ETV Bharat / sports

ಶೆಫಾಲಿ, ಮಂಧಾನಾ ಎದುರು ಬೌಲಿಂಗ್​ ಮಾಡಲು ಭಯ: ಫೈನಲ್​​ಗೂ ಮೊದಲೇ ಸೋಲೊಪ್ಪಿಕೊಂಡ ಆಸೀಸ್​ ವೇಗಿ! - ಸ್ಮೃತಿ ಮಂದಾನಾ

ಐಸಿಸಿ ಮಹಿಳಾ ಟಿ-20 ವಿಶ್ವಕಪ್​ ಫೈನಲ್​ನಲ್ಲಿ ನಾಳೆ ಭಾರತ-ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳು ಗೆಲುವಿಗಾಗಿ ಸೆಣಸಾಟ ನಡೆಸಲಿವೆ.

Megan Schutt
ಆಸೀಸ್​ ವೇಗಿ ಮೇಗನ್ ಶುಟ್
author img

By

Published : Mar 6, 2020, 10:34 AM IST

Updated : Mar 6, 2020, 1:01 PM IST

ಮೆಲ್ಬೋರ್ನ್​: ಐಸಿಸಿ ಮಹಿಳಾ ವಿಶ್ವಕಪ್​ ಟಿ-20 ಫೈನಲ್​​ನಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಭಾನುವಾರ ಮುಖಾಮುಖಿಯಾಗುತ್ತಿದ್ದು, ಚೊಚ್ಚಲ ಸಲ ಫೈನಲ್​ ಪ್ರವೇಶ ಮಾಡಿರುವ ಹರ್ಮನ್​ ಪ್ರೀತ್​ ಕೌರ್​ ಬಳಗ ಗೆಲುವಿನ ಉತ್ಸಾಹದಲ್ಲಿದೆ.

ಬ್ಯಾಟಿಂಗ್​, ಬೌಲಿಂಗ್​​ನಲ್ಲಿ ಸಂಘಟಿತ ಹೋರಾಟ ನೀಡಿ ಫೈನಲ್​ ಪ್ರವೇಶ ಪಡೆದುಕೊಂಡಿರುವ ಟೀಂ ಇಂಡಿಯಾ ಮಹಿಳಾ ಪಡೆ, ಇದೀಗ ಕಾಂಗರೂಗಳ ಸವಾಲು ಎದುರಿಸಲು ಸಜ್ಜುಗೊಂಡಿದೆ.

ಫೈನಲ್​ ಪಂದ್ಯ ಭಾನುವಾರ ನಡೆಯಲಿದ್ದು, ಇದಕ್ಕೂ ಮುಂಚಿತವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಮಾರಕ ವೇಗಿ ಮೇಗನ್ ಶುಟ್, ನಾನು ಟೀಂ ಇಂಡಿಯಾ ವಿರುದ್ಧ ಕ್ರಿಕೆಟ್​ ಆಡಲು ದ್ವೇಷಿಸುತ್ತೇನೆ. ಆರಂಭಿಕರಾಗಿ ಕಣಕ್ಕಿಳಿಯುವ ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ನನ್ನ ದಾಳಿಯನ್ನ ಹೇಗೆ ತಡೆಗಟ್ಟಬೇಕು ಎಂಬುದನ್ನ ತಿಳಿದುಕೊಂಡಿದ್ದಾರೆ ಎಂದಿದ್ದಾರೆ.

ಪವರ್​ ಪ್ಲೇ ವೇಳೆ ಸ್ಮೃತಿ ಮಂಧಾನಾ ಹಾಗೂ ಶೆಫಾಲಿ ವರ್ಮಾ ಎದುರು ಬೌಲಿಂಗ್​ ಮಾಡುವುದು ತುಂಬಾ ಕಷ್ಟ. ರನ್​ಗಳಿಕೆ ಮಾಡುವುದು ಹೇಗೆ ಎಂಬುದು ಅವರಿಗೆ ಗೊತ್ತಿದೆ. ಆದರೂ ಕೆಲವೊಂದು ಯೋಜನೆಗಳೊಂದಿಗೆ ನಮ್ಮ ತಂಡ ಮೈದಾನಕ್ಕಿಳಿಯುತ್ತಿದೆ ಎಂದಿದ್ದಾರೆ.

ಭಾನುವಾರ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಫೈನಲ್​ ಪಂದ್ಯ ನಡೆಯಲಿದ್ದು, ಭಾರತ-ಆಸ್ಟ್ರೇಲಿಯಾ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಇನ್ನು ಫೈನಲ್​ ಆಡುತ್ತಿರುವ ಟೀಂ ಇಂಡಿಯಾ ತಂಡಕ್ಕೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ವಿಶ್​ ಮಾಡಿದ್ದಾರೆ.

Last Updated : Mar 6, 2020, 1:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.