ETV Bharat / sports

ಬುಮ್ರಾ, ಹನುಮ, ಶಮಿ, ಶರ್ಮಾ ಎಲ್ರದ್ದೂ ಒಂದೇ ಚಿಂತೆ: ಇಲ್ಲಿದೆ ಟೀಂ ಇಂಡಿಯಾ ಗಾಯಾಳು ತಂಡ! - ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ

ಮೂರನೇ ಟೆಸ್ಟ್‌ ಪಂದ್ಯ ಸೇರಿದಂತೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದಿಂದ ಕೆಲವು ಪ್ರಮುಖ ಆಟಗಾರರು ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಈ ಪ್ರವಾಸಕ್ಕೆ ತಂಡ ಘೋಷಿಸಿದ ನಂತರ ತಂಡದಲ್ಲಿ ಗಾಯಗೊಂಡವರನ್ನು ಒಟ್ಟು ಸೇರಿಸಿದರೆ ಹೊಸ ತಂಡವನ್ನೇ ಕಟ್ಟಬಹುದಾಗಿದೆ.

ಭಾರತ ತಂಡದ ಗಾಯಾಳುಗಳು
ಭಾರತ ತಂಡದ ಗಾಯಾಳುಗಳು
author img

By

Published : Jan 12, 2021, 8:58 PM IST

ನವದೆಹಲಿ: ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಕೊನೆಗೊಂಡ ಪಂದ್ಯದಲ್ಲಿ ಭಾರತ ತಂಡ ರೋಚಕ ಡ್ರಾ ಸಾಧಿಸಿದೆ. ಪಂತ್, ಪೂಜಾರ ಹಾಗೂ ಅಶ್ವಿನ್​-ವಿಹಾರಿ ಅವರ ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಅವಿಸ್ಮರಣೀಯ ಡ್ರಾ ಸಾಧಿಸಿ ಕೊನೆಯ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.

ಈ ಪಂದ್ಯ ಮುಗಿಯುತ್ತಿದ್ದಂತೆ ತಂಡದಿಂದ ಕೆಲವು ಪ್ರಮುಖ ಆಟಗಾರರು ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಘೋಷಿಸಿದ ನಂತರ ತಂಡದಲ್ಲಿ ಗಾಯಗೊಂಡವರ ಪಟ್ಟಿ ಮಾಡಿ ನೋಡಿದರೆ, ಖಂಡಿತ ಆ ತಂಡವೇ ಪ್ರಸ್ತುತ ಇರುವ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದೆ.

ಪಂದ್ಯದ ವೇಳೆ ಗಾಯಗೊಂಡಿದ್ದ ಜಡೇಜಾ ಜೊತೆಗೆ ಅಭ್ಯಾಸ ವೇಳೆ ಕನ್ನಡಿಗ ಮಯಾಂಕ್ ಅಗರ್​ವಾಲ್ ಮತ್ತು ಹೊಟ್ಟೆ ಗಾಯದ ಸಮಸ್ಯೆ ಎದುರಿಸುತ್ತಿರುವ ಜಸ್ಪ್ರೀತ್ ಬುಮ್ರಾ ಕೂಡ ಬ್ರಿಸ್ಬೇನ್​ ಟೆಸ್ಟ್​ಗೆ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಕೂಡ ಭಾರತೀಯ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ಗಾಯಗೊಂಡವರು ಮತ್ತು ಅವರ ಈಗಿನ ಆರೋಗ್ಯ ಸ್ಥಿತಿಗತಿ:

1. ಇಶಾಂತ್​ ಶರ್ಮಾ

ಭಾರತ ತಂಡದ ಹಿರಿಯ ವೇಗದ ಬೌಲರ್​ ಐಪಿಎಲ್ ವೇಳೆ ಸೈಡ್​ ಸ್ಟ್ರೈನ್​ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಪ್ರವಾಸಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದರು. ಪ್ರವಾಸಕ್ಕೆ ಮುನ್ನ ಫಿಟ್ ಆಗಿದ್ದರಾದರೂ ಟೆಸ್ಟ್ ಕ್ರಿಕೆಟ್ ಆಡುವ ಮುನ್ನ ಬಿಸಿಸಿಐ ನಿಯಮಗಳ ಪ್ರಕಾರ ದೀರ್ಘಾವಧಿಯಲ್ಲಿ ಬೌಲಿಂಗ್​ ಮಾಡಬೇಕಾಗಿರುವುದರಿಂದ ಅವರನ್ನು ಪ್ರವಾಸಕ್ಕೆ ಪರಿಗಣಿಸಿರಲಿಲ್ಲ. ಇದೀಗ ಡೆಲ್ಲಿ ಪರ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದ್ದಾರೆ. ಅವರು ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಮರಳಲಿದ್ದಾರೆ.

2. ಮೊಹಮ್ಮದ್ ಶಮಿ
ಆಸೀಸ್ ಪ್ರವಾಸಕ್ಕೆ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ಮೊಹಮ್ಮದ್ ಶಮಿ ಮೊದಲ ಟೆಸ್ಟ್​ ವೇಳೆ ಬ್ಯಾಟಿಂಗ್ ಮಾಡುವಾಗ ಮುಂದೋಳು ಮುರಿತಕ್ಕೆ ಒಳಗಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿರುವ ಶಮಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲೆರೆಡು ಟೆಸ್ಟ್​ಗೆ ಅಲಭ್ಯರಾಗುವ ಸಾಧ್ಯತೆಯಿದೆ.

3. ಉಮೇಶ್ ಯಾದವ್​

ಮತ್ತೊಬ್ಬ ಅನುಭವಿ ವೇಗಿ ಉಮೇಶ್ ಯಾದವ್​ ಎರಡನೇ ಟೆಸ್ಟ್​ ಪಂದ್ಯದ ವೇಳೆ ಕಣಕಾಲು ಸ್ನಾಯು ಸೆಳೆತಕ್ಕೆ ಒಳಗಾಗಿ ತವರಿಗೆ ಮರಳಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಯಲ್ಲಿ ಪುನಶ್ಚೇತನಕ್ಕೊಳಗಾಗಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸರಣಿ ವೇಳೆಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ.

4. ಕೆ.ಎಲ್.ರಾಹುಲ್​

ಐಪಿಎಲ್ ಮತ್ತು ಸೀಮಿತ ಓವರ್​ಗಳ ಸರಣಿಯಲ್ಲಿ ಮಿಂಚಿದ್ದ ಕೆ.ಎಲ್.ರಾಹುಲ್ ಟೆಸ್ಟ್​ ಸರಣಿಯ ಮೂರನೇ ಪಂದ್ಯದಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನುವಷ್ಟರಲ್ಲಿ ನೆಟ್ಸ್​ನಲ್ಲಿ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದರು. ಅವರು ಮಣಿಕಟ್ಟು ಗಾಯಕ್ಕೊಳಗಾಗಿರುವುದರಿಂದ ಸರಣಿಯಿಂದ ಹೊರಬಿದ್ದಿದ್ದರು. ಅವರು ಕೂಡ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

5. ರವೀಂದ್ರ ಜಡೇಜಾ

ಟಿ20 ಸರಣಿ ಗೆಲುವು ಮತ್ತು ಟೆಸ್ಟ್​ ಸರಣಿ ಸಮಬಲ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದ ಆಲ್​ರೌಂಡರ್​ ರವೀಂದ್ರ ಜಡೇಜಾ ಕೂಡ ಮೂರನೇ ಟೆಸ್ಟ್​ ಪಂದ್ಯದ ವೇಳೆ ಬೆರೆಳು ಮುರಿತಕ್ಕೆ ಒಳಗಾಗಿದ್ದಾರೆ. ಈಗಾಗಲೇ ಸರ್ಜರಿಗೆ ಒಳಗಾಗಿರುವ ಅವರು ಇಂಗ್ಲೆಂಡ್​ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಿಗೆ ಅಲಭ್ಯರಾಗಬಹುದು ಎನ್ನಲಾಗುತ್ತಿದೆ.

6. ರಿಷಭ್ ಪಂತ್

ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ ರಿಷಭ್ ಪಂತ್​ ಮೂರನೇ ಟೆಸ್ಟ್​ ಪಂದ್ಯದ ವೇಳೆ ಮೊಣಕೈಗೆ ಪೆಟ್ಟು ತಿಂದಿದ್ದರು. ಆದರೂ ಚಿಕಿತ್ಸೆ ಪಡೆದು ಮತ್ತೆ ಎರಡನೇ ಇನ್ನಿಂಗ್ಸ್​ನಲ್ಲಿ 97 ರನ್​ ಚಚ್ಚಿದ್ದರು. ಇದೀಗ ಅವರ ಫಿಟ್​ನೆಸ್​ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

7. ಹನುಮ ವಿಹಾರಿ

ಮೂರನೇ ಟೆಸ್ಟ್ ಅನ್ನು ಸೋಲಿನಿಂದ ಪಾರು ಮಾಡಿದ್ದ ಹನುಮ ವಿಹಾರಿ ಹ್ಯಾಮ್​ಸ್ಟ್ರಿಂಗ್ ಒಳಗಾಗಿರುವುದರಿಂದ ನಾಲ್ಕನೇ ಪಂದ್ಯದಿಂದ ಹೊರಬಂದಿದ್ದಾರೆ. ಅವರು ಮೂರನೇ ಟೆಸ್ಟ್​ ಪಂದ್ಯದಲ್ಲಿ 161 ಎಸೆತಗಳಲ್ಲಿ 23 ರನ್​ಗಳಿಸಿದ್ದರು. ಅವರು ಇಂಗ್ಲೆಂಡ್​ ವಿರುದ್ಧದ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ.

8. ಮಯಾಂಕ್ ಅಗರ್​ವಾಲ್​

ಮೊದಲೆರಡು ಟೆಸ್ಟ್​ ಪಂದ್ಯಗಳ ವೈಫಲ್ಯದ ನಂತರ ತಂಡದಿಂದ ಹೊರಬಿದ್ದಿದ್ದ ಆರಂಭಿಕ ಬ್ಯಾಟ್ಸ್​ಮನ್​ ಮಯಾಂಕ್ ಅಗರ್​ವಾಲ್ ಸೋಮವಾರ ನೆಟ್ಸ್​ನಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಗ್ಲೌಸ್​ಗೆ ಚೆಂಡು ಬಡಿದಿದ್ದು, ಅವರೂ ಕೂಡ ಸ್ಕ್ಯಾನಿಂಗ್​ಗೆ ಒಳಗಾಗಿದ್ದಾರೆ. ಒಂದು ವೇಳೆ ಈ ಗಾಯದ ಪ್ರಮಾಣ ದೊಡ್ಡದಾಗಿದ್ದರೆ, ಅವರು ಬ್ರಿಸ್ಬೇನ್​ ಪಂದ್ಯದಿಂದ ಹೊರಗುಳಿಯಲಿದ್ದಾರೆ.

9. ಜಸ್ಪ್ರೀತ್ ಬುಮ್ರಾ

ಮೂರನೇ ಟೆಸ್ಟ್​ನ ಮೂರನೇ ದಿನ ದಿನ ಫೀಲ್ಡಿಂಗ್​ ವೇಳೆ ಚೆಂಡನ್ನು ತಡೆಯುವ ವೇಳೆ ಹೊಟ್ಟೆಯ ಭಾಗಕ್ಕೆ ಪೆಟ್ಟು ಮಾಡಿಕೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿರಲಿಲ್ಲ. ಇಂಗ್ಲೆಂಡ್​ ವಿರುದ್ಧದ ಸರಣಿಯ ದೃಷ್ಟಿಯಿಂದ ಅವರಿಗೂ ಕೂಡ ಹೆಚ್ಚಿನ ಹೊರೆ ನೀಡಲು ಬಯಸದ ಮ್ಯಾನೇಜ್​ಮೆಂಟ್​ ಮುಂದಿನ ಪಂದ್ಯದಿಂದ ಹೊರಗುಳಿಸಲಿದೆ.

10. ರವಿಚಂದ್ರನ್ ಅಶ್ವಿನ್​

ಈ ಟೂರ್ನಿಯಲ್ಲಿ 134 ಓವರ್​ ಬೌಲಿಂಗ್ ಮಾಡಿರುವ ಅನುಭವಿ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್​ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಆದರೂ 3ನೇ ಟೆಸ್ಟ್​ನ ಕೊನೆಯ ದಿನ ವಿಹಾರಿ ಜೊತೆಗೆ 43 ಓವರ್​ಗಳ ಕಾಲ ಬ್ಯಾಟಿಂಗ್ ನಡೆಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಚಿಕಿತ್ಸೆ ಪಡೆಯುತ್ತಿರುವ ಅಶ್ವಿನ್​ರನ್ನು ನಾಲ್ಕನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಎದುರು ನೋಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.