ಮುಂಬೈ : ಭಾರತ ತಂಡ ಕಳೆದ ಎರಡು ಪಂದ್ಯಗಳಲ್ಲಿ ತೋರಿದ ಬೌಲಿಂಗ್ ಪ್ರದರ್ಶನದಕ್ಕೆ ವೆಸ್ಟ್ ಇಂಡೀಸ್ ಲೆಜೆಂಡ್ ಮೈಕಲ್ ಹೋಲ್ಡಿಂಗ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿರುವುದು ಟೀಂ ಇಂಡಿಯಾಗೆ ದೊಡ್ಡ ಸಕಾರಾತ್ಮಕತೆ ತಂದು ಕೊಟ್ಟಿದೆ ಎಂದು ಹೇಳಿದ್ದಾರೆ.
ಭಾರತ ತಂಡ ಕಳೆದೆರಡು ಪಂದ್ಯದಲ್ಲಿ ಸಾಕಷ್ಟು ರನ್ಗಳನ್ನು ಬಿಟ್ಟುಕೊಟ್ಟಿದೆ. ಎರಡು ಪಂದ್ಯಗಳಲ್ಲೂ ಭಾರತ ತಂಡ 370ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದೆ. ಹಾಗಾಗಿ ಭಾರತೀಯ ಬೌಲರ್ಗಳ ಪ್ರದರ್ಶನ ಸೋಲಿಗೆ ಕಾರಣ ಎಂದು ಹೋಲ್ಡಿಂಗ್ ತಿಳಿಸಿದ್ದಾರೆ.
ಭಾರತ ತಂಡ ವಿಕೆಟ್ ಪಡೆಯುವುದರಲ್ಲಿ ಸಮಸ್ಯೆ ಎದುರಿಸುತ್ತಿದೆ. ನಿಮ್ಮ ಬೌಲರ್ಗಳು ಪ್ರತಿ ಪಂದ್ಯದಲ್ಲೂ ಆರಂಭಿಕರನ್ನು ಔಟ್ ಮಾಡಲಾಗುತ್ತಿಲ್ಲ. ಆದ್ದರಿಂದ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಉತ್ತಮ ಜೊತೆಯಾಟವನ್ನು ನಡೆಸುತ್ತಿದ್ದಾರೆ. ಭಾರತ ತಂಡ ಎರಡೂ ಪಂದ್ಯಗಳಲ್ಲೂ ಸಾಕಷ್ಟು ಸಮಸ್ಯೆ ಎದುರಿಸಿದೆ.
ಇದರ ಲಾಭ ಪಡೆದ ಆಸ್ಟ್ರೇಲಿಯಾ ತಂಡ 389 ರನ್ಗಳಿಸಿತ್ತು. ನಾನು ನಿಮ್ಮ ತಂಡ ಅಷ್ಟು ಮೊತ್ತವನ್ನು ಚೇಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿಲ್ಲ. ಆದರೆ ಆ ಮೊತ್ತ ಬ್ಯಾಟ್ಸ್ಮನ್ಗಳಿಗೆ ಒತ್ತಡವನ್ನುಂಟು ಮಾಡುತ್ತಿದೆ. ಅದು ಯಾವುದೇ ಒಳ್ಳೆಯ ಪಿಚ್ ಅಥವಾ ಕಠಿಣ ಪಿಚ್ ಆದರೂ ಚೇಸಿಂಗ್ ಮಾಡುವುದು ಕಷ್ಟವಾಗುತ್ತಿದೆ ಎಂದಿದ್ದಾರೆ.
ಆದರೆ, 2ನೇ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿ ಬೌಲಿಂಗ್ ಮಾಡಿರುವುದು ತಂಡದಲ್ಲಿ ಪಾಸಿಟಿವ್ ತಂದಿದೆ. ಅವರು ಎರಡನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ವಿಕೆಟ್ ಪಡೆದಿದ್ದರು.
"ಮುಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಸಕಾರಾತ್ಮಕವಾಗಿ ನೋಡಬಹುದಾದ ಒಂದು ವಿಷಯವೆಂದರೆ ಪಾಂಡ್ಯ ಬೌಲರ್ ಆಗಿ ಲಯಕ್ಕೆ ಮರಳಿದ್ದಾರೆ. ಅವರು ನಿನ್ನೆಯ ಪಂದ್ಯದಲ್ಲಿ ನಾಲ್ಕು ಓವರ್ಗಳನ್ನು ಬೌಲ್ ಮಾಡಿದ್ದಾರೆ. ಇದರರ್ಥ ಅವರು ಚೆಂಡಿನೊಂದಿಗೂ ದೊಡ್ಡ ಪಾತ್ರ ತೆಗೆದುಕೊಳ್ಳುವ ಹಾದಿಯಲ್ಲಿದ್ದಾರೆ " ಎಂದು ಹೋಲ್ಡಿಂಗ್ ತಿಳಿಸಿದ್ದಾರೆ.
ಈ ಸರಣಿಯಲ್ಲಿ ಭಾರತ ತಂಡ ಹಾರ್ದಿಕ್ ಪಾಂಡ್ಯ ಬೌಲಿಂಗ್ನ ದೊಡ್ಡ ಪ್ರಮಾಣದಲ್ಲಿ ಮಿಸ್ ಮಾಡಿಕೊಂಡಿದೆ. ಯಾಕೆಂದರೆ, ಚಹಾಲ್, ಜಡೇಜಾ ಹಾಗೂ ಸೈನಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿರುವುದರ ಜೊತೆಗೆ ಸಾಕಷ್ಟು ರನ್ ಬಿಟ್ಟು ಕೊಡುತ್ತಿದ್ದಾರೆ. ನಾಳಿನ ಪಂದ್ಯದಲ್ಲಿ ಪಾಂಡ್ಯ ಅವರ ಬೌಲಿಂಗ್ ಪಾತ್ರ ಮಹತ್ವದ್ದಾಗಿರುತ್ತದೆ.