ETV Bharat / sports

2020ರ ಟಿ-20 ವಿಶ್ವಕಪ್​ ಆಯೋಜನೆ ಬಗ್ಗೆ ನಾಳೆ ಐಸಿಸಿ ಸಭೆಯಲ್ಲಿ ಅಂತಿಮ ನಿರ್ಧಾರ

ಕೊರೊನಾ ಭೀತಿಯಿಂದ ಆಕ್ಟೋಬರ್​ - ನವೆಂಬರ್​ನಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್​ 2022ಕ್ಕೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಐಸಿಸಿ ಸದಸ್ಯರ ಮಾಹಿತಿ ಪ್ರಕಾರ ನಾಳೆ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.

ಐಸಿಸಿ ಟಿ20 ವಿಶ್ವಕಪ್​
ಐಸಿಸಿ ಟಿ20 ವಿಶ್ವಕಪ್​
author img

By

Published : May 27, 2020, 3:23 PM IST

ಮುಂಬೈ: ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ-20 ವಿಶ್ವಕಪ್ ​ಮೂಂದೂಡಲು ಐಸಿಸಿ ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದ್ದು, ನಾಳೆ ನಡೆಯುವ ಐಸಿಸಿ ವಾರ್ಷಿಕ ಸಭೆಯಲ್ಲಿ ವಿಶ್ವಕಪ್​ ಮುಂದೂಡಿಕೆ ವಿಚಾರದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ.

ಗುರುವಾರ ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್​ ಮೂಲಕ ಐಸಿಸಿ ಇತರೆ ಕ್ರಿಕೆಟ್​ ಮಂಡಳಿಗಳ ಜೊತೆ ಸಭೆ ನಡೆಸಲಿದ್ದು, ಈ ವೇಳೆ ವಿಶ್ವಕಪ್​ ಮುಂದೂಡಲಾಗುವುದೇ ಅಥವಾ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಸಲಾಗುತ್ತದೆಯೇ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. 2021ಕ್ಕೆ ಭಾರತದಲ್ಲಿ ಟಿ-20 ವಿಶ್ವಕಪ್​ ನಡೆಯುವುದರಿಂದ ಒಂದೇ ವರ್ಷ 2 ವಿಶ್ವಕಪ್​ ಆಯೋಜಿಸುವುದು ಅಸಾಧ್ಯವಾಗುತ್ತದೆ.

ಐಪಿಎಲ್​ 2020
ಐಪಿಎಲ್​ 2020

ಗುರುವಾರ ನಡೆಯುವ ಐಸಿಸಿ ಸಭೆಯಲ್ಲಿ ವಿಶ್ವ ಟಿ-20 ಟೂರ್ನಿಯನ್ನು ಮುಂದೂಡುವ ನಿರ್ಧಾರದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಟಿ-20 ವಿಶ್ವಕಪ್​ ನಡೆಸುವ ಅಕವಾಶ ಕೂಡ ಕಡಿಮೆಯಿದೆ. ಆಸ್ಟ್ರೇಲಿಯಾ ಕ್ರಿಕೆಟ್​ ಅಥವಾ ಬೇರೆ ಕ್ರಿಕೆಟ್​ ಮಂಡಳಿಗಳಿಗೂ ವಿಶ್ವಕಪ್​ ಪಂದ್ಯಾವಳಿ ಬಯಸುತ್ತಿಲ್ಲ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಷ್ಟದಲ್ಲಿರುವ ಕ್ರಿಕೆಟ್​ ಆಸ್ಟ್ರೇಲಿಯಾ ಕೂಡ ವಿಶ್ವಕಪ್​ಗಿಂತ ದ್ವಿಪಕ್ಷೀಯ ಸರಣಿ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ವರ್ಷದ ಕೊನೆಗೆ ಆಸ್ಟ್ರೇಲಿಯಾದಲ್ಲಿ 4 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ಟೀಂ ಇಂಡಿಯಾ ತೆರಳಲಿದೆ. ಈ ಸರಣಿಗಳನ್ನು ಆಯೋಜನೆ ಮಾಡುವುದರಿಂದ ಹಣಕಾಸಿನ ವ್ಯವಸ್ಥೆಯನ್ನು ಸರಿದೂಗಿಸಿಕೊಳ್ಳುವ ಇರಾದೆಯಲ್ಲಿದೆ ಎಂಬ ಮಾಹಿತಿ ಇದೆ.

ವಿಶ್ವಕಪ್ ಮುಂದೂಡುವ ಸಾಧ್ಯತೆಯಿರುವುದರಿಂದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್​ಗೆ ಬಹುತೇಕ ಗ್ರೀನ್​ ಸಿಗ್ನಲ್​ ಸಿಕ್ಕಿದಂತಾಗಿದೆ. ಆದರೆ ಭಾರತದಲ್ಲೂ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವೇಳೆ ಅಕ್ಟೋಬರ್​ವರೆಗೆ ಪರಿಸ್ಥಿತಿ ಹತೋಟಿಗೆ ಬಂದು ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಐಪಿಎಲ್​ ನಡೆಯುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.