿರುವ ಕಿವೀಸ್ನ ನೈಲ್ ವ್ಯಾಗ್ನರ್ಗಿಂತ 20 ಅಂಕ ಹಿಂದಿದ್ದು, ಮುಂದಿನ ಎರಡು ಟೆಸ್ಟ್ಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ 2 ಅಥವಾ 3ನೇ ಸ್ಥಾನಕ್ಕೇರುವ ಅವಕಾಶವಿದೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 908 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ.
ಎರಡನೇ ಟೆಸ್ಟ್ನಲ್ಲಿ ಅರ್ಧಶತಕ ಗಳಿಸಲು ವಿಫಲರಾದ ಇಂಗ್ಲೆಂಡ್ ಕ್ಯಾಪ್ಟನ್ ರೂಟ್ ಒಂದು ಸ್ಥಾನ ಕುಸಿತ ಕಂಡು 4ನೇ ಸ್ಥಾನಕ್ಕೆ ಕುಸಿದರೆ, ಪೂಜಾರ 7ರಿಂದ 8ಕ್ಕೆ ಹಾಗೂ ಅಜಿಂಕ್ಯ ರಹಾನೆ ಟಾಪ್ ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ.
ಅಜೇಯ 58 ರನ್ ಗಳಿಸಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ 3 ಸ್ಥಾನ ಮೇಲೇರಿದ್ದು, 11ನೇ ರ‍್ಯಾಂಕ್ ಪಡೆದಿದ್ದಾರೆ. ಇದು ಅವರು ವೃತ್ತಿ ಜೀವನದ ಶ್ರೇಷ್ಠ ರ‍್ಯಾಂಕಿಂಗ್ ಆಗಿದೆ.