ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಬಿಸಿಸಿಐ ಮುಂದಿನ ಐಪಿಎಲ್ಗಾಗಿ ಹೈದರಾಬಾದ್‌ನ ಹೆಚ್ಚುವರಿ ಸ್ಥಳವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಮುಂಬೈ ಕೂಡ ಐಪಿಎಲ್ನ ಒಂದು ತಾಣವಾಗಿರುವುದರಿಂದ, ಬಿಸಿಸಿಐ ಮುಂಬೈ ಗಮನದಲ್ಲಿಟ್ಟುಕೊಂಡು ಹೈದರಾಬಾದ್‌ನ ಹೆಚ್ಚುವರಿ ಸ್ಥಳವಾಗಿ ಬಳಸಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ, ಪ್ರಸ್ತುತ ಮಹಾರಾಷ್ಟ್ರ ಸರ್ಕಾರ ಲಾಕ್‌ಡೌನ್ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ನಿಗದಿತವಾಗಿರುವ 6 ಸ್ಥಳಗಳಲ್ಲಿ ಒಂದು ಅಥವಾ ಎರಡು ಸ್ಥಳಗಳು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅಸಾಧ್ಯವಾಗಿರುವುದರಿಂದ ಹೈದರಾಬಾದ್ ಬ್ಯಾಕ್ಅಪ್ ಸ್ಥಳವಾಗಿ ಆಯ್ಕೆಯಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಆದರೆ, ಸ್ಥಳ ಬದಲಾವಣೆ ಬಗ್ಗೆ ಯಾವುದೇ ಫ್ರಾಂಚೈಸಿಗೆ ಸೂಚನೆ ಬಂದಿಲ್ಲವೆಂದು ವರದಿ ಹೇಳಿದೆ.
ಮುಂಬೈ, ಡೆಲ್ಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಅಹ್ಮದಾಬಾದ್ ನಗರಗಳನ್ನು ಐಪಿಎಲ್ಗಾಗಿ ಬಿಸಿಸಿಐ ಘೋಷಿಸಿದೆ. ಮೊದಲ ಹಂತದ ಪಂದ್ಯಗಳು ಮುಂಬೈ ಮತ್ತು ಚೆನ್ನೈನಲ್ಲಿ, ಎರಡನೇ ಹಂತದ ಪಂದ್ಯಗಳು ಅಹ್ಮದಾಬಾದ್ ಮತ್ತು ಡೆಲ್ಲಿ ಮತ್ತು 3ನೇ ಹಂತದ ಪಂದ್ಯಗಳು ಬೆಂಗಳೂರು ಮತ್ತು ಕೋಲ್ಕತಾದಲ್ಲಿ ನಡೆಯಲಿವೆ.
ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ಅಹ್ಮದಾಬಾದ್ನಲ್ಲಿ ಮೇ ಕೊನೆಯಲ್ಲಿ ನಡೆಯಯಲಿವೆ. ಎಲ್ಲಾ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇದನ್ನು ಓದಿ:ಐಪಿಎಲ್ 2021.. ಅಕ್ಷರ್ ಪಟೇಲ್ಗೆ ಕೊರೊನಾ ಪಾಸಿಟಿವ್, ಆತಂಕದಲ್ಲಿ ಕ್ಯಾಪಿಟಲ್ಸ್!