ದುಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿವಿಧ ಪ್ರಾಂಚೈಸಿಗಳಿಗೆ ಸ್ಟಾರ್ ಪ್ಲೇಯರ್ಸ್ ಅನುಪಸ್ಥಿತಿ ಕಾಡಲು ಶುರುವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಇದೀಗ ಮತ್ತೋಬ್ಬ ಪ್ಲೇಯರ್ ಹೊರಬಿದ್ದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ವೈಯಕ್ತಿಕ ಕಾರಣ ನೀಡಿ ತಂಡದಿಂದ ಸುರೇಶ್ ರೈನಾ ಹೊರಬಂದಿದ್ದರು. ಇದರ ಬೆನ್ನಲ್ಲೇ ಇದೀಗ ತಂಡದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವೈಯಕ್ತಿಕ ಕಾರಣ ನೀಡಿ ಟೂರ್ನಿಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಎಸ್ಕೆ ತಂಡಕ್ಕೆ ಮತ್ತೊಂದು ಹೊಡೆತ... 13ನೇ ಆವೃತ್ತಿ ಐಪಿಎಲ್ನಿಂದ ಭಜ್ಜಿ ಹೊರಕ್ಕೆ!?
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಮ್ಮ ಅಲಭ್ಯತೆ ಕುರಿತು ಮಾಹಿತಿ ನೀಡಿರುವ ಹರ್ಭಜನ್ ಸಿಂಗ್, ತಾವು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ತಂಡದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ. ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡದೊಂದಿಗೆ ದುಬೈಗೆ ಪ್ರಯಾಣ ಮಾಡದೇ ಭಾರತದಲ್ಲೇ ಉಳಿದುಕೊಂಡಿದ್ದರು. ಜೊತೆಗೆ ಚೆನ್ನೈನಲ್ಲಿ ಆಯೋಜನೆ ಮಾಡಿದ್ದ 5 ದಿನಗಳ ಶಿಬಿರದಿಂದಲೂ ಅವರು ಹೊರಗುಳಿದಿದ್ದರು.
ಸಿಎಸ್ಕೆ ತಂಡದ ಕೆಲ ಪ್ಲೇಯರ್ಸ್ಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ತಂಡ ಮತ್ತೊಮ್ಮೆ ಕ್ವಾರಂಟೈನ್ಗೊಳಗಾಗಿತ್ತು. ಇದೀಗ ಅವರ ವರದಿ ನೆಗೆಟಿವ್ ಕಾಣಿಸಿಕೊಂಡಿದ್ದರಿಂದ ಇಂದಿನಿಂದ ತಂಡ ಅಭ್ಯಾಸದಲ್ಲಿ ಭಾಗಿಯಾಗಲಿದೆ. ಪ್ರಾಂಚೈಸಿ ಇದೀಗ ಹರ್ಭಜನ್ ಬದಲಿಗೆ ಬೇರೆ ಆಟಗಾರನ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.