ETV Bharat / sports

ಐಸಿಸಿ ಟೆಸ್ಟ್​ ಶ್ರೇಯಾಂಕ : ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್.. 6ನೇ ಸ್ಥಾನದಲ್ಲಿ ರಹಾನೆ

author img

By

Published : Dec 31, 2020, 12:14 PM IST

Updated : Dec 31, 2020, 12:33 PM IST

ಐಸಿಸಿ ವರ್ಷಾಂತ್ಯಕ್ಕೆ ಟೆಸ್ಟ್​ ಬ್ಯಾಟ್ಸ್​​ಮನ್​ಗಳ ನೂತನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.​

Williamson overtakes Smith and Kohli to take top position
ತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್

ದುಬೈ: ಐಸಿಸಿ ಪುರುಷರ ಟೆಸ್ಟ್ ಪ್ಲೇಯರ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್​ ಸ್ಮಿತ್​ರನ್ನು ಹಿಂದಿಕ್ಕಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್​ ಅಗ್ರಸ್ಥಾನಕ್ಕೇರಿದ್ದಾರೆ.

ಟೌರಂಗದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಕೇನ್ ಇಬ್ಬರು ಅಗ್ರ ಆಟಗಾರರನ್ನು ಹಿಂದಿಕ್ಕಿದ್ದಾರೆ. ವಿಲಿಯಮ್ಸನ್ 2015ರ ಅಂತ್ಯದ ವೇಳೆಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಸ್ಮಿತ್ ಅಥವಾ ಕೊಹ್ಲಿ ಇಬ್ಬರೂ ಮೊದಲ ಸ್ಥಾನದಲ್ಲಿರುತ್ತಿದ್ದರು. ಈ ವರ್ಷ ಸ್ಮಿತ್ 313 ದಿನಗಳು ಮತ್ತು ಕೊಹ್ಲಿ 51 ದಿನಗಳವರೆಗೆ ಅಗ್ರಸ್ಥಾನದಲ್ಲಿದ್ದರು.

ಇಂದು ವರ್ಷಾಂತ್ಯದ ಅಪ್‌ಡೇಟ್‌ನಲ್ಲಿ, ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಪ್ರದರ್ಶನಗಳನ್ನು ಪರಿಗಣಿಸಲಾಗಿದೆ.

ಪಾಕ್ ವಿರುದ್ಧ 129 ಮತ್ತು 21 ರನ್​ ಗಳಿಸಿದ್ದ ವಿಲಿಯಮ್ಸನ್​ 13 ಪಾಯಿಂಟ್ ಪಡೆದುಕೊಂಡು ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಭಾರತದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಹೊರಗುಳಿದಿದ್ದು ದ್ವಿತೀಯ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಎಂಸಿಜಿ ಟೆಸ್ಟ್​ನಲ್ಲಿ 0 ಮತ್ತು 8 ರನ್​ಗಳಿಸಿದ್ದ ಸ್ಮಿತ್ ಅಗ್ರ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಕೊಹ್ಲಿಯ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಅಜಿಂಕ್ಯಾ ರಹಾನೆ, ಮೆಲ್ಬೋರ್ನ್‌ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದಾಗಿ ನೂತನ ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಸರಣಿಯಲ್ಲಿ ಮಿಂಚದ ಚೇತೇಶ್ವರ್ ಪೂಜಾರ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬೌಲರ್​ಗಳ ಶ್ರೇಯಾಂಕದಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡು ಸ್ಥಾನ ಏರಿಕೆ ಕಂಡಿದ್ದು 7ನೇ ಸ್ಥಾನ ಪಡೆದ್ರೆ, ವೇಗಿ ಬುಮ್ರಾ 9ನೇ ಸ್ಥಾನಕ್ಕೇರಿದ್ದಾರೆ. ಆಸೀಸ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಇದ್ದಾರೆ.

ಆಲ್‌ರೌಂಡರ್ ರವೀಂದ್ರ ಜಡೇಜಾ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ 57 ರನ್ ಗಳಿಸಿದ ನಂತರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 11 ಸ್ಥಾನ ಏರಿಕೆ ಕಂಡು 36ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಬೌಲರ್‌ಗಳಲ್ಲಿ ಪಟ್ಟಿಯಲ್ಲಿ 14 ನೇ ಸ್ಥಾನ ಗಳಿಸಿದ್ದಾರೆ. ಆಲ್​​ರೌಂಡ್ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿರುವ ಜಡೇಜಾ ಉತ್ತಮ ಅಂಕ​ ಪಡೆದು, ಜೇಸನ್ ಹೋಲ್ಡರ್ ಜೊತೆಗಿನ ಅಂತರ ಕಡಿಮೆ ಮಾಡಿಕೊಂಡಿದ್ದಾರೆ.

ಚೊಚ್ಚಲ ಪಂದ್ಯವಾಡಿದ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಕ್ರಮವಾಗಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ಪಟ್ಟಿಯಲ್ಲಿ 76 ಮತ್ತು 77ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

Last Updated : Dec 31, 2020, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.