ETV Bharat / sports

ಟೆಸ್ಟ್ ಬ್ಯಾಟಿಂಗ್​ ರ‍್ಯಾಂಕಿಂಗ್‌: ಟಾಪ್​10ಗೆ ಎಂಟ್ರಿಕೊಟ್ಟ ಕನ್ನಡಿಗ ಮಯಾಂಕ್​ ... ಸ್ಮಿತ್​ ಸನಿಹದಲ್ಲಿ ವಿರಾಟ್ - ​ ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ನ ಟಾಪ್10ನಲ್ಲಿ ನಾಲ್ವರು ಭಾರತೀಯರು

ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಕನ್ನಡಿಗ ಮಯಾಂಕ್​ ಒಂದು ಸ್ಥಾನ ಮೇಲೇರಿದ್ದು, 11ನೇ ಶ್ರೇಯಾಂಕದಿಂದ 10ನೇ ಸ್ಥಾನಕ್ಕೇರಿದ್ದಾರೆ. ಇನ್ನು ನಾಯಕ ಕೊಹ್ಲಿ (928) ಸ್ಮಿತ್ (931)​ಗಿಂತ ಕೇವಲ 3 ರೇಟಿಂಗ್​ ಅಂಕ ಹಿಂದಿದ್ದು ಅಗ್ರಸ್ಥಾನದ ಸನಿಹ ಬಂದಿದ್ದಾರೆ.

ICC test bating ranking
ICC test bating ranking
author img

By

Published : Nov 26, 2019, 3:14 PM IST

ಮುಂಬೈ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಕೊಹ್ಲಿ ಪಡೆ ಟೆಸ್ಟ್​ ರ‍್ಯಾಂಕಿಂಗ್‌ನಲ್ಲೂ ತನ್ನ ಅಧಿಪತ್ಯ ಮುಂದುವರಿಸಿದೆ.

ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಕನ್ನಡಿಗ ಮಯಾಂಕ್​ ಒಂದು ಸ್ಥಾನ ಮೇಲೇರಿದ್ದು, 11ನೇ ಶ್ರೇಯಾಂಕದಿಂದ 10ನೇ ಸ್ಥಾನಕ್ಕೇರಿದ್ದಾರೆ. ಇನ್ನು ನಾಯಕ ಕೊಹ್ಲಿ(928) ಸ್ಮಿತ್(931)​ಗಿಂತ ಕೇವಲ 3 ರೇಟಿಂಗ್​ ಅಂಕ ಹಿಂದಿದ್ದು ಅಗ್ರಸ್ಥಾನದ ಸನಿಹ ಬಂದಿದ್ದಾರೆ.

ಇನ್ನುಳಿದಂತೆ ಪೂಜಾರ(791) ನಾಲ್ಕನೆ ಸ್ಥಾನದಲ್ಲಿ, ರಾಹಾನೆ (759) 5ನೇ ಸ್ಥಾನದಲ್ಲಿ ಮುಂದಿದ್ದಾರೆ. ಕೇನ್​ ವಿಲಿಯಮ್ಸನ್​(877) 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ ರೋಹಿತ್​ ಶರ್ಮಾ 10 ರಿಂದ 13ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಇನ್ನು ಬೌಲಿಂಗ್​ ಶ್ರೇಯಾಂಕದಲ್ಲಿ ಬುಮ್ರಾ (5) ಒಂದು ಸ್ಥಾನ ಕುಸಿದಿದ್ದರೆ, ಶಮಿ 3 ಸ್ಥಾನ ಕುಸಿದು ಟಾಪ್​ 10ನಿಂದ ಹೊರಬಿದ್ದಿದ್ದಾರೆ. ಅಶ್ವಿನ್​ 9ನೇ ಸ್ಥಾನದಲ್ಲಿದ್ದರೆ, ಜಡೇಜಾ 15, ಇಶಾಂತ್​ ಶರ್ಮಾ 17ನೇ, ಉಮೇಶ್​ ಯಾದವ್​ 21ನೇ ಸ್ಥಾನದಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.