ETV Bharat / sports

ಮಂಡಿಯೂರಿ ಕುಳಿತು ಬ್ಲಾಕ್ ಲೈಫ್ ಮ್ಯಾಟರ್​ಗೆ ಬೆಂಬಲ ಸೂಚಿಸಿದ ಪಾಂಡ್ಯ - Jason Holder

ಈ ಆಂದೋಲನಕ್ಕೆ ಈಗಾಗಲೇ ಇಂಗ್ಲೆಂಡ್​ನಲ್ಲಿ ನಡೆದ ಕೆಲವು ಸರಣಿ, ಸಿಪಿಎಲ್​ನಲ್ಲಿ ಹಾಗೂ ಫುಟ್ಬಾಲ್​​​ ಲೀಗ್​ಗಳಲ್ಲೂ ಬೆಂಬಲ ಸೂಚಿಸಿ ಕಪ್ಪು ಜನಾಂಗದವರ ಮೇಲಿನ ದೌರ್ಜನ್ಯ ಖಂಡಿಸಲಾಗುತ್ತಿದೆ. ಅವರನ್ನು ಸಾಮಾನ್ಯ ಮನುಷ್ಯರಂತೆ ನೋಡಬೇಕೆಂದು ಜಾಗೃತಿ ನೀಡಲಾಗುತ್ತಿದೆ.

ಬ್ಲಾಕ್ ಲೈಫ್ ಮ್ಯಾಟರ್​ಗೆ ಬೆಂಬಲ ಸೂಚಿಸಿದ ಪಾಂಡ್ಯ

author img

By

Published : Oct 26, 2020, 5:14 PM IST

ಅಬುಧಾಬಿ: ಅಮೆರಿಕದಲ್ಲಿ ಪೊಲೀಸರಿಂದ ಜಾರ್ಜ್ ಫ್ಲಾಯ್ಡ್​ ಎಂಬ ಕಪ್ಪು ಜನಾಂಗದ ವ್ಯಕ್ತಿ ಹತ್ಯೆಯಾದ ನಂತರ ಕ್ರೀಡಾಲೋಕದಲ್ಲಿ 'ಬ್ಲಾಕ್​ ಲೈವ್ಸ್​ ಮ್ಯಾಟರ್'​ ಎಂಬ ಆಂದೋಲನ ನಡೆಯುತ್ತಿದೆ.

ಈ ಆಂದೋಲನಕ್ಕೆ ಈಗಾಗಲೇ ಇಂಗ್ಲೆಂಡ್​ನಲ್ಲಿ ನಡೆದ ಕೆಲವು ಸರಣಿ, ಸಿಪಿಎಲ್​ನಲ್ಲಿ ಹಾಗೂ ಫುಟ್ಬಾಲ್​​​​ ಲೀಗ್​ಗಳಲ್ಲೂ ಬೆಂಬಲ ಸೂಚಿಸಿ ಕಪ್ಪು ಜನಾಂಗದವರ ಮೇಲಿನ ದೌರ್ಜನ್ಯ ಖಂಡಿಸಲಾಗುತ್ತಿದೆ. ಅವರನ್ನು ಸಾಮಾನ್ಯ ಮನುಷ್ಯರಂತೆ ನೋಡಬೇಕು ಎಂದು ಜಾಗೃತಿ ನೀಡಲಾಗುತ್ತಿದೆ.

ವಿಶ್ವ ದ ಹಲವು ಟೂರ್ನಿಗಳಲ್ಲಿ ಈ ಆಂದೋಲನಕ್ಕೆ ಬೆಂಬಲ ಸಿಕ್ಕಿತ್ತು. ಆದರೆ, ಭಾರತದಲ್ಲಿ ಪ್ರಮುಖ ಕ್ರೀಡಾಕೂಟಗಳ ವೇಳೆ 'ಬ್ಲಾಕ್‌ ಲೈವ್ಸ್ ಮ್ಯಾಟರ್‌' ಗಮನ ಸೆಳೆದಿರಲಿಲ್ಲ. ಇದನ್ನು ಹೋಲ್ಡರ್​ ಕೂಡ ನೆನಪಿಸಿ ಕೆಲವು ದಿನಗಳ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.

ಆದರೆ, ಭಾನುವಾರ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್​ಮನ್ ಹಾರ್ದಿಕ್ ಪಾಂಡ್ಯ ಅದ್ಭುತ ಇನ್ನಿಂಗ್ಸ್​ ಆಡಿ ಗಮನ ಸೆಳೆದಿದ್ರು. ಈ ವೇಳೆ ಮಂಡಿಯೂರಿ ಕುಳಿತು 'ಬ್ಲ್ಯಾಕ್ ಲೈವ್ಸ್ ಮ್ಯಾಟರ್‌'ಗೆ ತಮ್ಮ ಬೆಂಬಲವನ್ನು ಸೂಚಿಸಿ ಎಲ್ಲರ ಗಮನ ಸೆಳೆದರು. ನಿನ್ನ ಮುಂಬೈ ನಾಯಕರಾಗಿದ್ದ ಪೊಲಾರ್ಡ್​ ಕೂಡ ಪಾಂಡ್ಯರ ಕಾಳಜಿಗೆ ತೀವ್ರ ಸಂತೋಷ ವ್ಯಕ್ತಪಡಿಸಿದ್ದರು.

ಕೇವಲ 21 ಎಸೆತಗಳಲ್ಲಿ 7 ಸಿಕ್ಸರ್​ ಹಾಗೂ 2 ಬೌಂಡರಿ ಸಹಿತ 60 ರನ್​ಗಳಿಸಿದ್ದ ಪಾಂಡ್ಯ ಪಂದ್ಯದ ನಂತರ ತಾವೂ ಬ್ಲಾಕ್​ ಲೈವ್ಸ್​ ಮ್ಯಾಟರ್​ಗೆ ಬೆಂಬಲ ಸೂಚಿಸಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಪಾಂಡ್ಯ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದುರದೃಷ್ಟವಶಾತ್ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಸೋಲು ಕಂಡಿತು. ಮುಂಬೈ ನೀಡಿದ 196 ರನ್​ಗಳ ಗುರಿಯನ್ನು ರಾಜಸ್ಥಾನ್ ತಂಡ ಇನ್ನು 10 ಎಸೆತಗಳು ಉಳಿದಿರುವಂತೆ ಗೆದ್ದು ಬೀಗಿತು. ಬೆನ್​ ಸ್ಟೋಕ್ಸ್​ ಆಕರ್ಷಕ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.