ETV Bharat / sports

ಕೆ ಎಲ್​ ರಾಹುಲ್​ ನಾಯಕತ್ವದಲ್ಲಿ ಐಪಿಎಲ್​ ಆಡಲು ಎದುರು ನೋಡುತ್ತಿದ್ದೇನೆ: ಶೆಲ್ಡಾನ್​ ಕಾಟ್ರೆಲ್​

author img

By

Published : Aug 11, 2020, 2:20 PM IST

ಅವರೊಬ್ಬ ಅದ್ಭುತ ಕ್ರಿಕೆಟಿಗ, ಅವರ ಕ್ರಿಕೆಟ್​ ಜ್ಞಾನವನ್ನು ಪಡೆಯಲು ನಾನು ಎದುರು ನೋಡುತ್ತಿದ್ದೇನೆ ಎಂದು ರಾಹುಲ್​ ನಾಯಕತ್ವದಲ್ಲಿ ತಮ್ಮ ಐಪಿಎಲ್ ಪಾದಾರ್ಪಣೆಗೆ ಕಾಯುತ್ತಿರುವುದಾಗಿ ವಿಂಡೀಸ್​ನ ಸೀಮಿತ ಓವರ್​ಗಳ ಅಗ್ರ ಬೌಲರ್​ ತಿಳಿಸಿದ್ದಾರೆ.

ಶೆಲ್ಡಾನ್​ ಕಾಟ್ರೆಲ್​
ಶೆಲ್ಡಾನ್​ ಕಾಟ್ರೆಲ್​

ನವದೆಹಲಿ: 2020ರ ಐಪಿಎಲ್​ಗಾಗಿ ಕಳೆದ ಡಿಸೆಂಬರ್​ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 8.5 ಕೋಟಿ ರೂ.ಗೆ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಕ್ಕೆ ಸೇರ್ಪಡೆಯಾಗಿರುವ ವೆಸ್ಟ್​ ಇಂಡೀಸ್​ನ ಶೆಲ್ಡಾನ್​ ಕಾಟ್ರೆಲ್​ ಕನ್ನಡಿಗ ಕೆ ಎಲ್​ ನಾಯಕತ್ವದಲ್ಲಿ ಕಣಕ್ಕಿಳಿಯಲು ತಾವು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಅವರೊಬ್ಬ ಅದ್ಭುತ ಕ್ರಿಕೆಟಿಗ, ಅವರ ಕ್ರಿಕೆಟ್​ ಜ್ಞಾನವನ್ನು ಪಡೆಯಲು ನಾನು ಎದುರು ನೋಡುತ್ತಿದ್ದೇನೆ ಎಂದು ರಾಹುಲ್​ ನಾಯಕತ್ವದಲ್ಲಿ ತಮ್ಮ ಐಪಿಎಲ್ ಪಾದಾರ್ಪಣೆಗೆ ಕಾಯುತ್ತಿರುವುದಾಗಿ ವಿಂಡೀಸ್​ನ ಸೀಮಿತ ಓವರ್​ಗಳ ಅಗ್ರ ಬೌಲರ್​ ತಿಳಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ ಸೆಪ್ಟಂಬರ್​ 19ರಿಂದ ನವೆಂಬರ್​ 10ರವರೆಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆಯಲಿದೆ. ಅಬುಧಾಬಿ, ದುಬೈ ಹಾಗೂ ಶಾರ್ಜಾದಲ್ಲಿ ಈ ಬಾರಿಯ ಟೂರ್ನಿ ನಡೆಯಲಿದೆ. ಇದೇ ಮೊದಲ ಬಾರಿ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿರುವ ಕಾಟ್ರೆಲ್​ ತಮ್ಮ ತಂಡದ ಕ್ರಿಸ್​ ಗೇಲ್​, ನಿಕೋಲಸ್​ ಪೂರನ್​ ಜೊತೆಯಾಗಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕೆಎಲ್​ ರಾಹುಲ್​
ಕೆಎಲ್​ ರಾಹುಲ್​

ಎಎನ್​ಐ ಜೊತೆ ಮಾತನಾಡಿರುವ ಕಾಟ್ರೆಲ್​ ಕೆಎಲ್​ ರಾಹುಲ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಐಪಿಎಲ್​ನಲ್ಲಿ ಆಡುವುದಕ್ಕಾಗಿ ಉತ್ಸುಕನಾಗಿದ್ದೇನೆ. ಕಿಂಗ್ಸ್​ ಇಲೆವೆನ್​ ಆರ್ಮಿ ಸೇರಿಕೊಳ್ಳಲು ನನ್ನಿಂದ ಕಾಯಲಾಗುತ್ತಿಲ್ಲ. ಜೊತೆಗೆ ಕೆ ಎಲ್​ ರಾಹುಲ್​ ನಾಯಕತ್ವದಲ್ಲಿ ಆಡಲು ಎದುರು ನೋಡುತ್ತಿದ್ದೆನೆ. ಆತ ಅದ್ಭುತ ವ್ಯಕ್ತಿ. ಇನ್ನು ಕ್ರಿಸ್​ ಗೇಲ್​ ಮತ್ತು ಪೂರನ್​ ಜೊತೆ ಆಡುವುದಕ್ಕೆ ಬಹಳ ಸಂತೋಷವಿದೆ. ನಾನು ತಂಡಕ್ಕಾಗಿ ಶೇ120 ರಷ್ಟು ಸಾಮರ್ಥ್ಯವನ್ನು ನೀಡಲು ತಯಾರಿದ್ದೇನೆ ಎಂದಿದ್ದಾರೆ.

ಶೆಲ್ಡಾನ್​ ಕಾಟ್ರೆಲ್​ ವೆಸ್ಟ್​ ಇಂಡೀಸ್​ ಪರ 2 ಟೆಸ್ಟ್​, 35 ಏಕದಿನ ಪಂದ್ಯ ಹಾಗೂ 27 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು ಕ್ರಮವಾಗಿ 2, 49 ಹಾಗೂ 36 ವಿಕೆಟ್​ ಪಡೆದಿದ್ದಾರೆ. ಆಗಸ್ಟ್​ 18ರಿಂದ ನಡೆಯುವ ಸಿಪಿಎಲ್​ನಲ್ಲಿ ಸೇಂಟ್​ ಕಿಟ್ಸ್​ ಮತ್ತು ನೇವಿಸ್​ ಪ್ಯಾಟ್ರಿಯೋಟ್ಸ್​ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.