ETV Bharat / sports

ಐಸಿಸಿ ಸಿಇಒ ಮನು ಸಾಹ್ನಿ ಅವಧಿಗೂ ಮುನ್ನವೇ ರಾಜೀನಾಮೆ ಸಾಧ್ಯತೆ - ಐಸಿಸಿ ಸಿಇಒ

ಸಾಹ್ನಿ, 2019ರ ಐಸಿಸಿ ಏಕದಿನ ವಿಶ್ವಕಪ್​ ನಂತರ 2022ರ ಅವಧಿಯವರೆಗೆ ಡೇವ್​ ರಿಚರ್ಡ್ಸನ್​ ನಂತರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಆದರೆ ವಿವಿಧ ನೀತಿ, ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಭಾವಶಾಲಿ ಕ್ರಿಕೆಟ್ ಮಂಡಳಿಗಳೊಂದಿಗೆ ಸಾಹ್ನಿ ಉತ್ತಮ ಸಂಬಂಧ ಹೊಂದುವಲ್ಲಿ ವಿಫಲರಾಗಿದ್ದರು.

ಮನು ಸಾಹ್ನಿ ರಾಜೀನಾಮೆ ಸಾಧ್ಯತೆ
ಮನು ಸಾಹ್ನಿ ರಾಜೀನಾಮೆ ಸಾಧ್ಯತೆ
author img

By

Published : Mar 10, 2021, 3:18 PM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸಾಹ್ನಿ ಅವರನ್ನು "ರಜೆ" ಮೇಲೆ ಕಳುಹಿಸಲಾಗಿದ್ದು, ಕೆಲವು ದೊಡ್ಡ ಕ್ರಿಕೆಟ್​ ಬೋರ್ಡ್​ಗಳ ಅಸಮಾಧಾನಕ್ಕೆ ಕಾರಣರಾಗಿರುವ ಅವರು ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಬಹುದು ಎಂಬ ಸುದ್ದಿ ಕೇಳಿಬರುತ್ತಿದೆ

ಆಡಿಟ್ ಸಂಸ್ಥೆ 'ಪ್ರೈಸ್‌ವಾಟರ್‌ಹೌಸ್ ‌ಕೂಪರ್ಸ್‌'ನ ಆಂತರಿಕ ತನಿಖೆಯ ಸಂದರ್ಭದಲ್ಲಿ ಅವರ ನಡವಳಿಕೆ ಪರಿಶೀಲನೆಗೆ ಒಳಪಟ್ಟ ನಂತರ ಈ ಮಾತು ಕೇಳಿಬರುತ್ತಿದೆ.

ಸಾಹ್ನಿ, 2019ರ ಐಸಿಸಿ ಏಕದಿನ ವಿಶ್ವಕಪ್​ ನಂತರ 2022ರ ಅವಧಿಯವರೆಗೆ ಡೇವ್​ ರಿಚರ್ಡ್ಸನ್​ ನಂತರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಆದರೆ ವಿವಿಧ ನೀತಿ, ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಭಾವಶಾಲಿ ಕ್ರಿಕೆಟ್ ಮಂಡಳಿಗಳೊಂದಿಗೆ ಸಾಹ್ನಿ ಉತ್ತಮ ಸಂಬಂಧ ಹೊಂದುವಲ್ಲಿ ವಿಫಲರಾಗಿದ್ದರು.

ಅಲ್ಲದೆ ತಮ್ಮ ಸಹದ್ಯೋಗಿಗಳೊಂದಿಗೆ ಕಠಿಣವಾಗಿ ನಡವಳಿಕೆಯಿಂದಾಗಿ ಅವರು ಪರಿಶೀಲನೆಗೆ ಒಳಗಾಗಿದ್ದಾರೆ. ಇದಕ್ಕೆ ಐಸಿಸಿಯ ಅನೇಕ ಸಿಬ್ಬಂದಿಯಿಂದ ಸಾಕ್ಷ್ಯಗಳು ದೊರೆತಿದ್ದು, ಅವರು ನೌಕರರ ಮನೋಸ್ಥೈರ್ಯಕ್ಕೆ ಉತ್ತಮವಾಗಿಲ್ಲ ಎಂದು ಐಸಿಸಿಯ ಹೆಸರೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

56 ವರ್ಷದ ಭಾರತೀಯ ಮೂಲದ ಸಾಹ್ನಿ ಕೆಲವು ಸಮಯದಿಂದ ಕಚೇರಿಗೂ ಹಾಜರಾಗಿಲ್ಲ. ಹಾಗಾಗಿ ಅವರಿಗೆ ರಜೆ ನೀಡಲಾಗಿತ್ತು. ಇದೀಗ ಬೋರ್ಡ್​ ರಾಜಿ ಸೂತ್ರ ಅನುಸರಿಸಿ, ಸಾಹ್ನಿ ಗೌರವಯುತವಾಗಿ ರಾಜೀನಾಮೆ ನೀಡುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧದ ಟಿ -20 ಸರಣಿ ನಂತರ ನಮಗೆ ಟಿ-20 ವಿಶ್ವಕಪ್ ಆಡಲು ಬಲಿಷ್ಠ ತಂಡ ಸಿಗಲಿದೆ: ರಾಥೋರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.