ETV Bharat / sports

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಹಾರ್ದಿಕ್​ ಪಾಂಡ್ಯಗೆ ಈ ಟಾಸ್ಕ್​ ನೀಡಿದ ಬಿಸಿಸಿಐ

author img

By

Published : Jan 22, 2020, 2:28 PM IST

ಕಿವೀಸ್​ ಪ್ರವಾಸದ ನಂತರ ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಗೆ ಕಮ್​ಬ್ಯಾಕ್​ ಮಾಡಬೇಕಾದರೆ ಬರೋಡ ಪರ ಕಡಿಮೆಯಂದರೂ ಒಂದು ಪಂದ್ಯದಲ್ಲಿ ಬೌಲಿಂಗ್​ ಮಾಡಿ ತಮ್ಮ ಫಿಟ್​ನೆಸ್​ ಸಾಭೀತು ಪಡಿಸಬೇಕು ಎಂದು ಬಿಸಿಸಿಐ ತಿಳಿಸಿದೆ.

Hardik Pandya
Hardik Pandya

ಮುಂಬೈ: ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಫಿಟ್​ನೆಸ್​ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ನ್ಯೂಜಿಲ್ಯಾಂಡ್​ ಪ್ರವಾಸದಿಂದ ಹೊರಬಿದ್ದಿದ್ದಾರೆ.

ಇದೀಗ ಕಿವೀಸ್​ ಪ್ರವಾಸದ ನಂತರ ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಗೆ ಕಮ್​ಬ್ಯಾಕ್​ ಮಾಡಬೇಕಾದರೆ ಬರೋಡ ಪರ ಕಡಿಮೆಯಂದರೂ ಒಂದು ಪಂದ್ಯದಲ್ಲಿ ಬೌಲಿಂಗ್​ ಮಾಡಿ ತಮ್ಮ ಫಿಟ್​ನೆಸ್​ ಸಾಭೀತು ಪಡಿಸಬೇಕು ಎಂದು ಬಿಸಿಸಿಐ ತಿಳಿಸಿದೆ.

ಬೆನ್ನಿನ ಶಸ್ತ್ರ ಚಿಕಿತ್ಸೆ ಆಗಿರುವುದರಿಂದ ಪಾಂಡ್ಯರನ್ನು ಕಿವೀಸ್​ ಪ್ರವಾಸಕ್ಕೂ ಮುನ್ನ ಪಿಟ್​ನೆಸ್​ ಸಾಭೀತು ಪಡೀಸಲು ಕೋರಿತ್ತು. ಆದರೆ ಪಾಂಡ್ಯ ಯೋ-ಯೋ ಟೆಸ್ಟ್​ ಇರಲಿ ಕೇವಲ ಬೌಲಿಂಗ್​ ಪರೀಕ್ಷೆಯಲ್ಲೂ ಅನುತ್ತೀರ್ಣರಾಗಿದ್ದರು.

26 ವರ್ಷದ ಪಾಂಡ್ಯ ತಾವೂ ನ್ಯೂಜಿಲ್ಯಾಂಡ್​ ಪ್ರವಾಸದ ದ್ವಿತೀಯ ಭಾಗಕ್ಕೆ(ಏಕದಿನ ಕ್ರಿಕೆಟ್​) ತಾವೂ ಫಿಟ್​ ಎಂದು ಘೋಷಿಸಿಕೊಂಡಿದ್ದರು. ಆದರೆ ಇದಕ್ಕೆ ಬಿಸಿಸಿಐ ಪಾಂಡ್ಯ ಫಿಟ್​ ಆಗಿದ್ದಾರೆ ಎನ್ನುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದೆ.

"ಪಾಂಡ್ಯ ಫಿಟ್​ ಇದ್ದೇನೆ ಎಂಬ ಭಾವನೆಯಲ್ಲಿದ್ದಾರೆ, ಆದರೆ ಅವರು ಫಿಟ್ನೆಸ್ ಸಾಭೀತು ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ನಮಗೆ ಅವರ ತರಬೇತದಾರರಾದ ಎಸ್ ರಜನಿಕಾಂತ್ ಅವರಿಂದ ತಿಳಿದುಬಂದಿದೆ. ಇದು ಯೋ ಯೋ ಟೆಸ್ಟ್​ ಬಗ್ಗೆ ಅಲ್ಲ, ಅವರ ಬೌಲಿಂಗ್​ ಫಿಟ್​ನೆಸ್​ ಕುರಿತು ಆಲೋಚಿಸಬೇಕಿದೆ. ಅವರು ಬೌಲಿಂಗ್​ ಒತ್ತಡ ನಿಭಾಯಿಸುವಲ್ಲಿ ಫೇಲ್​ ಆಗಿರುವುದರಿಂದ ಅವರು ಫಿಟ್​ನೆಸ್​ನಲ್ಲೂ ಫೇಲ್​ ಆದಂತೆ" ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಅಕ್ಟೋಬರ್​ನಲ್ಲಿ ಟಿ20 ವಿಶ್ವಕಪ್​ ನಡೆಯಲಿರುವುದರಿಂದ ಪಾಂಡ್ಯ ಫಿಟ್​ನೆಸ್​ ಅತ್ಯಂತ ಮುಖ್ಯವಾಗಿದೆ. ಅಷ್ಟರಲ್ಲಿ ಅವರು ಬೌಲಿಂಗ್​-ಬ್ಯಾಟಿಂಗ್​ ಎರಡರಲ್ಲೂ ಪಿಟ್​ನೆಸ್​ ಅವಶ್ಯಕವಾಗಿದೆ. ಅವರು ಉತ್ತಮ ಮಧ್ಯಮ ವೇಗಿ ಹಾಗೂ ಸ್ಫೋಟಕ ಬ್ಯಾಟಿಂಗ್​ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕೊನೆಯದಾಗಿ ಭಾರತದ ಪರ ಕಳೆದ ವರ್ಷ ಸೆಫ್ಟೆಂಬರ್​ನಲ್ಲಿ ಆಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.