ನವದೆಹಲಿ: ಇಂಗ್ಲೆಂಡ್ ತಂಡದ ಜೇಮ್ಸ್ ಆ್ಯಂಡರ್ಸನ್ ಜೊತೆ ಕ್ರೀಡಾ ವೆಬ್ಸೈಟ್ ಒಂದು ಹೋಲಿಕೆ ಮಾಡಿ ಅಂಕಿ-ಅಂಶ ಪ್ರಕಟಿಸಿದ್ದಕ್ಕೆ ಉತ್ತರಿಸಿರುವ ಸ್ಟೈನ್, ಇಂಗ್ಲಿಷ್ ಬೌಲರ್ ವಯಸ್ಸಿಗೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ ಮುಗಿದ ಮೊದಲ ಟೆಸ್ಟ್ನಲ್ಲಿ ಎರಡನೇ ಇನ್ನಿಂಗ್ಸ್ ವೇಳೆ ಶುಬ್ಮನ್ ಗಿಲ್, ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ವಿರುದ್ಧ 227 ರನ್ಗಳ ಜಯ ಗಳಿಸಲು ಪ್ರಮುಖ ಪಾತ್ರ ವಹಿಸಿದ್ದರು.
ಕ್ರೀಡಾ ವೆಬ್ಸೈಟ್, ಏಷ್ಯಾ ನೆಲದಲ್ಲಿ ಸ್ಟೈನ್ ಮತ್ತು ಆ್ಯಂಡರ್ಸನ್ ಎಷ್ಟು ಉತ್ತಮ ಪ್ರದರ್ಶನ ತೋರಿದ್ದಾರೆಂದು ಅಂಕಿ-ಅಂಶಗಳನ್ನು ಟ್ವೀಟ್ ಮಾಡಿತ್ತು. ಅದರ ಪ್ರಕಾರ ಆ್ಯಂಡರ್ಸನ್ 27.94 ಸರಾಸರಿಯಲ್ಲಿ 71 ವಿಕೆಟ್ ಪಡೆದಿದ್ದರು. ಅವರ ಬೆಸ್ಟ್ ಬೌಲಿಂಗ್ 46 ರನ್ ನೀಡಿ 6 ವಿಕೆಟ್ ಪಡೆದಿರುವುದಾಗಿತ್ತು. ಸ್ಟೈನ್ 24.11 ಸರಾಸರಿಯಲ್ಲಿ 92 ವಿಕೆಟ್ ಪಡೆದಿದ್ದರು. ಅವರು 108 ರನ್ ನೀಡಿ 10 ವಿಕೆಟ್ ಪಡೆದಿರುವುದು ಅತ್ಯುತ್ತಮ ಪ್ರದರ್ಶನವಾಗಿತ್ತು.
-
The only comparison required is that Jimmy is still going and I’m watching from my 20/20 sofa.
— Dale Steyn (@DaleSteyn62) February 10, 2021 " class="align-text-top noRightClick twitterSection" data="
He’s a legend and seems to be getting better with age 🍷
">The only comparison required is that Jimmy is still going and I’m watching from my 20/20 sofa.
— Dale Steyn (@DaleSteyn62) February 10, 2021
He’s a legend and seems to be getting better with age 🍷The only comparison required is that Jimmy is still going and I’m watching from my 20/20 sofa.
— Dale Steyn (@DaleSteyn62) February 10, 2021
He’s a legend and seems to be getting better with age 🍷
ಆದರೆ ಈ ಟ್ವೀಟ್ಗೆ ಕಮೆಂಟ್ ಮಾಡಿದ್ದ ಸ್ಟೈನ್, "ಹೋಲಿಕೆಯಲ್ಲಿ ಅಗತ್ಯವಾಗಿರುವುದೆಂದರೆ ಜಿಮ್ಮಿ ಇನ್ನು ಆಡುತ್ತಿದ್ದಾರೆ. ನಾನು ನನ್ನ 20/20 ಸೋಫಾದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದೇನೆ. ಅವರೊಬ್ಬ ದಂತಕತೆ ಮತ್ತು ವಯಸ್ಸಿಗೆ ತಕ್ಕಂತೆ ಉತ್ತಮವಾಗುತ್ತಿದ್ದಾರೆ" ಎಂದು ತಮಗಿಂತ ಆ್ಯಂಡರ್ಸನ್ ಶ್ರೇಷ್ಠ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ 93 ಪಂದ್ಯಗಳನ್ನಾಡಿರುವ ಸ್ಟೈನ್ 439 ವಿಕೆಟ್ ಪಡೆದಿದ್ದಾರೆ. 26 ಬಾರಿ 5 ವಿಕೆಟ್ ಪಡೆದಿದ್ದಾರೆ. 5 ಬಾರಿ 10 ವಿಕೆಟ್ ಪಡೆದಿದ್ದಾರೆ. ಆ್ಯಂಡರ್ಸನ್ 158 ಪಂದ್ಯಗಳಳಿಂದ 611 ವಿಕೆಟ್ ಪಡೆದಿದ್ದಾರೆ. 30 ಬಾರಿ 5 ವಿಕೆಟ್ ಹಾಗೂ 3 ಬಾರಿ 10 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:2ನೇ ಟೆಸ್ಟ್ ಪಂದ್ಯಕ್ಕೆ ಆ್ಯಂಡರ್ಸನ್ಗೆ ವಿಶ್ರಾಂತಿ: ಸುಳಿವು ನೀಡಿದ ಕೋಚ್ ಸಿಲ್ವರ್ವುಡ್