ETV Bharat / sports

ಕೊನೆಯ ಬಾಲ್​​ನಲ್ಲಿ ಸಿಕ್ಸರ್​, ರೋಚಕ ಜಯ ಸಾಧಿಸಿದ ವಿನಯ್​ ಕುಮಾರ್​ ಬಳಗ

ಡೇವಿಡ್​ ಮೆಥಾಯಿಸ್​ ಕೊನೆಯ ಎರಡು ಎಸೆತದಲ್ಲಿ ತಲಾ ಒಂದು ಸಿಕ್ಸರ್​ ಹಾಗೂ ಬೌಂಡರಿ ಬಾರಿಸಿ ಹುಬ್ಬಳ್ಳಿ ಟೈಗರ್ಸ್​ಗೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.

Hubli tigers
author img

By

Published : Aug 22, 2019, 11:41 PM IST

ಬೆಂಗಳೂರು: ಕೊನೆಯ ಎರಡು ಎಸೆತದಲ್ಲಿ ತಲಾ ಒಂದು ಸಿಕ್ಸರ್​ ಹಾಗೂ ಬೌಂಡರಿ ಸಿಡಿಸಿದ ಡೇವಿಡ್​ ಮೆಥಾಯಿಸ್​ ಹುಬ್ಬಳ್ಳಿ ಟೈಗರ್ಸ್​ಗೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.

ಬಿಜಾಪುರ್​ ಬುಲ್ಸ್​ ನೀಡಿದ 124 ರನ್​ಗಳನ್ನು ಗುರಿ ಬೆನ್ನೆತ್ತಿಟ್ಟಿದ ಹುಬ್ಬಳ್ಳಿ ಟೈಗರ್ಸ್​ ಆರಂಭದಿಂದಲೇ ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತಾದರೂ ಸಂಘಟಿತ ಹೋರಾಟ ನಡೆಸಿ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು.

ಆರಂಭಿಕರಾದ ತಾಹಾ 1, ವಿಶ್ವನಾಥ್​ 9, ಲುವ್ನಿತ್​ 4 ರನ್​ ನಾಯಕ ವಿನಯ್​ ಕುಮಾರ್​ 4 ರನ್​ಗಳಿಗೆ ವಿಕೆಟ್​ ಒಪ್ಪಿಸಿದ ಔಟಾಗಿ ಹುಬ್ಬಳ್ಳಿ ತಂಡಕ್ಕೆ ಆಘಾತ ತಂದಿದ್ದರು.ಇದರ ಜೊತೆಗೆ ಕೆಎಲ್​ ಶ್ರೀಜಿತ್ 30 ಎಸೆತಗಳಿಗೆ ಕೇವಲ 18 ರನ್​ಗಳಿಸಿ ಔಟಾಗಿತ್ತು ವಿನಯ್​ ಬಳಗಕ್ಕೆ ನುಂಗಲಾರದ ತುತ್ತಾಗಿತ್ತು.

ಆದರೆ ನಿನ್ನೆಯ ಪಂದ್ಯದ ಹೀರೋ ಪ್ರವೀಣ್​ ದುಬೆ 19 ಎಸೆತಗಳಲ್ಲಿ 27, ಆದಿತ್ಯ ಸೋಮಣ್ಣ 15 ಹಾಗೂ ಡೇವಿಡ್​ ಮೆಥಾಯಿಸ್(20)​ ಕೊನೆಯ ಓವರ್​ನಲ್ಲಿ ಬೌಂಡರಿ-ಸಿಕ್ಸರ್​ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದಕ್ಕು ಮೊದಲು ಬ್ಯಾಟಿಂಗ್​ ನಡೆಸಿದ್ದ ಬಿಜಾಪುರ್​ ಬುಲ್ಸ್​ 19 ಓವರ್​ಗಳಲ್ಲಿ 119 ರನ್​ಗಳಿಸಿತ್ತು. ವಿಜೆಡಿ ನಿಯಮದ ಮೂಲಕ 124 ರನ್​ಗಳ ಟಾರ್ಗೆಟ್​ ನೀಡಲಾಗಿತ್ತು. ಬುಲ್ಸ್​ ಪರ ರಾಜು ಭಟ್ಕಳ್​ 67 ರನ್​ಗಳಿಸಿದ್ದರು.

ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್​ ತಂಡ ಒಂದುರನ್​ ಅಂತರದಿಂದ ಬಳ್ಳಾರಿ ಟಸ್ಕರ್ಸ್​ ತಂಡವನ್ನು ಮಣಿಸಿ ಮೊದಲ ಜಯ ಸಾಧಿಸಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.