ಮುಂಬೈ: ಭಾರತ ತಂಡಕ್ಕೆ 4-5 ವರ್ಷಗಳಿಂದ 4ನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನನ್ನು ಆಯ್ಕೆಮಾಡಲಾಗದೇ ಬಿಸಿಸಿಐ ಗೊಂದಲದಲ್ಲಿದೆ. ಅದಕ್ಕಾಗಿ ಹರ್ಭಜನ್ ಮುಂಬೈ ಆಟಗಾರನೊಬ್ಬನನ್ನು ಸೂಚಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾಗೂ ದೇಶಿ ಕ್ರಿಕೆಟ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದ 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಯಾದವ್ ಫೋಟೋ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಇಂತಹದ್ದೇ ಒಂದು ಫೋಟೋವನ್ನು ಟ್ವೀಟ್ ಮಾಡಿರುವ ಹರ್ಭಜನ್, " ದೇಶಿ ಕ್ರಿಕೆಟ್ನಲ್ಲಿ ಪ್ರತಿ ಬಾರಿಯೂ ಉತ್ತಮ ರನ್ಗಳಿಸುತ್ತಿರುವ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡಕ್ಕೆ ಏಕೆ ಆಯ್ಕೆ ಮಾಡುತ್ತಿಲ್ಲವೋ ನನಗೆ ಗೊತ್ತಿಲ್ಲ. ಆದರೆ, ನೀನು ಹೀಗೆ ನಿನ್ನ ಕಠಿಣ ಪರಿಶ್ರಮ ಮುಂದುವರಿಸು, ನಿನಗೂ ಸಮಯ ಕೂಡಿ ಬರುತ್ತದೆ" ಎಂದು ಟ್ವೀಟ್ ಮಾಡಿದ್ದರು.
-
Don’t know why he doesn’t get picked for india after scoring runs heavily in domestic cricket @surya_14kumar keep working hard.. your time will come pic.twitter.com/XO6xXtaAxC
— Harbhajan Turbanator (@harbhajan_singh) September 29, 2019 " class="align-text-top noRightClick twitterSection" data="
">Don’t know why he doesn’t get picked for india after scoring runs heavily in domestic cricket @surya_14kumar keep working hard.. your time will come pic.twitter.com/XO6xXtaAxC
— Harbhajan Turbanator (@harbhajan_singh) September 29, 2019Don’t know why he doesn’t get picked for india after scoring runs heavily in domestic cricket @surya_14kumar keep working hard.. your time will come pic.twitter.com/XO6xXtaAxC
— Harbhajan Turbanator (@harbhajan_singh) September 29, 2019
ಭಜ್ಜಿ ಈ ಟ್ವೀಟ್ ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಯುವರಾಜ್, "ನಾನು ನಿನಗೆ ಹೇಳಿಲ್ವಾ, ಅವರಿಗೆ(ಟೀಮ್ ಇಂಡಿಯಾ) 4ನೇ ಕ್ರಮಾಂಕ ಬೇಕಿಲ್ಲ, ಏಕೆಂದರೆ ಮೇಲಿನ ಕ್ರಮಾಂಕ ತುಂಬ ಬಲಿಷ್ಠವಾಗಿದೆ" ಎಂದು ವ್ಯಂಗ್ಯಾತ್ಮಕವಾಗಿ ಉತ್ತರಿಸಿದ್ದಾರೆ.
ಸೂರ್ಯ ಕುಮಾರ್ ಯಾದವ್ ಮೊನ್ನೆಯಷ್ಟೇ ಛತ್ತೀಸ್ಗಢದ ವಿರುದ್ಧ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇವಲ 31 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 81 ರನ್ಗಳಿಸಿದ್ದರು.
-
Yaar I told you ! They don’t need a no 4 top order is very strong 😄
— yuvraj singh (@YUVSTRONG12) September 30, 2019 " class="align-text-top noRightClick twitterSection" data="
">Yaar I told you ! They don’t need a no 4 top order is very strong 😄
— yuvraj singh (@YUVSTRONG12) September 30, 2019Yaar I told you ! They don’t need a no 4 top order is very strong 😄
— yuvraj singh (@YUVSTRONG12) September 30, 2019