ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಗಣನೀಯ ಕೊಡುಗೆ ನೀಡಲು ಸಿದ್ಧರಿದ್ದಾರೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಬನ್ನಿನ ಶಸ್ತ್ರ ಚಿಕಿತ್ಸೆಯ ನಂತರ ಅತ್ಯುತ್ತಮ ಸ್ಥಿತಿಗೆ ಮರಳಲು ಅವರುವ ತಮ್ಮಿಂದಾಗುವ ಎಲ್ಲವನ್ನು ಮಾಡುತ್ತಿದ್ದಾರೆ ಎಂದು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ 2019ರಲ್ಲಿ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರು 2020ರ ಐಪಿಎಲ್ಗೆ ಕಮ್ಬ್ಯಾಕ್ ಮಾಡಿದ್ದರು. ಆದರೆ ಐಪಿಎಲ್ನಲ್ಲಿ ಬೌಲಿಂಗ್ನಿಂದ ದೂರ ಉಳಿದಿದ್ದರು. ನಂತರ ಸೀಮಿತ ಓವರ್ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಉತ್ತಮ ಪ್ರದರ್ಶನ ತೋರಿದ್ದರು. ಆದರೆ 6 ಪಂದ್ಯಗಳಲ್ಲಿನ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಬೌಲಿಂಗ್ ಮಾಡಿದ್ದರು.
ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡಕ್ಕೆ ಮರಳಿದರಾದರೂ 4 ಪಂದ್ಯಗಳಲ್ಲೂ ಬೆಂಚ್ ಕಾಯ್ದಿದ್ದರು. ಆದರೆ ರೋಹಿತ್ ಪ್ರಕಾರ ಟೆಸ್ಟ್ ಸರಣಿಯಲ್ಲಿ ತಂಡದ ಜೊತೆ ಕಾಲ ಕಳೆದಿರುವುದು ಪಾಂಡ್ಯಗೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ತಮ್ಮಿಂದ ತಂಡ ಬಯಸಿದ್ದನ್ನು ನೀಡಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.
" ಖಂಡಿತವಾಗಿಯೂ ಅವರು(ಪಾಂಡ್ಯ) ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಆ ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸೀಮಿತ ಸರಣಿಗೆ ತಯಾರಾಗುವುದಕ್ಕೆ ಅವರು ತಂಡದೊಂದಿಗೆ ಒಂದೂವರೆ ತಿಂಗಳು ಕಾಲ ಇದ್ದದ್ದೂ ಅವರಿಗೆ ನೆರವಾಗಿದೆ " ಎಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅವರಿಂದ ತಂಡ ಏನನ್ನು ಬಯಸುತ್ತಿದಿಯೋ ಅದನ್ನು ಮಾಡಲು ಪಾಂಡ್ಯ ಸಿದ್ಧರಿದ್ದಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಬ್ಯಾಟಿಂಗ್ ಅಲ್ಲದೆ ಕಳೆದ ಕೆಲವು ವಾರಗಳಿಂದ ಬೌಲಿಂಗ್ನಲ್ಲು ಕೆಲಸ ಮಾಡುತ್ತಿದ್ದಾರೆ. ಖಂಡಿತ ಅವರು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿದ್ದಾರೆ ಎಂದು ನನಗೆ ವಿಶ್ವಾಸವಿದೆ ಎಂದು ರೋಹಿತ್ ತಿಳಿಸಿದ್ದಾರೆ.
ಇದನ್ನು ಓದಿ:ಐಸಿಸಿ ವಿಶ್ವಕಪ್ಗಳ ನಡುವೆ ಅಂತರ ಕಾಯ್ದುಕೊಳ್ಳುವ ಮೂಲಕ ಅದರ ಮೋಡಿ ಕಾಪಾಡಿಕೊಳ್ಳಬೇಕು: ರೋಹಿತ್ ಶರ್ಮಾ