ETV Bharat / sports

ಸುಲಭವಾಗಿ ವಿಕೆಟ್‌ ಒಪ್ಪಿಸಿದ ಕೆ ಎಲ್‌ ರಾಹುಲ್,, ಅದಕ್ಕೆ ಸಮಜಾಯಿಸಿ ಕೊಟ್ಟ ಕನ್ನಡಿಗ.. - ಟೆಸ್ಟ್​ ಕ್ರಿಕೆಟ್​

ಕಳೆದ ಎರಡು ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ರನ್​ಗಳಿಸಲು ಪರದಾಡುತ್ತಿದ್ದಾರೆ. ಉತ್ತಮ ಆರಂಭ ಪಡೆದರೂ 35-40 ರನ್​ಗಳಿಸಿ ವಿಕೆಟ್​ ಒಪ್ಪಿಸುತ್ತಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಕೆ ಎಲ್‌ ರಾಹುಲ್‌ ಅವರದು ಅದೇ ಸಮಸ್ಯೆ.

KL Rahul
author img

By

Published : Aug 25, 2019, 12:40 PM IST

ಆ್ಯಂಟಿಗೋವಾ: ಭಾರತ ತಂಡದ ಪರ ಆಡುತ್ತಿರುವ ಕನ್ನಡಿಗ ಕೆ ಎಲ್‌ ರಾಹುಲ್​ ಉತ್ತಮ ಆರಂಭ ಪಡೆದರೂ ದೊಡ್ಡಮೊತ್ತ ಗಳಿಸಲಾಗದೆ ವಿಕೆಟ್‌ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ರನ್​ಗಳಿಸಲು ಪರದಾಡುತ್ತಿದ್ದಾರೆ. ಉತ್ತಮ ಆರಂಭ ಪಡೆದರೂ 35-40 ರನ್​ಗಳಿಗೆ ವಿಕೆಟ್​ ಒಪ್ಪಿಸುತ್ತಿದ್ದಾರೆ. ಇದು ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಅದೇ ಸಮಸ್ಯೆ ಮುಂದುವರಿದಿದೆ.

ಮೊದಲ ಇನ್ನಿಂಗ್ಸ್​ನಲ್ಲಿ 44 ರನ್​ಗಳಿಸಿದ ರಾಹುಲ್​ ಎರಡನೇ ಇನ್ನಿಂಗ್ಸ್​ನಲ್ಲಿ 38 ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದರು. ಆದರೆ, ಎರಡೂ ಇನ್ನಿಂಗ್ಸ್​ನಲ್ಲೂ ಸ್ಪಿನ್ನರ್​ ರಾಸ್ಟನ್​ ಚೇಸ್​ಗೆ ವಿಕೆಟ್​ ಒಪ್ಪಿಸಿದ್ದರು. ಈ ಕುರಿತು ರಾಹುಲ್​ ಪ್ರತಿಕ್ರಿಯಿಸಿದ್ದು, ಸ್ಪಿನ್​ ಬೌಲರ್​ಗಳಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಒಪ್ಪಿಸಿದ್ದಕ್ಕೆ ಕಾರಣ ತಿಳಿಸಿದ್ದಾರೆ.

"ಈ ರೀತಿ ವಿಕೆಟ್​ ಒಪ್ಪಿಸಿರುವುದಕ್ಕೆ ನನಗೆ ತುಂಬಾ ಬೇಸರ ಇದೆ. ಆದರೆ, ನಾನು ಕಳೆದೆರಡು ಇನ್ನಿಂಗ್ಸ್​ನಲ್ಲಿ ಉತ್ತಮವಾಗಿ ಆಡುತ್ತಿದ್ದೇನೆ. ಇದರಿಂದ ನಾನು ತುಂಬಾ ಪಾಸಿಟಿವ್​ ಆಗಿದ್ದೇನೆ. ಉತ್ತಮ ಇನ್ನಿಂಗ್ಸ್​ ಬರುವವರೆಗೂ ನಾನು ನನ್ನ ತಲೆ ತಗ್ಗಿಸಿಕೊಂಡು ತಾಳ್ಮೆಯಿಂದ ಇರುತ್ತೇನೆ. ಈ ಪಂದ್ಯದಲ್ಲಿ 35-40 ರನ್​ಗಳಿಸುತ್ತಿದ್ದೇನೆ. ಆದರೆ, ಸ್ಪಿನ್ನರ್​ಗಳಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ತಳ ಊರದಂತೆ ಮಾಡಲು ಬಯಸುವೆ. ಅದೇ ಕಾರಣದಿಂದ ನಾನು ನನಗೆ ಇಷ್ಟವಾದಂತೆ ಬ್ಯಾಟಿಂಗ್​ ನಡೆಸಲು ಪ್ರಯತ್ನಿಸುತ್ತೇನೆ. ಆದರೆ, ಕೆಲವು ಸಂದರ್ಭದಲ್ಲಿ ನನ್ನ ಆಲೋಚನೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಹಾಗಾಗಿ ವಿಕೆಟ್​ ಒಪ್ಪಿಸಬೇಕಾಗುತ್ತದೆ" ಎಂದಿದ್ದಾರೆ.

ಈ ಪಂದ್ಯದಲ್ಲಿ 60-80 ಎಸೆತಗಳನ್ನು ಎದುರಿಸುತ್ತಿದ್ದೇನೆ. ಏನಾದರೂ 200-250 ಎಸೆತಗಳನ್ನು ಎದುರಿಸಿದರೆ ನನಗೂ ಮತ್ತು ತಂಡಕ್ಕೂ ಅನುಕೂಲವಾಗುತ್ತದೆ. ಅದನ್ನೇ ಮುಂದಿನ ಪಂದ್ಯದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.