ಮುಂಬೈ : 2019ರ ವಿಶ್ವಕಪ್ ತಂಡದಿಂದ ಅಂಬಾಟಿ ರಾಯುಡು ಅವರನ್ನು ತಂಡದಿಂದ ಹೊರಗಿಟ್ಟ ನಿರ್ಧಾರದಿಂದ ಆತನಿಗೆ ಅನ್ಯಾಯವಾಗಿದೆ ಎಂದು ತಾವು ಭಾವಿಸುವುದಾಗಿ ಭಾರತ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
2019ರ ಏಕದಿನ ವಿಶ್ವಕಪ್ಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಿಂದ ರಾಯುಡು ಅವರನ್ನು ತಂಡದಿಂದ ಹೊರಗಿಟ್ಟು, ತಮಿಳುನಾಡಿನ ವಿಜಯ್ ಶಂಕರ್ ಅವರನ್ನು 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡಲಾಗಿತ್ತು. ಇದು ಭಾರತದ ಕ್ರಿಕೆಟ್ ವಲಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್, ನೀವು ರಾಯುಡು ಅವರನ್ನು ಎಷ್ಟು ಹೊಗಳಿದ್ರೂ ಅದು ಕಡಿಮೆಯೇ.. ವಿಶ್ವಕಪ್ ತಂಡ ಆಯ್ಕೆ ಮಾಡಿದ ಸಂದರ್ಭದಲ್ಲಿ ಅವರಿಗೆ ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ.
ಅವರು ಖಂಡಿತವಾಗಿ ಆ ತಂಡದಲ್ಲಿ ಇರಬೇಕಿತ್ತು. ಆದರೆ, ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ. ವಯಸ್ಸು ಒಂದು ಕಡೆಯಾದ್ರೆ ಅವರ ಪ್ರತಿಭೆಯನ್ನು ಕೂಡ ಗಮನಿಸಬೇಕಾದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ 13ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ 48 ಎಸೆತಗಳಲ್ಲಿ 71 ರನ್ ಸಿಡಿಸಿ ಸಿಎಸ್ಕೆ 163 ರನ್ಗಳ ಗುರಿ ಬೆನ್ನಟ್ಟಲು ರಾಯುಡು ನೆರವಾಗಿದ್ದರು. ಮೊದಲ ಪಂದ್ಯದ ವಿಜಯದ ಬಗ್ಗೆ ಮಾತನಾಡಿರುವ ಅವರು, ನಾವು ಎರಡು ವರ್ಷಗಳ ಹಿಂದೆ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮಣಿಸಿದ್ದೆವು.
ಈ ಬಾರಿಯೂ ಅದೇ ನಡೆದಿದೆ. ನಮ್ಮ ತಂಡಕ್ಕೆ ಇದು ಒಳ್ಳೆಯ ಮುನ್ಸೂಚನೆಯಾಗಿದೆ. ಈ ಆವೃತ್ತಿಯಲ್ಲೂ ಮತ್ತೊಮ್ಮೆ ಅತ್ಯುತ್ತಮವಾಗಿ ಟೂರ್ನಿ ಮುಗಿಸಲಿದ್ದೇವೆ ಎಂಬ ನಂಬಿಕೆ ಇದೆ ಎಂದಿದ್ದಾರೆ.