ಮುಂಬೈ : ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ 2 ವರ್ಷಗಳ ಐಪಿಎಲ್ ಒಪ್ಪಂದ ಅಂತ್ಯವಾಗಿದೆ ಎಂದು ಟೀಂ ಇಂಡಿಯಾ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬುಧವಾರ ತಿಳಿಸಿದ್ದಾರೆ.
"ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ನನ್ನ ಒಪ್ಪಂದ ಅಂತ್ಯವಾಗಿದೆ. ಐಪಿಎಲ್ನಲ್ಲಿ ಈ ತಂಡದ ಜೊತೆಗೆ ಆಡಿರೋದು ಅದ್ಭುತ ಅನುಭವವನ್ನು ನೀಡಿದೆ. ಈ ತಂಡ ಸುಂದರವಾದ ನೆನಪುಗಳನ್ನು ನೀಡಿದ್ದು ಮುಂದಿನ ಕೆಲವು ವರ್ಷ ನೆನಪಿಸಿಕೊಳ್ಳುವಂತಹ ಸ್ನೇಹಿತರನ್ನು ನೀಡಿದೆ.
ಚೆನ್ನೈ ಸೂಪರ್ ಕಿಂಗ್ಸ್, ಮ್ಯಾನೇಜ್‌ಮೆಂಟ್, ಸಿಬ್ಬಂದಿ ಹಾಗೂ ಸಿಎಸ್ಕೆ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು, ಶುಭವಾಗಲಿ" ಎಂದು ಹರ್ಭಜನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
-
As my contract comes to an end with @ChennaiIPL, playing for this team was a great experience..beautiful memories made &some great friends which I will remember fondly for years to come..Thank you @ChennaiIPL, management, staff and fans for a wonderful 2years.. All the best..🙏
— Harbhajan Turbanator (@harbhajan_singh) January 20, 2021 " class="align-text-top noRightClick twitterSection" data="
">As my contract comes to an end with @ChennaiIPL, playing for this team was a great experience..beautiful memories made &some great friends which I will remember fondly for years to come..Thank you @ChennaiIPL, management, staff and fans for a wonderful 2years.. All the best..🙏
— Harbhajan Turbanator (@harbhajan_singh) January 20, 2021As my contract comes to an end with @ChennaiIPL, playing for this team was a great experience..beautiful memories made &some great friends which I will remember fondly for years to come..Thank you @ChennaiIPL, management, staff and fans for a wonderful 2years.. All the best..🙏
— Harbhajan Turbanator (@harbhajan_singh) January 20, 2021
ಮುಂಬೈ ಪರ ನಾಯಕನಾಗಿ ಐಪಿಎಲ್ ಜರ್ನಿ ಆರಂಭಿಸಿದ್ದ ಹರ್ಭಜನ್ ಸಿಂಗ್, 2020ರ ಆವೃತ್ತಿಯಲ್ಲಿ ಆಲ್ಗೊಂಡಿರಲಿಲ್ಲ. ಇದೀ 40 ವರ್ಷದ ಆಟಗಾರರನ್ನು ಸಿಎಸ್ಕೆ ತಂಡದಿಂದ ಬಿಡುಗಡೆ ಮಾಡಿದೆ.
ಸತತ 10 ವರ್ಷ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅವರನ್ನು 2018ರ ಐಪಿಎಲ್ ಆವೃತ್ತಿಯ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೂಲ ಬೆಲೆ ₹2 ಕೋಟಿಗೆ ಖರೀದಿಸಲಾಗಿತ್ತು. ಭಜ್ಜಿ ಜೊತೆಗೆ ಗರಿಷ್ಠ ಬೆಲೆಯುಳ್ಳ ಪಿಯೂಷ್ ಚಾವ್ಲಾ, ಕೇದಾರ್ ಜಾಧವ್ರನ್ನು ಕೈಬಿಡಬಹುದು ಎನ್ನಲಾಗುತ್ತಿದೆ.
ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಸಂಜೆ 6 ಗಂಟೆಯೊಳಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕಿದೆ.